ಅತ್ಯಂತ ಅಮಾನುಷ ಹಾಗೂ ಭಯಾನಕ ಕೃತ್ಯ ಪಾಕಿಸ್ತಾನದ ಗುಜರಾತ್‌ನ ಚಕ್ ಕಮಲಾ ಗ್ರಾಮದಲ್ಲಿ ನಡೆದಿದೆ. ಬಾಲಕಿಯೊಬ್ಬಳ ಶವವನ್ನು ಸಮಾಧಿಯಿಂದ ಹೊರಕ್ಕೆ ತೆಗೆದು ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ನಡೆದ ವರದಿಯಾಗಿದೆ.
ಸುಮಾರು 17 ಮಂದಿ ಸೇರಿ ಮೃತ ಬಾಲಕಿಯ ಶವದ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಬಾಲಕಿಯ ಸಂಬಂಧಿಕರು ಶವವನ್ನು ತಮ್ಮ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಹೂಳಿಹೋಗಿದ್ದಾರೆ. ಮರುದಿನ ಬೆಳಿಗ್ಗೆ ಸ್ಮಶಾನಕ್ಕೆ ಭೇಟಿ ನೀಡಿದಾಗ ಮೃತದೇಹ ಸಮಾಧಿಯಿಂದ ಹೊರಕ್ಕೆ ಬಿದ್ದಿರುವುದು ಕಂಡಿದೆ. ಸ್ಮಶಾನದಿಂದ ಸುಮಾರು 200 ಚದರ ಅಡಿ ದೂರದಲ್ಲಿ ಮೃತದೇಹ ಬಿದ್ದಿತ್ತು. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಬಳಿಕ ಸುಮಾರು 17 ಮಂದಿ ಸೇರಿ ಈಕೆಯ ಮೇಲೆ ಗ್ಯಾಂಗ್‌ರೇಪ್ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್‌ಎನ್) ಉಪ ಪ್ರಧಾನ ಕಾರ್ಯದರ್ಶಿ ಅತಾವುಲ್ಲಾ ತರಾರ್ ಮೇ 6 ರಂದು ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ, ಅವರು ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ. ಘಟನೆಗೆ ಸಂಬಂಧಿಸಿದ 17 ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹೊರಹೊಮ್ಮಿದ ವರದಿಯ ಪ್ರಕಾರ, ಮಾನಸಿಕ ಮತ್ತು ದೈಹಿಕವಾಗಿ ವಿಕಲಾಂಗ ಯುವತಿಯು ಬುಧವಾರ, ಮೇ 4ರಂದು ನಿಧನರಾಗಿದ್ದಳು.
ನಿಮ್ಮ ಕಾಮೆಂಟ್ ಬರೆಯಿರಿ