ಸ್ಥಳೀಯ ಸಂಸ್ಥೆ ಚುನಾವಣೆ-ಒಬಿಸಿಗಳಿಗೆ ಮೀಸಲಾತಿ ನಿಗದಿಗೆ ಸಮಯ ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಲು ಸರ್ಕಾರದ ಚಿಂತನೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶದ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಾಕಿ ಇರುವ ಕರ್ನಾಟಕದಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ನಿಗದಿಪಡಿಸಲು ಇಲ್ಲಿಯವರೆಗೆ ಇದ್ದ ಮೀಸಲಾತಿಯಂತೆ ಹೋಗಲು ಅವಕಾಶಕ್ಕಾಗಿ ಮನವಿ ಮಾಡಲು ಅಥವಾ ಸಮಯ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲು ಸರ್ಕಾರ ಚಿಂತಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ.
ಸಮಯ ಸಿಗುವ ಭರವಸೆಯನ್ನೂ ಅವರು ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಬಿಬಿಎಂಪಿಗೆ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಸಂಬಂಧಿಸಿದ ಒಂದು ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ, ಎರಡನೆಯದಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯತ ಚುನಾವಣೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಕಾನೂನು ಮತ್ತು ಸಾಂವಿಧಾನಿಕವಾಗಿ ಒಬಿಸಿ ಮೀಸಲಾತಿಯನ್ನು ನೀಡಬೇಕು ಎಂದು ವಿನಂತಿಸಬೇಕಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಯಕ್ಕಾಗಿ ಮನವಿ ಮಾಡುವುದು ಅಥವಾ ಹಳೆಯ ಒಬಿಸಿ ಮೀಸಲಾತಿಗೆ ಹೋಗಲು ಅವಕಾಶಕ್ಕಾಗಿ ಮನವಿ ಮಾಡುವುದು ಸರ್ಕಾರದ ಮುಂದಿರುವ ಆಯ್ಕೆಗಳಾಗಿವೆ ಎಂದು ಹೇಳಿದರು. ನಮಗೆ ಸಮಯ ಸಿಗುವ ಭರವಸೆ ಇದೆ… ನಾವು ಒಬಿಸಿ ಮೀಸಲಾತಿಯೊಂದಿಗೆ ಚುನಾವಣೆಗೆ ಹೋಗಬೇಕು, ಒಂದೋ ಇದುವರೆಗೆ ಇದ್ದ ಮೀಸಲಾತಿಯಿಂದ ಹೋಗಬೇಕು ಅಥವಾ ಹೊಸ ಮೀಸಲಾತಿಗೆ ಸಮಯ ನೀಡಬೇಕು ಎದು ಕೇಳಲು ಚಿಂತನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾರ್ಯಕ್ರಮದ ಬಗ್ಗೆ ಎರಡು ವಾರಗಳಲ್ಲಿ ನೀಡುವಂತೆ ಮಧ್ಯಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ. ಪೀಠವು ತನ್ನ ಆದೇಶ ಮತ್ತು ನಿರ್ದೇಶನಗಳು ಕೇವಲ ಮಧ್ಯಪ್ರದೇಶಕ್ಕೆ ಸೀಮಿತವಾಗಿಲ್ಲ. ಇದನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಆಯಾ ಚುನಾವಣಾ ಆಯೋಗವು ಸಾಂವಿಧಾನಿಕ ಆದೇಶವನ್ನು ಎತ್ತಿಹಿಡಿಯಲು ತಪ್ಪದೆ ಪಾಲಿಸಬೇಕೆಂದು ಸೂಚಿಸಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

2021ರ ಮೇ-ಜೂನ್‌ನಲ್ಲಿ ನಡೆಯಬೇಕಿದ್ದ ಜಿಪಂ ಮತ್ತು ತಾಪಂ ಚುನಾವಣೆಗಳು ನಡೆಯಲಿಲ್ಲ, ಏಕೆಂದರೆ ರಾಜ್ಯ ಸರ್ಕಾರವು ಪಂಚಾಯತ ಕ್ಷೇತ್ರ ಪುನರ್‌ ವಿಂಗಡಣೆ ಮಾಡಲು ಡಿಲಿಮಿಟೇಶನ್ ಆಯೋಗವನ್ನು ರಚಿಸಿತು; ಇದರ ತರುವಾಯ, ಮೂರು ಹಂತದ ಮಾನದಂಡ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿಯನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಿಬಿಎಂಪಿಯಲ್ಲಿ 2020 ರಿಂದ ಚುನಾಯಿತ ಆಡಳಿತ ಮಂಡಳಿಯನ್ನು ಹೊಂದಿಲ್ಲ ಮತ್ತು ಅದರ ಆಡಳಿತಾಧಿಕಾರಿ ಮತ್ತು ಮುಖ್ಯ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ.
ನಗರ ಪೌರ ಸಂಸ್ಥೆಗೆ 2020 ರಲ್ಲಿ ಚುನಾವಣೆಗಳು ನಡೆಯಬೇಕಿತ್ತು, ಆದರೆ ಸರ್ಕಾರವು ಬಬಿಎಂಪಿ (BBMP) ವ್ಯಾಪ್ತಿಯ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243 ಕ್ಕೆ ಹೆಚ್ಚಿಸಲು ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಡಿಸೆಂಬರ್ 2020 ರಲ್ಲಿ, ಸುಪ್ರೀಂಕೋರ್ಟ್‌ ಚುನಾವಣೆಗೆ ತಡೆ ನೀಡಿತು ಮತ್ತು ಪ್ರಕರಣವು ಇನ್ನೂ ಬಾಕಿ ಉಳಿದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement