ಉದ್ವಿಗ್ನತೆ ಮಧ್ಯೆಯೇ ಕಾಶಿ ವಿಶ್ವನಾಥ -ಜ್ಞಾನವಪಿ ಮಸೀದಿ ಸಂಕೀರ್ಣದಲ್ಲಿ ವೀಡಿಯೋಗ್ರಾಫಿ ಸರ್ವೆ ಆರಂಭ

ನವದೆಹಲಿ: ವಾರಣಾಸಿಯ ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಸಂಕೀರ್ಣದಲ್ಲಿರುವ ಮಾ ಶೃಂಗಾರ ಗೌರಿ ಸ್ಥಳದ ವಿಡಿಯೋಗ್ರಫಿ ಸಮೀಕ್ಷೆ ಮತ್ತು ಪರಿಶೀಲನೆ ಶುಕ್ರವಾರ ಆರಂಭವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲವರು ಘೋಷಣೆಗಳನ್ನು ಕೂಗಲಾರಂಭಿಸಿದರು.
ಇಷ್ಟು ಮಾತ್ರವಲ್ಲದೆ ಕಮಿಷನರ್ ಹಾಗೂ ನ್ಯಾಯಾಲಯದ ನಿಯೋಜಿತ ತಂಡ ಸ್ಥಳಕ್ಕೆ ಆಗಮಿಸಿದಾಗ ರಸ್ತೆಯಲ್ಲಿ ನೂಕುನುಗ್ಗಲು ಉಂಟಾಯಿತು.
ಒಂದು ಕಡೆಯಿಂದ ಘೋಷಣೆ ಕೂಗಿದ ನಂತರ ಇನ್ನೊಂದು ಕಡೆಯಿಂದಲೂ ಘೋಷಣೆಗಳು ಮೊಳಗಿದವು. ಆಗಲೇ ಸ್ಥಳದಲ್ಲಿ ಬೀಡುಬಿಟ್ಟಿದ್ದ ಪೊಲೀಸ್ ಸಿಬ್ಬಂದಿ ಜನರನ್ನು ಸಮಾಧಾನಪಡಿಸಿ ರಸ್ತೆಯಿಂದ ಹಿಂದಕ್ಕೆ ತಳ್ಳಿದರು. ತೊಂದರೆಯನ್ನು ನಿರೀಕ್ಷಿಸಿದ ಸ್ಥಳೀಯ ಆಡಳಿತವು ಈಗಾಗಲೇ ಜ್ಞಾನವಪಿ ಮಸೀದಿ ಆವರಣದ ಹೊರಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತು.

ಅಂಜುಮನ್ ಇನ್ಸಂಜರಿಯಾ ಮಸೀದಿ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜ್ಞಾನವಪಿ ಕ್ಯಾಂಪಸ್‌ಗೆ ವೀಡಿಯೋಗ್ರಫಿ ಮತ್ತು ಸಮೀಕ್ಷೆಗೆ ಬರುವ ತಂಡವನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿದರು. ಆದರೆ, ನಂತರ ಸಮಿತಿಯ ವಕೀಲರು ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಬೇಕಾಗುತ್ತದೆ ಮತ್ತು ಅದನ್ನು ವಿರೋಧಿಸಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮೀಕ್ಷಾ ತಂಡದಲ್ಲಿ ಅಡ್ವೊಕೇಟ್ ಕಮಿಷನರ್ ಅಜಯ್ ಕುಮಾರ್ ಸೇರಿದಂತೆ 30 ಮಂದಿ ಇದ್ದಾರೆ. ಸಮೀಕ್ಷೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಾಸ್ತವವಾಗಿ, ಪ್ರದೇಶವನ್ನುಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ.
ಸಮೀಕ್ಷಾ ತಂಡದ ಆಗಮನದ ಮೊದಲು, ಗೇಟ್ ಸಂಖ್ಯೆ 4 ರ ಹೊರಗಿನ ಬ್ಯಾರಿಕೇಡ್‌ನ ಪಕ್ಕದಲ್ಲಿ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಪ್ರಾರ್ಥನೆ ಮಾಡಲು ಪ್ರಾರಂಭಿಸಿದರು.. ಮಹಿಳೆ ನಮಾಜ್ ಮಾಡಿದ ನಂತರ ಪೊಲೀಸರು ಮಹಿಳೆಯನ್ನು ಅಲ್ಲಿಂದ ಎತ್ತಿಕೊಂಡು ಕರೆದೊಯ್ದರು.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

ಸಮೀಕ್ಷಾ ತಂಡವು ಮೇ 10 ರಂದು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಆವರಣದಲ್ಲಿರುವ ಶೃಂಗಾರ್ ಗೌರಿ ಮತ್ತು ದೇವ ವಿಗ್ರಹಗಳ ವೀಡಿಯೊಗ್ರಫಿ ಮತ್ತು ಸಮೀಕ್ಷೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯವನ್ನು ಪೊಲೀಸರು ಒದಗಿಸಿದ ಸುರಕ್ಷಿತ ಸ್ಥಳದಲ್ಲಿ ಇಡಲಾಗುತ್ತದೆ.
ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ದೇವರ ದೈನಂದಿನ ಪೂಜೆ ಮತ್ತು ಆಚರಣೆಗಳಿಗೆ ಅನುಮತಿ ಕೋರಿ ದೆಹಲಿ ಮೂಲದ ಲಕ್ಷ್ಮಿ ದೇವಿ, ಸೀತಾ ಸಾಹು, ರಾಖಿ ಸಿಂಗ್ ಮತ್ತು ಇತರರು ಏಪ್ರಿಲ್ 2021 ರಲ್ಲಿ ಸಲ್ಲಿಸಿದ ಮನವಿಯ ಆಧಾರದ ಮೇಲೆ ಸಮೀಕ್ಷೆ ನಡೆಸಲು ಸ್ಥಳೀಯ ನ್ಯಾಯಾಲಯದ ನಿರ್ದೇಶನ ಬಂದಿದೆ. ಈ ದೇವಾಲಯವು ಜ್ಞಾನವಪಿ ಮಸೀದಿಯ ಹೊರ ಗೋಡೆಯ ಮೇಲೆ ನೆಲೆಗೊಂಡಿದೆ ಎಂದು ಹೇಳಲಾಗಿದೆ.

ಇಲ್ಲಿನ ಶೃಂಗಾರ ಗೌರಿ ದೇವಸ್ಥಾನದ ವಿಷಯವಾಗಿ ವಾರಾಣಸಿಯ ಸಿವಿಲ್ ನ್ಯಾಯಾಲಯವು ಏ.26ರಂದು ಕಾಶಿ ವಿಶ್ವನಾಥ-ಜ್ಞಾನವಪಿ ಮಸೀದಿ ಸಂಕೀರ್ಣದಲ್ಲಿ ಪರಿಶೀಲನೆ ನಡೆಸಲು ಮತ್ತು ಚಿತ್ರೀಕರಣಕ್ಕೆ ಆದೇಶಿಸಿದೆ. ಆದರೆ, ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿಯು ನ್ಯಾಯಾಲಯದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ನ್ಯಾಯಾಲಯವು ಎರಡೂ ಪಕ್ಷಗಳ ಸಮ್ಮುಖದಲ್ಲಿ ಶೃಂಗಾರ್ ಗೌರಿ ಸೈಟ್‌ಗೆ ಭೇಟಿ ನೀಡುವಂತೆ ಅಡ್ವೊಕೇಟ್ ಕಮಿಷನರ್‌ಗೆ ಸೂಚಿಸಿದೆ. ಸ್ಥಿತಿಯ ವರದಿಯನ್ನು ಸಿದ್ಧಪಡಿಸಲು ಮತ್ತು ಮುಂದಿನ ವಿಚಾರಣೆಯ ದಿನಾಂಕವಾದ ಮೇ 10 ರಂದು ನ್ಯಾಯಾಲಯದ ಮುಂದೆ ಇದನ್ನು ಸಲ್ಲಿಸಲು ಸೂಚಿಸಲಾಗಿದೆ.
ಅಡ್ವೊಕೇಟ್ ಕಮಿಷನರ್ ಅವರ ಪರಿಶೀಲನೆಯ ವೀಡಿಯೊಗ್ರಫಿಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಇದಕ್ಕೆ ಪೋಲೀಸ್ ಪಡೆಯಿಂದ ಸಹಾಯವನ್ನು ಪಡೆಯುವಂತೆ ನ್ಯಾಯಾಲಯವು ಸೂಚಿಸಿದೆ.
ವರದಿಗಳ ಪ್ರಕಾರ, ಹಿಂದೆ ಈ ಸ್ಥಳದಲ್ಲಿ ದೇವಸ್ಥಾನವಿತ್ತು ಎಂದು ಹಿಂದೂ ಪಕ್ಷಗಳು ನಂಬುತ್ತವೆ. ಅದರೊಳಗೆ ಬಜರಂಗ ಬಲಿಯ ವಿಗ್ರಹವಿದೆ, ಜೊತೆಗೆ ಗಣೇಶನ ವಿಗ್ರಹವಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಜ್ಞಾನವಪಿ ಮಸೀದಿಯ ನೆಲಮಾಳಿಗೆಯಲ್ಲಿ ನಿಜವಾದ ಶಿವಲಿಂಗವನ್ನು ಮರೆಮಾಡಲಾಗಿದೆ ಎಂದು ಹೇಳಲಾಗುತ್ತದೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement