ಮಹಿಳೆ ಶವ ಬೈಕ್‌ನಲ್ಲಿ ಸಾಗಿಸುತ್ತಿದ್ದಾಗ ಅಪಘಾತ: ಕೊಲೆಯ ರಹಸ್ಯ ಬಯಲು

posted in: ರಾಜ್ಯ | 0

ಬೆಂಗಳೂರು: ಹಣದ ವಿಷಯಕ್ಕೆ ಮಹಿಳೆಯನ್ನು ಕೊಲೆ ಮಾಡಿ, ಮೃತ ದೇಹವನ್ನು ಬೈಕ್‌ನಲ್ಲಿ ರಾಮನಗರದ ಕಡೆಗೆ ಸಾಗಿಸುತ್ತಿದ್ದಾಗ ನಾಲ್ವರು ಮಂಗಳವಾರ ರಾತ್ರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಘಟನೆಯಲ್ಲಿ ನಾಗರಾಜು, ವಿನೋದ ಎಂಬವರು ಗಾಯಗೊಂಡಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣದ ಸ್ನೇಹಿತರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ದುರ್ಗಾ ಆಕೆಯ ಪತಿ ರಘು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಭಿ ಎಂಬಾತನಿಗಾಗಿ ಪತ್ತೆ ನಡೆದಿದೆ. ಸೌಮ್ಯ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುತ್ತರಾಯನಗರದವಳು ಹಾಗೂ ತನ್ನ ಸ್ನೇಹಿತೆ ದುರ್ಗಾ ಮನೆಯಲ್ಲಿ ವಾಸವಿದ್ದಳು. ಇಬ್ಬರು ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದರು. ಈ ಸೌಮ್ಯಾ ದುರ್ಗಾ ಮನೆಯಲ್ಲಿ ಹಣ ಹಾಗೂ ಒಡವೆಗಳನ್ನ ಕಳ್ಳತನಮಾಡಿ ಪರಾರಿಯಾಗಿದ್ದಳು ಎಂದು ಹೇಳಲಾಗಿದೆ. ಆಕೆಯನ್ನು ಹುಡುಕಿ ವಾಪಸ್ ಕರೆದುಕೊಂಡು ಬಂದ ದುರ್ಗಾ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ ದೊಣ್ಣೆಯಿಂದ ಥಳಿಸಿದ್ದಳು. ಸಂಜೆ ಕೊಠಡಿ ಬಾಗಿಲು ತಗೆದು ನೋಡಿದಾಗ ಸೌಮ್ಯ ಮೃತಪಟ್ಟಿದ್ದಳು.

ದುರ್ಗಾ ತನ್ನ ಪತಿ ರಘು ಹಾಗೂ ಸಹೋದರ ನಾಗರಾಜ್ ಗೆ ಈ ಬಗ್ಗೆ ಮಾಹಿತಿ ನೀಡಿದ ನಂತರ ರಘು ತನ್ನ ಸ್ನೇಹಿತರಾದ ಅಭಿ, ವಿನೋದ್ ಅವರನ್ನ ಮನೆಗೆ ಕರೆಸಿ ಮೃತ ದೇಹವನ್ನ ಶ್ರೀರಂಗಪಟ್ಟಣದ ಕಾವೇರಿ ನದಿಗೆ ಎಸೆಯಲು ಯೋಜನೆ ರೂಪಿಸಿದರು. ಯೋಜನೆಯಂತೆ ವಿನೋದ್ ಶ್ವೇತಾ ಶವವನ್ನ ಬೈಕ್ ನಲ್ಲಿ ಕೂರಿಸಿಕೊಂಡು ಹಿಂದೆ ನಾಗರಾಜ್ ಹಿಡಿದುಕೊಂಡು ಹೊರಟಿದ್ದರು. ಇತ್ತ ದುರ್ಗಾ ಹಾಗೂ ರಘು ಒಂದು ಬೈಕ್ ನಲ್ಲಿ ಅಭಿ ಒಂದು ಬೈಕ್ ನಲ್ಲಿ ಹೊರಟಿದ್ದರು. ಆದರೆ ಶವ ಇದ್ದ ಬೈಕ್ ಅಪಘಾತವಾಗಿ ಕೊಲೆ ರಹಸ್ಯ ಬಯಲಾಗಿದೆ.

ಓದಿರಿ :-   ರಾಜ್ಯಸಭೆ ಅಥವಾ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಯಾವುದೇ ಮೈತ್ರಿಯಿಲ್ಲ: ಸಿದ್ದರಾಮಯ್ಯ

ಈ ವೇಳೆ ಪೊಲೀಸರು ಮೃತದೇಹದ ಕುರಿತು ಪ್ರಶ್ನಿಸಿದಾಗ ಬೈಕ್‌ನಿಂದ ಬಿದ್ದು ಸಾವನ್ನಪ್ಪಿರುವುದಾಗಿ ಕಥೆ ಕಟ್ಟಿದ್ದರು. ಪೊಲೀಸರು ಶವವನ್ನು ಆಸ್ಪತ್ರೆಗೆ ರವಾನಿಸುವ ವೇಳೆ ವಿಷಯ ಬಯಲಾಗುತ್ತದೆಯೆಂದು ಗಲಾಟೆ ನಡೆದಿವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಕೊಲೆಗೀಡಾದ ಶ್ವೇತಾಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ರಾಮನಗರ ಬಳಿ ಅಪಘಾತ ಸಂಭವಿಸುವ ವೇಳೆಗೆ ಮಹಿಳೆಯ ಕೊಲೆಯಾಗಿ 12 ತಾಸಾಗಿತ್ತು ಎಂದು ಹೇಳಿದರು. ಅಪಘಾತ ಸಂಭವಿಸಿದ್ದಾಗ ಜತೆಯಲ್ಲಿ ದುರ್ಗಾ ಹಾಗೂ ಆಕೆ ಪತಿ ರಘು, ಚನ್ನಪಟ್ಟಣದಲ್ಲಿ ಸ್ನೇಹಿತರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದರು. ಪೊಲೀಸರು ಪತ್ತೆ ಹೆಚ್ಚಿ ಕರೆ ತರೆತಂದಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ