ಬಿಗಿ ಭದ್ರತೆ ನಡುವೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವೀಡಿಯೊಗ್ರಫಿ ಸಮೀಕ್ಷೆ ಪುನರಾರಂಭ

ವಾರಾಣಸಿ: ಬಿಗಿ ಭದ್ರತೆಯ ನಡುವೆ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆ ಶನಿವಾರ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಸೀದಿ ಆಡಳಿತ ಸಮಿತಿಯು ಸ್ಥಳೀಯ ನ್ಯಾಯಾಲಯದಿಂದ ಕಾರ್ಯ ನಿಯೋಜಿಸಿದ ತಂಡದೊಂದಿಗೆ ಸದ್ಯಕ್ಕೆ ಸಹಕರಿಸುವುದಾಗಿ ಸೂಚಿಸಿದೆ. ಅಧಿಕೃತ ವ್ಯಕ್ತಿಗಳು – ಎಲ್ಲಾ ಪಕ್ಷಗಳು, ಅವರ ವಕೀಲರು, ನ್ಯಾಯಾಲಯದ ಕಮಿಷನರ್‌ಗಳು ಮತ್ತು ವಿಡಿಯೋಗ್ರಾಫರ್‌ಗಳು – ಸ್ಥಳಕ್ಕೆ ತಲುಪಿದ್ದಾರೆ ಮತ್ತು ಸಮೀಕ್ಷೆ ಪ್ರಾರಂಭವಾಗಿದೆ” ಎಂದು ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.

ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿದೆ ಮತ್ತು ಸ್ಥಳೀಯ ನ್ಯಾಯಾಲಯವು ಅದರ ಹೊರಗಿನ ಗೋಡೆಗಳ ಮೇಲೆ ಪ್ರತಿನಿತ್ಯದ ಪ್ರಾರ್ಥನೆಗೆ ಅನುಮತಿ ಕೋರಿದ್ದ ಐವರು ಮಹಿಳೆಯರ ಮನವಿ ವಿಚಾರಣೆ ನಡೆಸುತ್ತಿದೆ.
ಗುರುವಾರ ತಮ್ಮ ಆದೇಶದಲ್ಲಿ, ಜಿಲ್ಲಾ ಸಿವಿಲ್ ನ್ಯಾಯಾಲಯದ (ಹಿರಿಯ ವಿಭಾಗ) ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಜ್ಞಾನವಾಪಿ-ಗೌರಿ ಶೃಂಗಾರ್ ಸಂಕೀರ್ಣದ ಸಮೀಕ್ಷೆಗೆ ನೇಮಿಸಿದ ವಕೀಲ ಅಜಯಕುಮಾರ್ ಮಿಶ್ರಾ ಅವರನ್ನು ಬದಲಾಯಿಸಬೇಕು ಎಂಬ ಮಸೀದಿ ಸಮಿತಿಯ ಮನವಿಯನ್ನು ತಿರಸ್ಕರಿಸಿದರು.
ಕಮಿಷನರ್‌ಗೆ ಸಹಾಯ ಮಾಡಲು ಮತ್ತಿಬ್ಬರು ವಕೀಲರನ್ನು ನೇಮಕ ಮಾಡಿದ ನ್ಯಾಯಾಧೀಶರು ಮಂಗಳವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಜಿಲ್ಲಾಧಿಕಾರಿಗಳು ಶುಕ್ರವಾರ ನಡೆಸಿದ ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಪರ ವಕೀಲರು ಹಾಜರಿದ್ದರು.
ಶುಕ್ರವಾರವೂ ಸರ್ವೋಚ್ಚ ನ್ಯಾಯಾಲಯವು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮಧ್ಯಂತರ ಆದೇಶವನ್ನು ನೀಡಲು ನಿರಾಕರಿಸಿತು.
ಆದಾಗ್ಯೂ, ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆಯ ವಿರುದ್ಧ ಮುಸ್ಲಿಂ ಪಕ್ಷದ ಮನವಿಯನ್ನು ಪಟ್ಟಿ ಮಾಡಲು ಒಪ್ಪಿಕೊಂಡಿತು.

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement