ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಕಚೇರಿ ಮುಂದೆ ಪರಿಷತ್ ಸದಸ್ಯ ಮರಿತಿಬ್ಬೇಗೌಡ‌ ಧರಣಿ

ಬೆಂಗಳೂರು: ಪದವಿ ಕಾಲೇಜುಗಳ ಸಹಾಯಕ ಹಾಗೂ ಸಹ ಪ್ರಾಧ್ಯಾಪಕರ ನಿಯೋಜನೆ ನಿಯೋಜನೆ ಏಕಾಏಕಿ ರದ್ದು ಆದೇಶ‌ ವಾಪಸ್ ಪಡೆಯಬೇಕು ಹಾಗೂ 900 ಉಪನ್ಯಾಸಕರ ಅವೈಜ್ಞಾನಿಕ ವರ್ಗಾವಣೆ ಕೈಬಿಡಬೇಕು ಎಂದು ಒತ್ತಾಯಿಸಿ ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಕಚೇರಿ ಮುಂಭಾಗದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ‌ ಧರಣಿ ನಡೆಸಿದ್ದಾರೆ.
ಈ ಸಂಬಂಧಿಸಿದಂತೆ ಮೂರು ದಿನಗಳ ಒಳಗಾಗಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಶಾಸಕರ ಸಭೆ ಕರೆದು ಚರ್ಚಿಸಿ ನಿಯೋಜನೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಪದವಿ ತರಗತಿಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಹಾಗೂ ಮೌಲ್ಯಮಾಪನ ಪ್ರಾರಂಭವಾಗಿದೆ. ಏಳೆಂಟು ವರ್ಷಗಳಿಂದ ನಿಯೋಜನೆ ಮೇಲೆ ಇದ್ದ 1000 ಹೆಚ್ಚು ಮಂದಿ ಪ್ರಾಧ್ಯಾಪಕರ ನಿಯೋಜನೆ ರದ್ದು ಮಾಡಿದ್ದಾರೆ. ಮಧ್ಯ ರಾತ್ರಿಯಲ್ಲಿ ಈ‌ ಆದೇಶ ಮಾಡಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಆಗಲಿದೆ ಎಂದು ಅವರು ಹೇಳಿದರು.

ನಿಯೋಜನೆಗೊಂಡವರು ಬಿಡುಗಡೆಗೊಂಡ ಬಳಿಕ ಇವರ ಸ್ಥಾನದಲ್ಲಿ ನಿಯೋಜನೆಗೊಂಡ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಾರೆ. ನಿಯೋಜನೆ ರದ್ದು ಮಾಡಿದ್ದರಿಂದ ಅವರ ಜಾಗಕ್ಕೆ ಮೂರು ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕಾಗುತ್ತದೆ. ನಿಯೋಜನೆ ರದ್ದು ಮಾಡಿ‌ ಮೂಲ ಸ್ಥಾನಕ್ಕೆ ಕಳುಹಿಸುವ ಬಗ್ಗೆ ವಿರೋಧ ಇಲ್ಲ, ಆದರೆ, ಹತ್ತಾರು ವರ್ಷಗಳಿಂದ ನಿಯೋಜನೆಗೊಂಡಿದ್ದ ಅಷ್ಟು ಜನರನ್ನು ಒಮ್ಮೆಲೆ ರದ್ದು ಮಾಡುವುದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ನಮ್ಮ ವಿರೋಧವಿದೆ ಎಂದರು.
ಏಪ್ರಿಲ್‌ 25 ರಿಂದ 28ರ ವರೆಗೆ 900 ಸಹಾಯಕ ಪ್ರಾಧ್ಯಾಪಕರ ವರ್ಗಾವಣೆ ನಡೆದಿದೆ. ಆ ವರ್ಗಾವಣೆ ಅವೈಜ್ಞಾನಿಕವಾಗಿ ನಡೆದಿದೆ. ಕೆಲವರು ಫೇಕ್ ಸರ್ಟಿಫಿಕೇಟ್ ಕೊಟ್ಟು ಬೆಂಗಳೂರು, ಮಂಗಳೂರು, ಮೈಸೂರಿಗೆ ವರ್ಗಾವಣೆಗೊಂಡಿದ್ದಾರೆ. ಸತ್ಯಾಸತ್ಯತೆಯನ್ನು ಈ ಸಂದರ್ಭದಲ್ಲಿ ಪರಿಶೀಲನೆ ಮಾಡಿಲ್ಲ. ಇದು ಕೂಡಾ ಅವೈಜ್ಞಾನಿಕ, ಈ‌ ಆದೇಶ ಹಿಂಪಡೆಯಬೇಕು ಎಂದು‌ ಆಗ್ರಹಿಸಿದರು.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

ಬಿಜೆಪಿ ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಣ್ಣ‌ ಹಾಗೂ ಅರುಣ್ ಶಹಾಪುರ ಆಗಮಿಸಿ ಮನವೊಲಿಸಲು ಪ್ರಯತ್ನಿಸಿದರು. ನಿಯೋಜನೆ ರದ್ದು ಆದೇಶ ವಾಪಸ್ ಪಡೆದು,‌ ವಲಯವಾರು ಮುಕ್ತ‌ ವಿಶೇಷ ಅದಾಲತ್ ಮೂಲಕ ಸ್ಥಳ ನಿಯೋಜನೆಗೆ ಸರ್ಕಾರಕ್ಕೆ ಮನವಿ ಮಾಡಿರುವುದನ್ನು ಅವರು ಗಮನಕ್ಕೆ ತಂದರು. ಆದರೂ ಮರಿತಿಬ್ಬೆ ಗೌಡ ಅವರು ಧರಣಿ ಮುಂದುವರಿಸಿದರು.
ಈ ಪ್ರತಿಭಟನೆಗೆ ಕಾಂಗ್ರೆಸ್ ಕೂಡಾ ಬೆಂಬಲ ಸೂಚಿಸಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ನಿಯೋಜನೆ ಏಕಾಏಕಿ ರದ್ದು ಮಾಡಿರುವುದು ಹಾಗೂ ಉಪನ್ಯಾಸಕರ ವರ್ಗಾವಣೆ ಎರಡೂ ಅವೈಜ್ಞಾನಿಕವಾಗಿದೆ. ಸಚಿವರ ಗಮನಕ್ಕೆ ತರುವ ನಿಟ್ಟಿನಲ್ಲಿ ಪರಿಷತ್ ಸದಸ್ಯ ಮರಿತಿಬ್ಬೇಗೌಡರ ಧರಣಿಗೆ ಬೆಂಬಲ ನೀಡಿದ್ದೇವೆ. ಏಪ್ರಿಲ್ ಮೇ ತಿಂಗಳಲ್ಲಿ ಕಾಲೇಜು ಪರೀಕ್ಷೆ, ಮೌಲ್ಯಮಾಪನ ನಡೆಯುತ್ತಿದೆ ಈ ಸಂದರ್ಭದಲ್ಲಿ ಈ ಕ್ರಮ ಸರಿಯಲ್ಲ ಎಂದರು.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement