ಬಾಗಲಕೋಟೆ: ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ

posted in: ರಾಜ್ಯ | 0

ಬಾಗಲಕೋಟೆಯಲ್ಲಿ ಮನೆ ಮಾಲೀಕತ್ವದ ವಿವಾದವೊಂದು ಕೈಮೀರಿ, ವಕೀಲೆ ಸಂಗೀತಾ ಶಿಕ್ಕೇರಿ ಎಂಬುವರ ಮೇಲೆ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಮಾರಣಾಂತಿಕ ಹಲ್ಲೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ರಾಜಕೀಯ ಪಕ್ಷವೊಂದರ ಮುಖಂಡ ರಾಜು ನಾಯ್ಕರ್‌ ಬೆಂಬಲಿಗ ಮಹಾಂತೇಶ ಚೊಳಚಗುಡ್ಡ ಎಂಬಾತ ಸಂಗೀತಾ ಅವರನ್ನು ಮನಸೋಇಚ್ಛೆ ಥಳಿಸಿದ್ದಾನೆ. ಸಂಗೀತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಗೀತಾ ಅವರ ಮೇಲಿನ ದಾಳಿಗೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಸಂಗೀತಾ ಮತ್ತು ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಗಲಕೋಟೆಯ ವಿನಾಯಕ ನಗರದ ಮೂರನೇ ಅಡ್ಡರಸ್ತೆಯಲ್ಲಿ ವಕೀಲೆ ಸಂಗೀತಾ ಅವರ ಮನೆ ಇದೆ. ಈ ಮನೆಗೆ ಸಂಬಂಧಿಸಿದಂತೆ ಸಂಗೀತಾ ಮತ್ತು ಅವರ ಕುಟುಂಬದವರ ನಡುವೆ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಮನೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಲು ಅಧೀನ ನ್ಯಾಯಾಲಯ ಸೂಚಿಸಿದೆ ಎನ್ನಲಾಗಿದೆ. ಇದರ ಮಧ್ಯೆ, ಸಂಗೀತಾ ಅವರ ದೊಡ್ಡಪ್ಪ ಅವರ ಕುಮ್ಮಕ್ಕಿನಿಂದ ಜೆಸಿಬಿ ಬಳಸಿ ಮನೆಯ ಕಾಂಪೌಂಡ್‌ ಅನ್ನು ಕೆಡವಲಾಗಿದೆ. ಇದು ಮಾತಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ಅಂತಿಮವಾಗಿ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಓದಿರಿ :-   ಇನ್ಫೋಸಿಸ್ ಮುಖ್ಯಸ್ಥರಾಗಿ ಮುಂದಿನ 5 ವರ್ಷಗಳ ವರೆಗೆ ಸಲೀಲ್ ಪರೇಖ್ ಮರುನೇಮಕ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

advertisement

ನಿಮ್ಮ ಕಾಮೆಂಟ್ ಬರೆಯಿರಿ