ಶುಲ್ಕ ಪಾವತಿಸಿಲ್ಲವೆಂದು 35 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ಶಾಲೆ…!

ಬರೇಲಿ (ಉತ್ತರ ಪ್ರದೇಶ): ಶಾಲಾ ಶುಲ್ಕ ಪಾವತಿಸದ ಕಾರಣ ಸುಮಾರು 35 ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಹಾರ್ಟ್‌ಮ್ಯಾನ್ ಶಾಲೆಯ ಪೋಷಕರ ಸಂಘವು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಲು ನಿರ್ಧರಿಸಿದೆ.
ವರದಿಗಳ ಪ್ರಕಾರ, ಶುಲ್ಕ ಪಾವತಿಸದ ಕಾರಣ ಶಾಲಾ ಆಡಳಿತ ಮಂಡಳಿ ಶನಿವಾರ ಮಕ್ಕಳನ್ನು ಕೊಠಡಿಯಲ್ಲಿ ಕೂಡಿಹಾಕಿತ್ತು. ಶಾಲಾ ಸಮಯ ಮುಗಿದು ಮಕ್ಕಳನ್ನು ಕರೆದುಕೊಂಡು ಬರಲು ಪೋಷಕರು ಬಂದಾಗ ಮಕ್ಕಳನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿರುವುದು ಗೊತ್ತಾಗಿದೆ.

ಈ ಬಗ್ಗೆ ಪೋಷಕರು ಗಲಾಟೆ ಮಾಡಿದರು.ಆದರೆ ಶಾಲೆ ಸಿಬ್ಬಂದಿ ಮಕ್ಕಳನ್ನು ಹೋಗಲು ಬಿಡದಿದ್ದಾಗ ಅವರು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರ ಮಧ್ಯಪ್ರವೇಶದ ನಂತರ ಮಕ್ಕಳನ್ನು ಪ್ರಾಂಶುಪಾಲರ ಕಚೇರಿಯಿಂದ ಹೊರಗೆ ಕರೆತರಲಾಯಿತು. ಮಕ್ಕಳು ತುಂಬಾ ಉದ್ವಿಗ್ನರಾಗಿದ್ದರು ಮತ್ತು ಅವರಲ್ಲಿ ಕೆಲವರು ಅಳುತ್ತಿದ್ದರು ಎಂದು ವರದಿಗಳು ತಿಳಿಸಿವೆ.ಘಟನೆಗೆ ಸಂಬಂಧಿಸಿದ ಕರೆಗಳಿಗೆ ಆಡಳಿತ ಮಂಡಳಿ ಸ್ಪಂದಿಸಿಲ್ಲ.

ಪಾಲಕರ ಸಂಘದ ಅಧ್ಯಕ್ಷ ಅಂಕುರ್ ಸಕ್ಸೇನಾ ಅವರು ಘಟನೆಯ ಬಗ್ಗೆ ತಿಳಿಸಿದ್ದು, ಭಾನುವಾರದ ಸಭೆಯಲ್ಲಿ ಚರ್ಚಿಸಿ ನಂತರ ಔಪಚಾರಿಕವಾಗಿ ದೂರು ನೀಡಲಾಗುವುದು ಎಂದು ಹೇಳಿದ್ದಾರೆ. ಶಾಲೆಯ ವಿರುದ್ಧ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಇಜ್ಜತ್‌ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಓದಿರಿ :-   ತೊರೆಯಿರಿ ಅಥವಾ ಸಾವನ್ನು ಎದುರಿಸಿ: ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಹಾಕಿದ ಭಯೋತ್ಪಾದಕರ ಗುಂಪು..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ