ಮಧ್ಯಪ್ರದೇಶದ ನೂರ್‌ ಜಹಾನ್ ತಳಿಯ ಒಂದು ಮಾವಿನ ಹಣ್ಣಿನ ತೂಕ 4 ಕಿಲೋ…! ಪ್ರತಿ ಹಣ್ಣಿಗೆ ₹ 2,000 ರೂ.ವರೆಗೆ ದರ…!

ಇಂದೋರ್: ಮಾವಿನ ಹಣ್ಣುಗಳು ಸಾಮಾನ್ಯವಾಗಿ ೨೦೦ರಿಂದ 300 ಗ್ರಾಂ ತೂಕವಿರುತ್ತವೆ. ಕರಿ ಈಶಾಡ್‌ನಂತಹ ಮಾವಿನ ಹಣ್ಣುಗಳು ಕೇಜಿ ವರೆಗೆ ತೂಗುತ್ತವೆ. ಆದರೆ, ಮಧ್ಯ ಪ್ರದೇಶದ ಕದ್ದಿವಾಡ ಪ್ರದೇಶದಲ್ಲಿ ಬೆಳೆಯುವ ವಿಶೇಷ ತಳಿಯ ಮಾವಿನ ಹಣ್ಣಿನ ಗರಿಷ್ಠ ತೂಕ 4 ಕೆಜಿ ವರೆಗೆ ಇರುತ್ತದೆ.
ಅತ್ಯಂತ ರುಚಿಯಾಗಿರುವ ಈ ಮಾವಿನ ಹಣ್ಣಿನ ಬೆಲೆಯೂ ಕೂಡ ಅಷ್ಟೇ ದುಬಾರಿಯಾಗಿದೆ. ಒಂದು ಹಣ್ಣಿನ ಬೆಲೆ 1 ಸಾವಿರ ರೂ.ನಿಂದ 2 ಸಾವಿರ ರೂ.ವರೆಗೆ ಇರುತ್ತದೆ.
ಆಫ್ಘಾನಿಸ್ತಾನ ಮೂಲದ ನೂರ್‍ಜಹಾನ್ ಎಂಬ ತಳಿಯ ಈ ಮಾವಿನ ಹಣ್ಣು ಒಂದು ಅಡಿ ಉದ್ದದ ವರೆಗೆ ಬೆಳೆಯುತ್ತದೆ, 4 ಕೆಜಿ ತೂಕವಿರುತ್ತದೆ. ಮರದಲ್ಲಿ ಹೂ ಬಿಡುವಿಕೆ ಜನವರಿಯಿಂದ ಫೆಬ್ರವರಿ ನಡುವೆ ಪ್ರಾರಂಭವಾಗುತ್ತದೆ. ಜೂನ್ ಮೊದಲ ವಾರದವರೆಗೆ ಹಣ್ಣು ಬಲಿತು ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತದೆ.ಪ್ರತಿವರ್ಷ ಈ ಹಣ್ಣು 1 ಸಾವಿರದಿಂದ 2 ಸಾವಿರ ರೂ.ವರೆಗೆ ಮಾರಾಟವಾಗುತ್ತದೆ. ಈ ಹಣ್ಣನ್ನು ಸವಿಯಲು ಮಾವು ಪ್ರಿಯರು ಒಂದು ತಿಂಗಳ ಮುಂಚೆಯೇ ಬುಕ್ಕಿಂಗ್ ಮಾಡಿರುತ್ತಾರೆ.

ಗುಜರಾತ್‌ಗೆ ಸಮೀಪದಲ್ಲಿರುವ ಬುಡಕಟ್ಟು ಪ್ರಾಬಲ್ಯದ ಅಲಿರಾಜಪುರ ಜಿಲ್ಲೆಯ ಕತ್ತಿವಾಡ ಪ್ರದೇಶದಲ್ಲಿ ಕೆಲವೇ ಮರಗಳು ಕಂಡುಬರುತ್ತವೆ.
ಈ ವರ್ಷ, ನೂರ್ಜಹಾನ್ ತಳಿಯ ಮೂರು ಮರಗಳಲ್ಲಿ ಕನಿಷ್ಠ 250 ಮಾವು ಬೆಳೆಯುತ್ತಿದೆ. ಈ ಹಣ್ಣುಗಳು ಜೂನ್ 15 ರೊಳಗೆ ಮಾರಾಟಕ್ಕೆ ಸಿದ್ಧವಾಗುತ್ತವೆ ಮತ್ತು ಪ್ರತಿ ಮಾವಿನ ಗರಿಷ್ಠ ತೂಕ 4 ಕೆಜಿ ದಾಟಬಹುದು” ಎಂದು ಇಂದೋರ್‌ನಿಂದ 250 ಕಿಮೀ ದೂರದಲ್ಲಿರುವ ಕತ್ತಿವಾಡದ ಈ ತಳಿಯ ಬೆಳೆಗಾರ ಶಿವರಾಜ್ ಸಿಂಗ್ ಜಾಧವ್ ಹೇಳಿದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಕಳೆದ ವರ್ಷ, ಈ ಮಾವಿನ ಸರಾಸರಿ ತೂಕವು ಪ್ರತಿ ಹಣ್ಣಿಗೆ ಸುಮಾರು 3.80 ಕೆ.ಜಿ. ಇತ್ತು. ಆದರೆ, ಈ ವರ್ಷ ಹವಾಮಾನ ವೈಪರೀತ್ಯದಿಂದ ಈ ಮರಗಳಲ್ಲಿ ಹಲವು ಹೂವುಗಳು ಹಾಳಾಗಿ ಉದುರಿವೆ ಎಂದರು.
ಈ ಮಾವಿನ ಹಣ್ಣನ್ನು ಪ್ರತಿ ಹಣ್ಣಿಗೆ ₹ 1,000 ರಿಂದ ₹ 2,000 ರವರೆಗೆ ಮಾರಾಟ ಮಾಡಲು ಯೋಜಿಸಲಾಗಿದೆ ಎಂದು ಜಾಧವ್ ಹೇಳಿದರು, ಆದರೆ ಕಳೆದ ವರ್ಷ ಇದು ₹ 500 ರಿಂದ ₹ 1,500 ರ ವರೆಗೆ ಮಾರಾಟವಾಗಿತ್ತು.
ವಿವಿಧ ತಳಿಯ ರಸಿಕರು ಮುಂಗಡವಾಗಿ ಹಣ್ಣುಗಳನ್ನು ಕಾಯ್ದಿರಿಸಲು ಕರೆ ಮಾಡುತ್ತಿದ್ದಾರೆ, ಆದರೆ ಮಾವು ಮಾರಾಟಕ್ಕೆ ಸಿದ್ಧವಾಗಲು ಕನಿಷ್ಠ ಒಂದೂವರೆ ತಿಂಗಳಾದರೂ ಬೇಕಾಗುತ್ತದೆ ಎಂದು ಅವರು ಹೇಳಿದರು. ತೋಟಗಾರಿಕಾ ತಜ್ಞರ ಪ್ರಕಾರ, ನೂರ್ಜಹಾನ್ ಮಾವಿನ ಮರಗಳಲ್ಲಿ ಹೂವುಗಳು ಸಾಮಾನ್ಯವಾಗಿ ಜನವರಿ-ಫೆಬ್ರವರಿಯಲ್ಲಿ ಪ್ರಾರಂಭವಾಗುತ್ತವೆ ಮತ್ತು ಹಣ್ಣುಗಳು ಜೂನ್ ಮೊದಲ ಹದಿನೈದು ದಿನಗಳಲ್ಲಿ ಮಾರಾಟಕ್ಕೆ ಸಿದ್ಧವಾಗುತ್ತವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement