ಸಾರ್ವಜನಿಕರ ಎದುರೇ ಮುಸ್ಲಿಂ ಯುವತಿಯ ಮದುವೆಯಾದ ಹಿಂದೂ ಯುವಕನ ಕೊಲೆ

ಹೈದರಾಬಾದ್‌: ಹೈದರಾಬಾದ್‌ನ ಸರೂರ್‌ನಗರ ತಹಸೀಲ್ದಾರ್ ಕಚೇರಿಯ ಹೊರಗೆ ಬುಧವಾರ ಯುವಕನೊಬ್ಬನನ್ನು ಮುಸ್ಲಿಂ ಪತ್ನಿಯ ಕುಟುಂಬದವರು ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಬುಧವಾರ ರಾತ್ರಿ ಸರೂರ್‌ನಗರ ತಹಸೀಲ್ದಾರ್ ಕಚೇರಿಯಲ್ಲಿ ಮರ್ರೆಡ್‌ಪಲ್ಲಿ ನಿವಾಸಿ 25 ವರ್ಷದ ಬಿಲ್ಲಾಪುರಂ ನಾಗರಾಜು ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದವರು ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ವರದಿಯ ಪ್ರಕಾರ, ಸಿಕಂದರಾಬಾದ್‌ನ ಜನಪ್ರಿಯ ಕಾರ್ ಶೋರೂಮ್‌ನಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜ್ ಅವರು 23 ವರ್ಷದ ಸೈಯದ್ ಅಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿಯನ್ನು ಜನವರಿ 31 ರಂದು ವಿವಾಹವಾಗಿದ್ದರು. ಅವರಿಬ್ಬರೂ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ನಾಗರಾಜು ಮತ್ತು ಸುಲ್ತಾನಾ ಇಬ್ಬರ ಕುಟುಂಬಸ್ಥರು ಅಂತರ್ ಧರ್ಮೀಯ ವಿವಾಹಕ್ಕೆ ಒಪ್ಪದೇ ವಿರೋಧಿಸಿದ್ದರು. ಆದರೆ, ತಮ್ಮ ಕುಟುಂಬದ ವಿರುದ್ಧವಾಗಿ, ದಂಪತಿ ಎರಡು ತಿಂಗಳ ಹಿಂದೆ ಹಳೆಯ ನಗರದ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದರು.
ಬುಧವಾರ ರಾತ್ರಿ ದಂಪತಿ ನಾಗರಾಜು ಅವರ ದ್ವಿಚಕ್ರವಾಹನದಲ್ಲಿ ಸರೂರ್‌ ನಗರದ ಕಡೆಗೆ ಹೋಗುತ್ತಿದ್ದರು. ಸರೂರನಗರದ ಮಂಡಲ ಕಂದಾಯ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿಯೊಬ್ಬ ನಾಗರಾಜ ಅವರನ್ನು ತಡೆದು ಕಬ್ಬಿಣದ ರಾಡ್‌ನಿಂದ ನಾಗರಾಜ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕರ ಮಧ್ಯೆಯೇ ನಾಗರಾಜುಗೆ ಚಾಕುವಿನಿಂದ ಇರಿದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಪಲ್ಲವಿ ಗಾಯಗೊಂಡಿದ್ದಾಳೆ.
ಸ್ಥಳದಲ್ಲಿದ್ದ ಹಲವರು ಘಟನೆಯನ್ನು ಸೆರೆ ಹಿಡಿದಿದ್ದಾರೆ. ಜನರು ಬರುವಷ್ಟರಲ್ಲಿ ಕೊಲೆ ಮಾಡಿದವರು ಅಲ್ಲಿಂದ ಪರಾರಿಯಾಗಿದ್ದಾರೆ.

ಓದಿರಿ :-   ಪ್ರಧಾನಿ ಮೋದಿ ಭೇಟಿ: ವರದಿಗಾರರ "ಕ್ಯಾರೆಕ್ಟರ್ ಸರ್ಟಿಫಿಕೇಟ್" ಕೇಳಿದ ಪೊಲೀಸರು..! ವ್ಯಾಪಕ ಟೀಕೆ ನಂತರ ಆದೇಶ ವಾಪಸ್

ಬೇರೆ ಬೇರೆ ಧರ್ಮಕ್ಕೆ ಸೇರಿದವರಾದ್ದರಿಂದ ಬಾಲಕಿಯ ಮನೆಯವರು ನಾಗರಾಜ್‌ನನ್ನು ಕೊಂದಿದ್ದಾರೆ ಎಂದು ನಾಗರಾಜ್ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ನಾಗರಾಜ್ ಅವರ ಸಂಬಂಧಿಕರು ಅವರ ಪತ್ನಿಯ ಕುಟುಂಬ ನಾಗರಾಜ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಯನ್ನೂ ನಡೆಸಿದರು.ಸ್ಥಳಕ್ಕೆ ಸರೂರನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಏತನ್ಮಧ್ಯೆ, ತೆಲಂಗಾಣದ ಬಿಜೆಪಿ ನಾಯಕರು ಸುಲ್ತಾನ ಕುಟುಂಬದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಹತ್ಯೆಯ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಬಂಧಿಸಬೇಕು ಎಂದು ಕರೆ ನೀಡಿದ್ದಾರೆ.
ಇದು ಕುಟುಂಬದ ಸದಸ್ಯರೇ ಅಥವಾ ಕೆಲವು ಧಾರ್ಮಿಕ ಗುಂಪುಗಳು ಕುಟುಂಬಕ್ಕೆ ಸಲಹೆ ನೀಡಿವೆಯೇ? ಕೆಲವು ಗುಂಪು ಅವರಿಗೆ ಆರ್ಥಿಕ ಸಹಾಯದ ಭರವಸೆ ನೀಡಿದೆಯೇ? ಈ ಹತ್ಯೆಯ ಬಗ್ಗೆ ಪೂರ್ಣ ಪ್ರಮಾಣದ ತನಿಖೆಯಾಗಬೇಕು’ ಎಂದು ರಾಜಾ ಸಿಂಗ್ ಆಗ್ರಹಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು, ಈ ಪ್ರಕರಣವು ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ದೆಹಲಿಯಲ್ಲಿ ಕೊಲೆಯಾದ ಹಿಂದೂ ಹುಡುಗ ಅಂಕಿತ್ ಸಕ್ಸೇನಾ ಪ್ರಕರಣದ ಮರು ಚಾಲನೆಯಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.
ಹಿಂದೂ ಪತ್ನಿಯ ಮುಸ್ಲಿಂ ಪತಿಯನ್ನು ಆಕೆಯ ಕುಟುಂಬದವರು ಕೊಂದಿದ್ದರೆ, ಈಗ ಏನಾಗುತ್ತಿತ್ತು ಎಂಬುದು ನಮಗೆ ತಿಳಿದಿದೆ! ಕಾಂಗ್ರೆಸ್, ಎಎಪಿ, ಟಿಎಂಸಿ, ಎಸ್‌ಪಿ ಇಸ್ಲಾಮೋಫೋಬಿಯಾ ಎಂದು ಆರೋಪಿಸಿ ವಿಶ್ವಸಂಸ್ಥೆಯನ್ನು ತಲುಪಿರುತ್ತಿದ್ದವು. ಆದರೆ ಹೈದರಾಬಾದಿನಲ್ಲಿ ಹಿಂದೂ ಹತ್ಯೆಯಾದಾಗಿನಿಂದ ಜಾತ್ಯತೀತವಾದಿಗಳು ಗಪ್‌ಚುಪ್‌ ಆಗಿದ್ದಾರೆ ಪೂನವಾಲಾ ಟ್ವೀಟ್ ಮಾಡಿದ್ದಾರೆ.
ಘಟನೆಯ ನಂತರ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇವರಿಬ್ಬರ ಪ್ರೇಮ ವಿವಾಹವೇ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಸಂಘರ್ಷಕ್ಕೆ ಮಿಲಿಟರಿ ಪರಿಹಾರವಲ್ಲ, ಮಾತುಕತೆ-ರಾಜತಾಂತ್ರಿಕತೆಯೇ ಬೇಕು : ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್‌ಕೈಗೆ ಪ್ರಧಾನಿ ಮೋದಿ ಸಲಹೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement