ನವದೆಹಲಿ: ತಮಗೆ ಮೊಮ್ಮಗಬೇಕೆಂದು ದಂಪತಿ ತಮ್ಮ ಮಗನ ವಿರುದ್ಧವೇ ಮೊಕದ್ದಮೆ ಹೂಡಿರುವ ವಿಲಕ್ಷಣ ಪ್ರಕರಣ ಹರಿದ್ವಾರದಿಂದ ವರದಿಯಾಗಿದೆ..!
ನಮಗೆ ಮೊಮ್ಮಗು ಬೇಕು ಎಂದು ಎಸ್‌ಆರ್ ಪ್ರಸಾದ ಎಂಬವರು ಬುಧವಾರ ಉತ್ತರಾಖಂಡದ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಾಸ್ತವವಾಗಿ, ಅವರು ತಮ್ಮ ಮಗ ಮತ್ತು ಸೊಸೆಯ ವಿರುದ್ಧವೇ ಮೊಕದ್ದಮೆ ಹೂಡುತ್ತಿದ್ದಾರೆ. ತಮ್ಮ ಮಗ ಮತ್ತು ಸೊಸೆ ಒಂದು ವರ್ಷದೊಳಗೆ” ಮೊಮ್ಮಗುವನ್ನು ಕೊಡಬೇಕು ಅಥವಾ ₹ 5 ಕೋಟಿ ಪರಿಹಾರ ನೀಡಬೇಕು ಎಂದು ಅವರು ಕೇಳುತ್ತಿದ್ದಾರೆ ಎಂದು ವರದಿಯಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ತನ್ನ ಮಗನಿಗೆ ಶಿಕ್ಷಣ ನೀಡಿದ ನಂತರ ಮತ್ತು ಅಮೆರಿಕದಲ್ಲಿ ಆತನ ತರಬೇತಿಗೆ ಹಣಕಾಸಿನ ನೆರವು ನೀಡಿದ ನಂತರ ಈಗ ತನ್ನ ಬಳಿ ಹಣವಿಲ್ಲ ಎಂದು ಪ್ರಸಾದ್ ಹೇಳುತ್ತಾರೆ. ಮೊಮ್ಮಕ್ಕಳನ್ನು ಹೊಂದುವ ಭರವಸೆಯಲ್ಲಿ ನಾವು 2016 ರಲ್ಲಿ ಅವರನ್ನು ಮದುವೆ ಮಾಡಿದ್ದೇವೆ. ನಾವು ಹೆಣ್ಣು ಅಥವಾ ಗಂಡು ಎಂದು ಹೇಳುವುದಿಲ್ಲ, ಒಟ್ಟಿನಲ್ಲಿ ನಮಗೆ ಮೊಮ್ಮಕ್ಕಳು ಬೇಕು ಅಷ್ಟೆ”ಎಂದು ಪ್ರಸಾದ್ ಹೇಳಿದ್ದಾರೆ.
ನನ್ನ ಮಗನಿಗೆ ನನ್ನ ಎಲ್ಲ ಹಣವನ್ನು ನೀಡಿದ್ದೇನೆ, ಅವನಿಗೆ ಅಮೆರಿಕದಲ್ಲಿ ತರಬೇತಿ ನೀಡಿದ್ದೇನೆ, ಈಗ ನನ್ನ ಬಳಿ ಹಣವಿಲ್ಲ, ನಾವು ಮನೆ ಕಟ್ಟಲು ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದೇವೆ, ನಾವು ಆರ್ಥಿಕವಾಗಿ ಮತ್ತು ವೈಯಕ್ತಿಕವಾಗಿ ತೊಂದರೆಯಲ್ಲಿದ್ದೇವೆ. ಹೀಗಾಗಿ ನಮ್ಮ ಅರ್ಜಿಯಲ್ಲಿ ನನ್ನ ಮಗ ಮತ್ತು ಸೊಸೆಯಿಂದ ನಾವು ತಲಾ ₹ 2.5 ಕೋಟಿಗೆ ಬೇಡಿಕೆ ಇಟ್ಟಿದ್ದೇವೆ ಎಂದು ಅವರು ಹೇಳಿದರು.
ಈ ಪ್ರಕರಣವು ಸಮಾಜದ ಸತ್ಯವನ್ನು ಬಿಂಬಿಸುತ್ತದೆ ಎಂದು ತಮ್ಮ ಮಗನ ವಿರುದ್ಧ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಸಾದ್ ಅವರ ವಕೀಲರು ಹೇಳುತ್ತಾರೆ. “ನಾವು ನಮ್ಮ ಮಕ್ಕಳಿಗೆ ಹಣ ವ್ಯ ಮಾಡುತ್ತೇವೆ. ಉತ್ತಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ರೂಪಿಸುತ್ತೇವೆ. ಮಕ್ಕಳು ತಮ್ಮ ಪೋಷಕರಿಗೆ ಮೂಲಭೂತ ಆರ್ಥಿಕ ಕಾಳಜಿಯನ್ನು ನೀಡಬೇಕಾಗಿದೆ. ಪೋಷಕರು ಒಂದು ವರ್ಷದೊಳಗೆ ಮೊಮ್ಮಗು ಅಥವಾ ₹ 5 ಕೋಟಿ ಪರಿಹಾರವನ್ನು ಕೋರಿದ್ದಾರೆ ಎಂದು ವಕೀಲ ಎಕೆ ಶ್ರೀವಾಸ್ತವ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ