ವಿದ್ಯುತ್ ಕೈಕೊಟ್ಟು ಯಡವಟ್ಟು : ತನ್ನ ಸಹೋದರಿಯ ವರನಿಗೆ ಹಾರಹಾಕಿ ಮದುವೆಯಾದ ವಧು..!

ಉಜ್ಜಯಿನಿ (ಮಧ್ಯಪ್ರದೇಶ) : ಇಬ್ಬರು ಸಹೋದರಿಯರು ಇಬ್ಬರು ವರಗಳ ಜೊತೆ ಮದುವೆಯಾಗಬೇಕಿದ್ದ ಸಮಾರಂಭದಲ್ಲಿ ವಿದ್ಯುತ್ ಕೈಕೊಟ್ಟು ದೊಡ್ಡ ಯಡವಟ್ಟಾಗಿದೆ. ವಿದ್ಯುತ್‌ ಇಲ್ಲದೆ ಕತ್ತಲೆಯಲ್ಲಿಯೇ ಹಾರ ಬದಲಾಯಿಸುವಾಗ ವಧು-ವರರೇ ಅದಲುಬದಲಾಗಿದ್ದಾರೆ…!
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇಬ್ಬರು ಸಹೋದರಿಯರ ವಿವಾಹ ನಡೆಯುತ್ತಿದ್ದಾಗ ವಿದ್ಯುತ್ ವ್ಯತ್ಯಯದಿಂದ ಗೊಂದಲ ಉಂಟಾಗಿ ಕತ್ತಲೆಯಲ್ಲಿ, ವಧು-ವರರು ಅದಲು ಬದಲಾಗಿ ತಮಗೆ ನಿಗದಿಯಾದ ವರನಿಗೆ ಹಾರ ಹಾಕದೆ ವಧುಗಳಿಬ್ಬರೂ ಬೇರೆ ವರನಿಗೆ ಮಾಲೆ ಹಾಕಿದ ವಿದ್ಯಮಾನ ನಡೆದಿದೆ.

ಭಾನುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ರಮೇಶಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಅವರು ವಿವಿಧ ಕುಟುಂಬಗಳ ಇಬ್ಬರು ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಬೇಕಿತ್ತು.
ವಧುಗಳು ಮುಸುಕು ಹಾಕಿಕೊಂಡಿದ್ದರಿಂದ ಮತ್ತು ಬೆಳಕಿಲ್ಲದ ಕಾರಣ, ಎರಡೂ ವಧುಗಳ ಉಡುಗೆ ಒಂದೇ ಆಗಿದ್ದರಿಂದ ಎಲ್ಲವೂ ಅದಲು ಬದಲಾಯಿತು. ಹಾಗಾಗಿ ಮದುವೆಯ ಶಾಸ್ತ್ರೋಕ್ತವಾಗಿ ನಡೆದರೂ ಗೊಂದಲದ ಬಗ್ಗೆ ಯಾರಿಗೂ ತಿಳಿಯಲಿಲ್ಲ. ಮದುವೆಯ ಬದಲಾದ’ ವಧುಗಳೊಂದಿಗೆ ಅಗ್ನಿಗೆ ಸುತ್ತು ಹಾಕಿದರು.

ನಂತರ ವರರು ತಮ್ಮ ವಧುಗಳನ್ನು ತಮ್ಮ ಮನೆಗಳಿಗೆ ಕರೆದೊಯ್ದಾಗ ಅದಲುಬದಲಾದ ಅರಿವಾಗಿದೆ. ಸ್ವಲ್ಪ ಸಮಯದ ವಾದ ವಿವಾದದ ನಂತರ ನಂತರ ಇತ್ಯರ್ಥಕ್ಕೆ ಬಂತು. ಮರುದಿನ ಮತ್ತೊಮ್ಮೆ ಸಮಾರಂಭವನ್ನು ಮಾಡಲು ವಧುವರರಿಗೆ ಸೂಚಿಸಲಾಯಿತು.
ಏತನ್ಮಧ್ಯೆ, ಇತ್ತೀಚಿನ ದಿನಗಳಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಭಾರತದ ಅನೇಕ ನಗರಗಳು ವಿದ್ಯುತ್ ನಿಲುಗಡೆಗೆ ಸಾಕ್ಷಿಯಾಗುತ್ತಿವೆ. ಭಾರತದ ಹೆಚ್ಚಿನ ವಿದ್ಯುತ್ ಬಳಕೆ ಕಲ್ಲಿದ್ದಲು ಆಧಾರಿತವಾಗಿದೆ.
ಗರಿಷ್ಠ ವಿದ್ಯುತ್ ಬೇಡಿಕೆಯು ಏಪ್ರಿಲ್ ಕೊನೆಯ ವಾರದಲ್ಲಿ 201 ಗಿಗಾವ್ಯಾಟ್‌ಗಳಿಗಿಂತ ಹೆಚ್ಚಿನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು. ಮೇ-ಜೂನ್‌ನಲ್ಲಿ ಬೇಡಿಕೆ 220 ಗಿಗಾವ್ಯಾಟ್‌ಗೆ ತಲುಪುವ ನಿರೀಕ್ಷೆಯಿದೆ.

ಓದಿರಿ :-   ತೊರೆಯಿರಿ ಅಥವಾ ಸಾವನ್ನು ಎದುರಿಸಿ: ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಹಾಕಿದ ಭಯೋತ್ಪಾದಕರ ಗುಂಪು..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ