ಮೈಸೂರು ಮೃಗಾಲಯದಲ್ಲಿ 3 ಮರಿಗಳಿಗೆ ಜನ್ಮನೀಡಿದ ಬಿಳಿಹುಲಿ

ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಒಂಬತ್ತು ವರ್ಷಗಳ ಬಳಿಕ ಬಿಳಿಹುಲಿಯೊಂದು ಮೂರು ಮರಿಗಳಿಗೆ ಜನ್ಮನೀಡಿದೆ.
ತಾಯಿ ಮತ್ತು ಮೂರು ಮರಿಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು ಮೃಗಾಲಯದ ಹೆಣ್ಣು ಹುಲಿ ತಾರಾ ಹಾಗೂ ಗಂಡು ಹುಲಿ ರಾಕಿ ಜೋಡಿಗೆ ಮೂರು ಮರಿಗಳು ಜನಿಸಿವೆ.
ತಾರಾ ಎಪ್ರಿಲ್‌ 26ರಂದು ಮೂರು ಮರಿಗಳಿಗೆ ಮೃಗಾಲಯದ ಹುಲಿ ಬೋನಿನಲ್ಲಿ ಜನ್ಮ ನೀಡಿದ್ದು, ಆರೈಕೆ ಮಾಡುತ್ತಿದೆ. ಗರ್ಭಿಣಿಯಾಗಿದ್ದ ಹುಲಿಯ ಚಲನವಲನ ಸ್ಥಿತಿಗತಿ ತಿಳಿಯಲು ಬೋನಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.

ಎರಡು ವಾರಗಳಿಂದ ತಾಯಿ ಮತ್ತು ಮರಿಗಳ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಆರೈಕೆಯಲ್ಲಿ ತಾಯಿ ಹುಲಿಯಿಂದ ಸಹಜ ವರ್ತನೆ ದೃಢಪಟ್ಟ ನಂತರ ಹುಲಿಮರಿಗಳ ಜನನವನ್ನು ಮೃಗಾಲಯ ದೃಢಪಡಿಸಿದೆ.
9 ವರ್ಷಗಳ ನಂತರ ಮೃಗಾಲಯದಲ್ಲಿ ಹುಲಿಮರಿಗಳ ಜನನವಾಗಿದೆ. ಈ ಮರಿಗಳ ಜನನದಿಂದ ಮೈಸೂರು ಮೃಗಾಲಯ 9 ಗಂಡು ಹುಲಿ, 7 ಹೆಣ್ಣು ಹುಲಿ ಹಾಗೂ ಮೂರು ಹುಲಿಮರಿಗಳನ್ನು ಹೊಂದಿದಂತಾಗಿದೆ ಎಂದು ತಿಳಿಸಿದ್ದಾರೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement