ಟ್ವಿಟ್ಟರ್ ಒಪ್ಪಂದ ತಡೆಹಿಡಿಯಲಾಗಿದೆ ಎಂದ ಎಲೋನ್ ಮಸ್ಕ್ ..! ಇದು ನಿಜವೋ -ತಮಾಷೆಯೋ ಎಂಬ ಬಗ್ಗೆ ಖಚಿತತೆಯಿಲ್ಲ

ವಾಷಿಂಗ್ಟನ್: ಎಲೋನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸದಿರಬಹುದು. ಆದರೆ ಟೆಸ್ಲಾ ಸಿಇಒ ತನ್ನ ಇತ್ತೀಚಿನ ಟ್ವೀಟ್‌ನಲ್ಲಿ $44 ಶತಕೋಟಿ ಟ್ವಿಟರ್ ಒಪ್ಪಂದವು “ಹೋಲ್ಡ್” ನಲ್ಲಿದೆ ಎಂದು ಹೇಳಿದ್ದಾರೆ.
ಮಸ್ಕ್ ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಅನ್ನು ಕಳೆದ ತಿಂಗಳು $44 ಶತಕೋಟಿಗೆ ಖರೀದಿಸಲು ಮುಂದಾದರು. ಮುಂಬರುವ ತಿಂಗಳುಗಳಲ್ಲಿ ಒಪ್ಪಂದವನ್ನು ಮುಕ್ತಾಯಗೊಳಿಸಲು ಮಸ್ಕ್ ಮತ್ತು ಟ್ವಿಟರ್ ಒಪ್ಪಂದದಲ್ಲಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಅವರು ಮಾಡಿದ ಟ್ವೀಟ್‌ ಈಗ ಒಪ್ಪಂದದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ಟ್ವಿಟ್ಟರ್ ಖರೀದಿಗೆ ಮುಂದಾಗಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿನ ನಕಲಿ ಖಾತೆ (ಸ್ಪ್ಯಾಮ್ ಖಾತೆ) ಗಳಿಗೆ ಸಂಬಂಧಿಸಿದ ವಿವರಗಳು ಬಾಕಿ ಉಳಿದ ಕಾರಣಕ್ಕೆ ಸದ್ಯಕ್ಕೆ ಟ್ವಿಟ್ಟರ್ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಈಗ ಹೇಳಿದ್ದಾರೆ.
ಮಸ್ಕ್‌ ಅವರ ಟ್ವೀಟ್ ಗಂಭೀರವಾಗಿದೆಯೇ ಅಥವಾ ಅವರು ತಮಾಷೆ ಮಾಡುತ್ತಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಮತ್ತು ಅವರು ಕಳೆದ 20 ದಿನಗಳಿಂದ ಟ್ವೀಟ್ ಮಾಡುತ್ತಿರುವ ವಿಧಾನವನ್ನು ಗಮನಿಸಿದರೆ, ಅದು ಯಾವುದೂ ಆಗಿರಬಹುದು.

ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು. ಆದರೆ, `ಸ್ಪ್ಯಾಮ್ ಬಾಟ್ಸ್’ (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ)ಯನ್ನು ಮೊದಲು ತೆರವುಗೊಳಿಸುವಂತೆ ಮಸ್ಕ್ ಹೇಳಿದ್ದರು.
ಮಸ್ಕ್ ಅವರು ಸಾಮಾಜಿಕ ಮಾಧ್ಯಮ `ಟ್ವಿಟರ್’ ಕಂಪನಿಯನ್ನು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.) ಮೊತ್ತಕ್ಕೆ ಖರೀದಿಸಲು ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಹಿಂದಿನಿಂದಲೂ ಟ್ವಿಟರ್‌ಗೆ ಹಲವು ಬದಲಾವಣೆಗಳನ್ನು ಸೂಚಿಸುತ್ತಿರುವ ಮಸ್ಕ್, ವಾಣಿಜ್ಯ ಬಳಕೆ ಮತ್ತು ಸರ್ಕಾರದ ಖಾತೆಗಳಿಗೆ ಟ್ವಿಟರ್ ಶುಲ್ಕ ವಿಧಿಸುವುದಾಗಿ ಪ್ರಕಟಿಸಿದ್ದರು. ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಉಚಿತವಾಗಿಯೇ ಇರಲಿದೆ ಎಂದಿರುವ ಅವರು, ವಾಣಿಜ್ಯ ಮತ್ತು ಸರ್ಕಾರದ ಖಾತೆಗಳಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಬಹುದು ಎಂದು ಹೇಳಿದ್ದರು. ಇದೀಗ ತಾತ್ಕಾಲಿಕ ತಡೆ ಘೋಷಿಸಿದ್ದಾರೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement