ಯಡಿಯೂರಪ್ಪ ಪುತ್ರ ವಿಜಯೇಂದ್ರ ಮೇಲ್ಮನೆಗೆ ಪ್ರವೇಶ? ವಿಧಾನ ಪರಿಷತ್‌ ಸ್ಥಾನಕ್ಕೆ ಬಿಜೆಪಿ ಕೋರ್‌ ಕಮಿಟಿ ಶಿಫಾರಸು…

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹಸರನ್ನು ಕೋರ್ ಕಮಿಟಿ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ. ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮೇಲ್ಮನೆಗೆ ವಿಜಯೇಂದ್ರ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಗಂಭೀರ ಚಿಂತನೆ ನಡೆಸಿದ್ದು, ಇಪತ್ತು ಅಭಿರ್ಥಿಗಳ ಹೆಸರನ್ನು ಶಿಫಾರಸು ಮಾಡಲು … Continued

ಕರ್ನಾಟಕದಿಂದ ರಾಜ್ಯ ಸಭೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೆಸರು ಫೈನಲ್‌

ಬೆಂಗಳೂರು: ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆ ಮತ್ತು ರಾಜ್ಯ ಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆದಿದ್ದು, ರಾಜ್ಯ ದಿಂದ ರಾಜ್ಯ ಸಭೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೆಸರನ್ನು ಅಂತಿಮಗೊಳಿಸಲಾಗಿದೆ.ಎಂದು ತಿಳಿದುಬಂದಿದೆ. ಹಣಕಾಸು ಸಚಿವರಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ಕರ್ನಾಟಕದಿಂದಲೇ ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್ ಅವರನ್ನು ಮರು ಆಯ್ಕೆ ಮಾಡಲು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಂದಿನ ವಾರ ನಟ ಮೋಹನ ಲಾಲ್ ವಿಚಾರಣೆ ನಡೆಸಲಿರುವ ಇಡಿ: ವರದಿ

ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಮೋಹನ್ ಲಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮೋಹನ್‌ಲಾಲ್‌ ಅವರಿಗೆ ಮುಂದಿನ ವಾರ ಕೊಚ್ಚಿಯ ತಮ್ಮ ಕಚೇರಿಯಲ್ಲಿ ಇಡಿ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ, ಅಲ್ಲಿ ಪುರಾತನ ಡೀಲರ್ ಮತ್ತು ವಂಚಕ ಮೋನ್ಸನ್ ಮಾವುಂಕಲ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ … Continued

ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲಬಕುಮಾರ ದೇಬ್ ರಾಜೀನಾಮೆ

ಅಗರ್ತಲ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬಕುಮಾರ್ ದೇಬ್ ಅವರು ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಅವರು ಶನಿವಾರ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ದೇಬ್ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಬಿಜೆಪಿ … Continued

ತಿಂಡಿಯಲ್ಲಿ ಉಪ್ಪು ಹೆಚ್ಚಾಗಿದ್ದಕ್ಕೆ ಪತ್ನಿಯ ತಲೆ ಬೋಳಿಸಿದ ಪತಿ ಮಹಾಶಯ…!

ಅಹಮದಾಬಾದ್: ಅಹಮದಾಬಾದ್: ಆಹಾರದಲ್ಲಿ ಹೆಚ್ಚುವರಿ ಉಪ್ಪು, ಖಾರ ಹಾಕಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ 28 ವರ್ಷದ ಪತ್ನಿಯ ತಲೆಯನ್ನು ಬಲವಂತವಾಗಿ ಬೋಳಿಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಈ ಘಟನೆಯು ಇನ್ಸಾನಿಯತ್‌ ನಗರದ ಫ್ಲಾಟ್‌ಗಳ ನಿವಾಸಿ ತನ್ನ ಪತ್ನಿ ರಿಜ್ವಾನಾ ಶೇಖ್‌ ಮೇಲೆ ಈ ಕೃತ್ಯ ಎಸಗಿದ್ದಾನೆ. ಪತ್ನಿ ಮೂರು ದಿನಗಳ ನಂತರ ಪೊಲೀಸರನ್ನು … Continued

“ಗುಡ್ ಲಕ್, ಗುಡ್ ಬೈ”: ಕಾಂಗ್ರೆಸ್‌ ತೊರೆದ ಮಾಜಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸುನಿಲ ಜಾಖರ್‌

ನವದೆಹಲಿ: ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನಿಲ ಜಾಖರ್ ಶನಿವಾರ ನಾಟಕೀಯ ಶೈಲಿಯಲ್ಲಿ ಪಕ್ಷವನ್ನು ತೊರೆದಿದ್ದಾರೆ.’ಮನ್ ಕಿ ಬಾತ್’ ಶೀರ್ಷಿಕೆಯ ಫೇಸ್‌ಬುಕ್ ಲೈವ್ ಸ್ಟ್ರೀಮ್‌ನಲ್ಲಿ, ಅವರು ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಮೂರು ಬಾರಿ ಶಾಸಕ ಮತ್ತು ಒಂದು ಬಾರಿ ಸಂಸದರಾಗಿರುವ ಜಾಖರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಂದ ಪಕ್ಷದ ಎಲ್ಲ ಉಲ್ಲೇಖಗಳನ್ನು ತೆಗೆದುಹಾಕಿದ್ದಾರೆ. ಅವರು … Continued

ನೀರಿನ ಅಲರ್ಜಿಯ ಬಗ್ಗೆ ಎಂದಾದರೂ ಕೇಳಿದ್ದೀರಾ? ಅಮೆರಿಕದ ಈ ಹುಡುಗಿಗೆ ನೀರು ಕುಡಿಯುವ ಹಾಗಿಲ್ಲ, ಸ್ನಾನ ಮಾಡುವಂತಿಲ್ಲ, ಕಣ್ಣೀರು ಬಿದ್ದರೂ ಚರ್ಮ ಸುಡುತ್ತದೆ…!..!

ನೀರು ಅಲರ್ಜಿಯೇ..? ಬಹುತೇಕ ಎಲ್ಲರಿಗೂ ಅಲ್ಲ, ಆದರೆ ಚಿಕ್ಕ ಹುಡುಗಿಯೊಬ್ಬಳಿಗೆ ನೀರಿನ ತೀವ್ರ ಅಲರ್ಜಿ ಇದೆ ಮತ್ತು ಅವಳಿಗೆ ಸ್ನಾನ ಮಾಡಲು ಸಹ ಸಾಧ್ಯವಿಲ್ಲ. ಅಮೆರಿಕದ ಅರಿಜೋನಾದ ಟಕ್ಸನ್‌ನ ಅಬಿಗೈಲ್ ಬೆಕ್ ಎಂಬ 15 ವರ್ಷದ ಹುಡುಗಿ ಅಕ್ವಾಜೆನಿಕ್ ಉರ್ಟಿಕೇರಿಯಾ ಎಂಬ ರೋಗದಿಂದ ಬಳಲುತ್ತಿದ್ದಾರೆ, ಅಂದರೆ ಆಕೆಯ ದೇಹವು ನೀರಿಗೆ ನಂಬಲಾಗದಷ್ಟು ಸೂಕ್ಷ್ಮವಾಗಿರುತ್ತದೆ. ಅವಳು ಕಳೆದ … Continued

ಕೆಲಸದ ಸಮಯದಲ್ಲಿ ಪುರುಷನನ್ನು ಬಾಲ್ಡಿ ಎಂದು ಕರೆಯುವುದು ಲೈಂಗಿಕ ಕಿರುಕುಳ: ಬ್ರಿಟನ್‌ ಉದ್ಯೋಗ ನ್ಯಾಯ ಮಂಡಳಿ

ಲಂಡನ್: ಕೆಲಸದ ಸ್ಥಳದಲ್ಲಿ ಪುರುಷನನ್ನು ಬೋಳು (bald) ಎಂದು ಕರೆಯುವುದು ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುತ್ತದೆ ಎಂದು ಇಂಗ್ಲೆಂಡ್‌ನ ಉದ್ಯೋಗ ನ್ಯಾಯಮಂಡಳಿ ತೀರ್ಮಾನಿಸಿದೆ. ನ್ಯಾಯಾಧೀಶ ಜೊನಾಥನ್ ಬ್ರೈನ್ ನೇತೃತ್ವದ ಮೂವರು ಸದಸ್ಯರ ನ್ಯಾಯಮಂಡಳಿಯು ಯಾರೊಬ್ಬರ ಕೂದಲಿನ ಕೊರತೆಯ ಉಲ್ಲೇಖವು ಕೇವಲ ಅವಮಾನವಾಗಿದೆಯೇ ಅಥವಾ ಕಿರುಕುಳವಾಗಿದೆಯೇ ಎಂದು ನಿರ್ಧರಿಸಬೇಕಾಗಿತ್ತು. ಈ ನಿರ್ಧಾರವು ವೆಸ್ಟ್ ಯಾರ್ಕ್‌ಷೈರ್ ಮೂಲದ ಬ್ರಿಟಿಷ್ … Continued

ಆಸಿಡ್ ದಾಳಿ ಸಂತ್ರಸ್ತರಿಗೆ ನಿವೇಶನ, 5 ಲಕ್ಷ ರೂ.ನೆರವು: ಬೊಮ್ಮಾಯಿ

ಬೆಂಗಳೂರು: ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ನಿವೇಶನ ಮತ್ತು ಮನೆಗಳನ್ನು ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಲಿದ್ದು, ಸ್ವಯಂ ಉದ್ಯೋಗ ಯೋಜನೆಯಡಿ 5 ಲಕ್ಷ ರೂ.ವರೆಗೆ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ. ಕಂದಾಯ ಇಲಾಖೆ ಆರಂಭಿಸಿರುವ ‘ಹಲೋ ರೆವಿನ್ಯೂ ಮಿನಿಸ್ಟರ್-72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ’ ಎಂಬ ಸಹಾಯವಾಣಿಗೆ ಚಾಲನೆ … Continued

ಪಿಎಸ್ಐ ಹಗರಣ: ನೇಮಕಾತಿ ವಿಭಾಗದ ಡಿವೈಎಸ್ಪಿ ಬಂಧನ

ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶಾಂತಕುಮಾರ್ ಅವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಶುಕ್ರವಾರ ಬಂಧಿಸಿದೆ. ಅವರು ನೇಮಕಾತಿ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ. ಮೂಲಗಳ ಪ್ರಕಾರ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ … Continued