ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವು ದೇವಾಲಯಗಳಲ್ಲಿ ಧ್ವನಿವರ್ಧಕದಲ್ಲಿ ಮೊಳಗಿದ ಸುಪ್ರಭಾತ

ಬೆಂಗಳೂರು: “ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿ ಶ್ರೀರಾಮ ಸೇನೆಯು ಈಗ ಮಂದಿರಗಳಲ್ಲಿ ಹುನಾಮನ ಚಾಲೀಸಾಹ ಹಾಗೂ ಭಕ್ತಿಗೀತೆಗಳನ್ನು ಧ್ವನಿವರ್ಕದಲ್ಲಿ ಹಾಕಲು ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಹಲವಾರು ದೇವಸ್ಥಾನಗಳಲ್ಲಿ ಸೋಮವಾರ ( ಮೇ 9) ಬೆಳಿಗ್ಗೆ 5 ಗಂಟೆಗೆ ಸ್ತೋತ್ರ, ಹುಮನ ಚಾಲೀಸಾ ಹಾಗೂ ಭಕ್ತಿಗಳನ್ನು ಪ್ಲೇ ಮಾಡಲಾಯಿತು.
ಮೈಸೂರಿನ ಹನುಮಾನ್ ದೇವಸ್ಥಾನದಲ್ಲಿ ಜಮಾಯಿಸಿದ ಜನರ ಗುಂಪಿನಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಧ್ವನಿವರ್ಧಕದಲ್ಲಿ ಭಕ್ತಿಗೀತೆಗಳನ್ನು ಪ್ಲೇ ಮಾಡಿದರು. ವಿವಿಧ ಜಿಲ್ಲೆಗಳ ಹಲವಾರು ದೇವಸ್ಥಾನಗಳಲ್ಲಿ ಮುಂಜಾನೆಯೇ ಧ್ವನಿ ವರ್ಧಕದಲ್ಲಿ ಭಜನೆಗಳನ್ನು ಹಾಕಲಾಯಿತು.

ಆಜಾನ್‌ಗೆ ಪ್ರತಿಯಾಗಿ ಹಿಂದೂ ಸಂಘಟನೆಗಳು ಇಂದಿನಿಂದ ರಾಜ್ಯದ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಮಂತ್ರ ಪಠಣೆ, ಭಕ್ತಿಗೀತೆ, ಓಂಕಾರ ನಾದ, ಸುಪ್ರಭಾತಗಳನ್ನು ಮೊಳಗಿಸುವ ಆಂದೋಲನವನ್ನು ಶ್ರೀರಾಮಸೇನೆ ಸೇರಿದಂತೆ ಹಲವಾರು ಹಿಂದೂಪರ ಸಂಘಟನೆಗಳು ಆರಂಭಿಸಿದ್ದು, ಆಜಾನ್-ಹನುಮಾನ್ ಚಾಲೀಸ್ ಸಂಘರ್ಷ ಇದೀಗ ತಾರಕಕ್ಕೇರಿದೆ.
ಸುಪ್ರೀಂಕೋರ್ಟ್‌ನ ಆದೇಶವಿದ್ದರೂ ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವುಗೊಳಿಸದ ಬಿಜೆಪಿ ಸರ್ಕಾರದ ನಿಲುವು ಖಂಡಿಸಿ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳು ಇಂದಿನಿಂದ ಆಜಾನ್‌ಗೆ ಪ್ರತಿಯಾಗಿ ಹಿಂದೂ ದೇವಾಲಯಗಳಲ್ಲಿ ಧ್ವನಿವರ್ಧಕ ಮೂಲಕ ಹನುಮಾನ್ ಚಾಲೀಸ್, ಭಜನೆ, ಮಂತ್ರ ಪಠಣೆಗಳನ್ನು ನಡೆಸಿರುವುದು ಪರಿಸ್ಥಿತಿ ಬಿಗಡಾಯಿಸುವಂತಾಗಿದೆ.

ಇಂದು ಬೆಳಿಗ್ಗೆಯೇ ಆಜಾನ್‌ಗೆ ಪ್ರತಿಯಾಗಿ ರಾಜ್ಯಾದ್ಯಂತ ಹಲವು ದೇವಸ್ಥಾನಗಳಲ್ಲಿ ಸುಪ್ರಭಾತ, ಸ್ತೋತ್ರ ಪಠಣ, ಹನುಮಾನ್ ಚಾಲೀಸಾವನ್ನು ಧ್ವನಿ ವರ್ಧಕದಲ್ಲಿ ಹಾಕಲಾಗಿದ್ದು, ಈ ವೇಳೆ ಹಲವೆಡೆ ಪೊಲೀಸರ ಜೊತೆ ವಾಗ್ವಾದ, ಸಂಘರ್ಷಗಳು ನಡೆದಿವೆ. ರಾಜಧಾನಿ ಬೆಂಗಳೂರು ಸೇರಿದಂತೆ ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ಆಜಾನ್‌ಗೆ ಪ್ರತಿಯಾಗಿ ಧ್ವನಿ ವರ್ಧಕದಲ್ಲಿ ಸ್ತೋತ್ರ ಪಠಣ ಮಾಡಲಾಗಿದೆ.
ಬೆಂಗಳೂರು ಸೇರಿದಂತೆ ಕೆಲವೆಡೆ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಪ್ರಕರಣಗಳು ವರದಿಯಾಗಿವೆ. ಹಲವು ಮುಜರಾಯಿ ದೇವಸ್ಥಾನಗಳಿಗೆ ಪೊಲೀಸರು ಧ್ವನಿವರ್ಧಕ ಅಳವಡಿಸದಂತೆ ಎಚ್ಚರಿಕೆ ನೀಡಿದ್ದರು. ಹಾಗಾಗಿ ಕೆಲವು ದೇವಸ್ಥಾನಗಳು ಧ್ವನಿವರ್ಧಕ ಹಾಕಿಲ್ಲ, ಆದರೂ ರಾಜ್ಯದ ಎಲ್ಲ ಕಡೆ ಬಹುತೇಕ ದೇವಸ್ಥಾನಗಳಲ್ಲಿ ಇದು ನಡೆದಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಆಜಾನ್ ವಿರುದ್ಧ ಸಮರ ಸಾರಿರುವ ಹಿಂದೂ ಪರ ಸಂಘಟನೆಗಳು ಹಿಂದೂ ದೇವಾಲಯಗಳಲ್ಲಿ ಇಂದಿನಿಂದ ವೇದ ಮಂತ್ರ ಪಠಣೆಯನ್ನು ಆರಂಭಿಸಿದ್ದು, ಮೈಸೂರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಇಂದು ಬೆಳಿಗ್ಗೆ ಹನುಮಾನ್ ಚಾಲೀಸಾ ಮತ್ತು ಶ್ರೀರಾಮ ಭಜನೆ ಮೂಲಕ ಶ್ರೀರಾಮಸೇನೆಯ ಮುಖಂಡ ಪ್ರಮೋದ ಮುತಾಲಿಕ್ ಈ ಆಂದೋಲನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೋಮವಾರ ಸಂಜೆಯೊಳಗೆ ತೆರವುಗೊಳಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ರಾಜಧಾನಿ ಬೆಂಗಳೂರು, ಬೆಳಗಾವಿ, ಕಲ್ಬುರ್ಗಿ, ಧಾರವಾಡ, ಯಾದಗಿರಿ, ಮೈಸೂರು, ತುಮಕೂರು, ಹಾಸನ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳ ಹಿಂದೂ ದೇವಾಲಯಗಳಲ್ಲಿ ಇಂದು ಬೆಳಿಗ್ಗೆ ೫ ಗಂಟೆಗೆ ಆಜಾನ್‌ಗೆ ಪ್ರತಿಯಾಗಿ ಧ್ವನಿವರ್ಧಕಗಳಲ್ಲಿ ಭಕ್ತಿಗೀತೆ, ಸುಪ್ರಭಾತಗಳನ್ನು ಹಾಕಲಾಯಿತು. ನಂತರ ಧ್ವನಿವರ್ಧಕಗಳನ್ನು ನಿಲ್ಲಿಸಲಾಗಿದೆ. ಇದು ಇನ್ನು ಮುಂದೆ ನಿತ್ಯವೂ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಬೆಂಗಳೂರಿನ ನೀಲಸಂದ್ರದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹನುಮಾನ್ ಚಾಲೀಸಾ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯ ನೂರಾರು ದೇವಾಲಯಗಳಿಗೆ ಖಾಕಿ ಕಾವಲು ಹಾಕಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆಯಾದರೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಶಬ್ದ ಮಾಲಿನ್ಯ ಉಂಟು ಮಾಡುವ ಯಾವುದೇ ಚಟುವಟಿಕೆಗಳನ್ನು ನಿಯಂತ್ರಿಸಲಾಗುವುದು. ನ್ಯಾಯಾಲಯದ ಆದೇಶದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಗೌರವಿಸಬೇಕು ಎಂದು ಅವರು ಹೇಳಿದರು. ಕಾನೂನನ್ನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

.ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿಲುವು ಸ್ಪಷ್ಟಪಡಿಸುವಂತೆ ನಾಸಿರ್ ಹುಸೇನ್, ಯು.ಟಿ.ಖಾದರ್, ಎನ್.ಎ.ಹ್ಯಾರೀಸ್ ಅವರು ಭೇಟಿ ಮಾಡಿದ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ವಿಫಲವಾಗಿದೆ” ಎಂದು ಸೇನೆಯು ಪ್ರತಿಭಟಿಸಲಿದೆ ಎಂದು ಮುತಾಲಿಕ್ ಭಾನುವಾರ ಹೇಳಿದ್ದರು. ಕೆಲವು ಮಸೀದಿಗಳಿಗೆ ಬೆಳಿಗ್ಗೆ 6 ಗಂಟೆಯ ಮೊದಲು ಆಜಾನ್‌ಗಾಗಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡಿರುವುದರಿಂದ, ಶ್ರೀರಾಮ ಸೇನೆಯು ಕರ್ನಾಟಕದಾದ್ಯಂತ 1,000 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಹನುಮಾನ್ ಚಾಲೀಸಾ, ಸುಪ್ರಭಾತ ಅಥವಾ ಇತರ ಭಕ್ತಿಗೀತೆಗಳನ್ನು ನುಡಿಸಲಿದೆ ಎಂದು ಅವರು ಹೇಳಿದ್ದರು. ಅದರಂತೆಯೇ ಹಲವಾರು ದೇವಸ್ಥಾನಗಳಲ್ಲಿ ನುಡಿಸಲಾಗಿದೆ. ಹಾಗೂ ಇದು ಮಂಗಳವಾರದಿಂದ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಪ್ರಮೋದ ಮುತಾಲಿಕ್‌ ಹೇಳಿದ್ದಾರೆ.

ಧಾರ್ಮಿಕ ಸ್ಥಳಗಳಿಂದ ಅನಧಿಕೃತ ಧ್ವನಿವರ್ಧಕಗಳ ವಿರುದ್ಧ ಕ್ರಮಕೈಗೊಳ್ಳುವ ಮತ್ತು ಅನುಮತಿ ಮಿತಿಯಲ್ಲಿ ಧ್ವನಿ ನಿಗದಿಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೋರಿದ ಧೈರ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೋರಿಸಬೇಕು ಎಂದು ಒತ್ತಾಯಿಸಿದರು.
ಧಾರ್ಮಿಕ ಸ್ಥಳಗಳಿಂದ ಸುಮಾರು 54,000 ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಮತ್ತು 60,000 ಕ್ಕೂ ಹೆಚ್ಚು ಧ್ವನಿವರ್ಧಕಗಳ ಪರಿಮಾಣವನ್ನು ಉತ್ತರ ಪ್ರದೇಶದಾದ್ಯಂತ ಅನುಮತಿಸುವ ಮಿತಿಗಳಿಗೆ ಹೊಂದಿಸಲಾಗಿದೆ, ರಾಜ್ಯ ಸರ್ಕಾರವು ರಾಜ್ಯಾದ್ಯಂತ ಈ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುತಾಲಿಕ್‌ ಒತ್ತಾಯಿಸಿದ್ದಾರೆ. ಅಲ್ಲದೆ, “ಕರ್ನಾಟಕದಾದ್ಯಂತ 1,000 ಕ್ಕೂ ಹೆಚ್ಚು ದೇವಾಲಯಗಳನ್ನು ಸಂಪರ್ಕಿಸಿದ್ದೇವೆ. ದೇವಾಲಯದ ಅರ್ಚಕರು, ಧರ್ಮದರ್ಶಿಗಳು ಮತ್ತು ವ್ಯವಸ್ಥಾಪನಾ ಸಮಿತಿಗಳು ನಾಳೆಯಿಂದ (ಮೇ 9 ರಂದು ಬೆಳಿಗ್ಗೆ 5 ಗಂಟೆಗೆ ಹನುಮಾನ್ ಚಾಲೀಸಾ, ಸುಪ್ರಭಾತ, ಓಂಕಾರ ಅಥವಾ ಭಕ್ತಿಗೀತೆಗಳು) ನುಡಿಸಲು ಒಪ್ಪಿಕೊಂಡಿವೆ. ಉತ್ತಮ ಪ್ರತಿಕ್ರಿಯೆ ಇದೆ ಮುತಾಲಿಕ್ ಪ್ರತಿಪಾದಿಸಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement