“ಗುಡ್ ಲಕ್, ಗುಡ್ ಬೈ”: ಕಾಂಗ್ರೆಸ್‌ ತೊರೆದ ಮಾಜಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸುನಿಲ ಜಾಖರ್‌

ನವದೆಹಲಿ: ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನಿಲ ಜಾಖರ್ ಶನಿವಾರ ನಾಟಕೀಯ ಶೈಲಿಯಲ್ಲಿ ಪಕ್ಷವನ್ನು ತೊರೆದಿದ್ದಾರೆ.’ಮನ್ ಕಿ ಬಾತ್’ ಶೀರ್ಷಿಕೆಯ ಫೇಸ್‌ಬುಕ್ ಲೈವ್ ಸ್ಟ್ರೀಮ್‌ನಲ್ಲಿ, ಅವರು ಪಕ್ಷಕ್ಕೆ ವಿದಾಯ ಹೇಳಿದ್ದಾರೆ.
ಮೂರು ಬಾರಿ ಶಾಸಕ ಮತ್ತು ಒಂದು ಬಾರಿ ಸಂಸದರಾಗಿರುವ ಜಾಖರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಂದ ಪಕ್ಷದ ಎಲ್ಲ ಉಲ್ಲೇಖಗಳನ್ನು ತೆಗೆದುಹಾಕಿದ್ದಾರೆ. ಅವರು ತಮ್ಮ ಟ್ವಿಟ್ಟರ್ ಬಯೋದಿಂದ ಕಾಂಗ್ರೆಸ್ ಅನ್ನು ತೆಗೆದುಹಾಕಿದ್ದಾರೆ ಮತ್ತು ಅವರ ಟ್ವಿಟ್ಟರ್ ಖಾತೆಯ ಹಿನ್ನೆಲೆ ಚಿತ್ರವಾಗಿ ಕಾಂಗ್ರೆಸ್‌ ಧ್ವಜದ ಬದಲಿಗೆ ಧ್ವತ್ರಿವರ್ಣ ಧ್ವಜ ಹಾಕಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಟೀಕಿಸಿದ್ದಕ್ಕಾಗಿ ನಾಯಕತ್ವದಿಂದ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ ವಾರಗಳ ನಂತರ ಸುನಿಲ್‌ ಜಾಖರ್‌ ಇಂದು, ಶನಿವಾರ ಪಕ್ಷ ತೊರೆದಿದ್ದಾರೆ.

ವಿದಾಯ ಮತ್ತು ಶುಭವಾಗಲಿ, ಕಾಂಗ್ರೆಸ್” ಎಂದು ಜಾಖರ್ ಫೇಸ್‌ಬುಕ್ ಲೈವ್ ವೀಡಿಯೊದಲ್ಲಿ ತಮ್ಮ ವಿರುದ್ಧ ಕ್ರಮಕ್ಕೆ ಕಾರಣರಾದ ಪಕ್ಷದ ಮಾಜಿ ಸಹೋದ್ಯೋಗಿಗಳ ಬಗ್ಗೆ ಕಟುವಾದ ಟೀಕೆ ಮಾಡಿದ ನಂತರ ಹೇಳಿದ್ದಾರೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ನಾಯಕತ್ವವು ಹತಾಶ ಪ್ರಯತ್ನದ ಅಂಗವಾಗಿ ಉದಯಪುರದಲ್ಲಿ ಸಭೆ ನಡೆಸುತ್ತಿರುವ ಸಮಯದಲ್ಲಿ ಅವರ ಹೇಳಿಕೆಗಳು ಬಂದಿವೆ.
ಕಳೆದ ತಿಂಗಳು, ಕಾಂಗ್ರೆಸ್‌ನ ಶಿಸ್ತು ಸಮಿತಿಯು ಜಾಖರ್ ಅವರನ್ನು ಎರಡು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸುವಂತೆ ಮತ್ತು ಎಲ್ಲಾ ಹುದ್ದೆಗಳಿಂದ ತೆಗೆದುಹಾಕುವಂತೆ ಶಿಫಾರಸು ಮಾಡಿತ್ತು.
ಮಾಜಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಜಅಖರ್‌ ಮಾಜಿ ಮುಖ್ಯಮಂತ್ರಿ ಚನ್ನಿ ಅವರನ್ನು ಟೀಕಿಸಿದ್ದರು ಮತ್ತು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಗೆ ಸೋತ ನಂತರ ಅವರನ್ನು ಪಕ್ಷದ ಸೋಲಿಗೆ ಹೊಣೆಗಾರ ಎಂದು ಹೇಳಿದ್ದರು.
ಜಾಖರ್ ಅವರು ಚುನಾವಣೆಯಲ್ಲಿ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ನಾಯಕತ್ವವನ್ನು ಟೀಕಿಸಿದ್ದರು ಮತ್ತು ಅಮರೀಂದರ್ ಸಿಂಗ್ ಅವರ ಪದಚ್ಯುತಗೊಂಡ ನಂತರ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಯನ್ನು ಹಾಳುಮಾಡಿದ್ದಕ್ಕಾಗಿ ಅಂಬಿಕಾ ಸೋನಿ ಅವರ ಮೇಲೆ ವಾಗ್ದಾಳಿ ನಡೆಸಿದ್ದರು.

ಓದಿರಿ :-   ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯಕುಮಾರ ಸಕ್ಸೇನಾ ನೇಮಕ

ರಾಹುಲ್ ಗಾಂಧಿಯವರ ಕುರಿತು ಒಳ್ಳೆಯ ವ್ಯಕ್ತಿ” ಎಂದು ಹೊಗಳಿದ್ದಾರೆ ಮತ್ತು “ಚಮಚಾಗಿರಿ ಮಾಡುವವರನ್ನು ದೂರವನ್ನು ಇಟ್ಟು ಮತ್ತೊಮ್ಮೆ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಜಾಖರ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿದು ಅವರು ಟ್ವೀಟ್ ಮಾಡಿದ್ದಾರೆ: “ಕಾಂಗ್ರೆಸ್ ಸುನಿಲ್ ಜಾಖರ್ ಅವರನ್ನು ಕಳೆದುಕೊಳ್ಳಬಾರದು [ಅವರು] ಅವರು ಕಾಂಗ್ರೆಸ್‌ ಆಸ್ತಿ, ಯಾವುದೇ ಭಿನ್ನಾಭಿಪ್ರಾಯಗಳನ್ನು ಒಟ್ಟಿಗೆ ಕುಳಿತು ಚರ್ಚಿಸಿ ಪರಿಹರಿಸಬಹುದು ಎಂದು ಅವರು ಹೇಳಿದ್ದಾರೆ.
ನವ ಸಂಕಲ್ಪ ಚಿಂತನ ಶಿಬಿರವು ಪ್ರಮುಖ ರಚನಾತ್ಮಕ ಸುಧಾರಣೆಗಳಿಗೆ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಕಾಂಗ್ರೆಸ್ 2024 ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಪುನರುಜ್ಜೀವನವನ್ನು ಬಯಸುತ್ತದೆ. ಕಳೆದ ಹಲವು ವರ್ಷಗಳಿಂದ ಪಕ್ಷದಲ್ಲಿನ ಚುನಾವಣಾ ಸೋಲು ಮತ್ತು ಭಿನ್ನಾಭಿಪ್ರಾಯಗಳ ಸರಮಾಲೆಯ ಹಿನ್ನೆಲೆಯಲ್ಲಿ ಮೂರು ದಿನಗಳ ಸಮಾವೇಶವನ್ನು ಆಯೋಜಿಸಲಾಗಿದೆ.

ಜಾಖರ್‌ ಕಾಂಗ್ರೆಸ್‌ ಯಾಕೆ ಕಾಂಗ್ರೆಸ್‌ ತೊರೆದರು..?
ಗುರುದಾಸ್‌ಪುರದ ಮಾಜಿ ಸಂಸದ ಸುನೀಲ್ ಜಾಖರ್ ಅವರು ತಾವು ಹಿಂದೂ ಆಗಿರುವುದರಿಂದ ಪಕ್ಷವು ತಮ್ಮನ್ನು ಪಂಜಾಬ್‌ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಿಲ್ಲ ಎಂದು ಹೇಳಿದ್ದಾರೆ.
ದೂರದರ್ಶನದ ಸಂದರ್ಶನವೊಂದರಲ್ಲಿ ದಲಿತರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಶಿಸ್ತು ಕ್ರಮ ಸಮಿತಿಯು ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಜಾಖರ್ ಯಾರನ್ನೂ ಹೆಸರಿಸದಿದ್ದರೂ, ಅವರ ಹೇಳಿಕೆಗಳು ಚನ್ನಿಯನ್ನು ಗುರಿಯಾಗಿರಿಸಿಕೊಂಡಿವೆ ಎಂದು ಅರ್ಥೈಸಲಾಗಿದೆ.
ಶೋಕಾಸ್ ನೋಟಿಸ್‌ಗೆ ಹಿರಿಯ ನಾಯಕ ಪ್ರತಿಕ್ರಿಯಿಸಲಿಲ್ಲ, ಇದು ಅಶಿಸ್ತು ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರ ತಪ್ಪನ್ನು ಒಪ್ಪಿಕೊಂಡಿದೆ ಎಂದು ಸಮಿತಿಯು ಭಾವಿಸಿದೆ. ಪಕ್ಷದ ಎಲ್ಲಾ ಹುದ್ದೆಗಳಿಂದ ಅವರನ್ನು ತೆಗೆದುಹಾಕುವ ಮೂಲಕ ಅವರ ಮೇಲೆ ಕ್ರಮ ಕೈಗೊಂಡಿದೆ.

ಓದಿರಿ :-   ದೆಹಲಿ: ಶಾಸ್ತ್ರಿ ಭವನದ 7ನೇ ಮಹಡಿಯಿಂದ ಜಿಗಿದು ಐಟಿ ಸಚಿವಾಲಯದ ವಿಜ್ಞಾನಿ ಸಾವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ