ಅಫ್ಘಾನಿಸ್ತಾನ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಬುರ್ಕಾ ಕಡ್ಡಾಯ ಮಾಡಿದ ತಾಲಿಬಾನ್‌

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರವು ಮಹಿಳೆಯರಿಗೆ ಕಠಿಣ ನಿರ್ಬಂಧನೆ ವಿಧಿಸಿದೆ. ಮಹಿಳೆಯರು ಹಾಗೂ ಯುವತಿಯರು ಸಾರ್ವಜನಿಕ ಸ್ಥಳ ಸೇರಿದಂತೆ ದಿನನಿತ್ಯದ ಜೀವನದಲ್ಲಿ ಕಡ್ಡಾಯವಾಗಿ ಬುರ್ಖಾ ಧರಿಸಲು ಕಠಿಣ ಆದೇಶ ಜಾರಿಗೆ ತಂದಿದೆ.ಪ್ರತಿ ಮಹಿಳೆಯರು ಕಡ್ಡಾಯವಾಗಿ ಮೈ ಸಂಪೂರಣವಾಗಿ ಮುಚ್ಚಿಕೊಳ್ಳುವ ಬುರ್ಖಾ ಧರಿಸಬೇಕು ಎಂದು ಸೂಚಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಡಳಿತ ಮಹಿಳೆಯರಿಗೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಶಾಲೆಗಳಲ್ಲಿ ಬುರ್ಖಾ ಧರಿಸಿಕೊಂಡು ಬರಬೇಕು, ಕಾಲೇಜುಗಳಲ್ಲಿ ಸಹಪಾಠಿಯಾದರೂ ಅಂತಹ ಪುರಷನ ಜೊತೆಗೆ ಯುವತಿಯರು ಓಡಾಡಬಾರದು, ಮಾರುಕಟ್ಟೆಗಳಲ್ಲಿ ಒಂಟೆ ಮಹಿಳೆ ಹಾಗೂ ಯುವತಿಯರು ಬುರ್ಖಾ ಇಲ್ಲದೆ ಹೊರಗೆ ಬರಬಾರದು, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಉದ್ಯೋಗಕ್ಕೆ ಹೊರಗೆ ಹೊಗುವ ಮಹಿಳೆಯರು ಹಾಗೂ ನಗರಗಳಲ್ಲಿ ಒಂಟಿಯಾಗಿ ಬಂದರೆ ಬುರ್ಖಾ ಹಾಕಿಕೊಂಡೇ ಇರಬೇಕೆಂದು ತಾಲಿಬಾನ್ ಸೂಚಿಸಿದೆ.

ಶನಿವಾರ ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕ ಮತ್ತು ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡಜಾದ ಅಫ್ಘಾನಿಸ್ತಾನದ ಮಹಿಳೆಯರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕಾದರೆ ಕಟ್ಟುನಿಟ್ಟಾದ ವಸ್ತ್ರಸಂಹಿತೆ ಹಾಗೂ ಬುರ್ಖಾ ಕಡ್ಡಾಯ ಎಂದು ಘೋಷಿಸಿದರು. ತಲೆಯಿಂದ ಕಾಲ ಕೆಳಗಡೆ ವರಿಗೂ ಬುರ್ಖಾ ಧರಿಸಬೇಕು ಏಕೆಂದರೆ ಅದು ಸಾಂಪ್ರದಾಯಿಕ ಮತ್ತು ಗೌರವಾನ್ವಿತ ಎಂದು ಕಾಬೂಲ್‌ನಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.
ಮಹ್ರಮ್ ಅಲ್ಲದ (ವಯಸ್ಕ ನಿಕಟ ಪುರುಷ ಸಂಬಂಧಿಗಳು) ಪುರುಷರನ್ನು ಭೇಟಿಯಾದಾಗ ಪ್ರಚೋದನೆಯನ್ನು ತಪ್ಪಿಸಲು ಷರಿಯಾ ನಿರ್ದೇಶನಗಳ ಪ್ರಕಾರ ಮಹಿಳೆಯರು ತಮ್ಮ ಕಣ್ಣುಗಳನ್ನು ಹೊರತುಪಡಿಸಿ ಮುಖವನ್ನು ಮುಚ್ಚಬೇಕು, ಹೆಣ್ಣು ಮಕ್ಕಳ ಶಿಕ್ಷಣವು ಇಸ್ಲಾಮಿಕ್ ತತ್ವಗಳ ಪ್ರಕಾರವಾಗಿರಬೇಕು ಸೇರಿದಂತೆ ಅನೇಕ ನಿರ್ಬಂಧನೆಗಳನ್ನು ಅಫ್ಘಾನಿಸ್ತಾನ ದೇಶದ ಮಹಿಳೆಯರಿಗೆ ಹೇರಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement