ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ, ರೂಪಿಸಿದವರು ಯಾರೆಂದು ಗೊತ್ತಿದೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್‌: ಶನಿವಾರ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಮತ್ತು ವಿದೇಶಗಳಲ್ಲಿ ತನ್ನನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ಹತ್ಯೆಗೆ ಯೋಜನೆ ರೂಪಿಸಿದವರು ಯಾರು ಎಂಬುದು ನನಗೆ ತಿಳಿದಿದೆ ಎಂದು ಹೇಳಿದ್ದು, ನಾನು ಎಲ್ಲರ ಹೆಸರನ್ನು ಉಲ್ಲೇಖಿಸಿರುವ ವೀಡಿಯೊವೊಂದನ್ನು ರೆಕಾರ್ಡ್ ಮಾಡಿದ್ದೇನೆ, ನನ್ನನ್ನು ಕೊಂದರೆ, ಈ ವೀಡಿಯೊವನ್ನು ಸಾರ್ವಜನಿಕಗೊಳಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಏಪ್ರಿಲ್‌ನಲ್ಲಿ, ಅಧಿಕಾರದಿಂದ ಕೆಳಗಿಳಿಯುವ ಮೊದಲು, ಇಮ್ರಾನ್ ಖಾನ್ ತನ್ನ ಜೀವಕ್ಕೆ ಅಪಾಯವಿದೆ ಎಂಬ ವಿಶ್ವಾಸಾರ್ಹ ಮಾಹಿತಿಯಿದೆ ಎಂದು ಹೇಳಿದ್ದರು.
ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್ ಅವರು ಕಳೆದ ತಿಂಗಳು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ಕಿತ್ತೆಸೆಲ್ಪಟ್ಟಿದ್ದರು. ಅವರು ಸ್ಥಳೀಯರ ಸಹಾಯದಿಂದ ಅಮೆರಿಕ ತನ್ನನ್ನು ಕೆಳಗಿಳಿಸುವ ಸಂಚಿನ ಮಾಸ್ಟರ್ ಮೈಂಡ್ ಎಂದು ಆರೋಪಿಸಿದರು.
ಅಂದಿನಿಂದ, ಖಾನ್ ಅವರು ಪಾಕಿಸ್ತಾನದ ವಿವಿಧ ನಗರಗಳಲ್ಲಿ ಹಲವಾರು ಸಾರ್ವಜನಿಕ ರ್ಯಾಲಿಗಳನ್ನು ನಡೆಸಿದರು, ಹೊಸ ಸರ್ಕಾರವನ್ನು “ದೇಶದ್ರೋಹಿಗಳು ಮತ್ತು ಭ್ರಷ್ಟ ಆಡಳಿತಗಾರರು” ಎಂದು ಟೀಕಿಸಿದರು.

ಓದಿರಿ :-   ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡಲು ಹೋಗಿ ಕೈ ಬೆರಳು ಕಳೆದುಕೊಂಡ ವ್ಯಕ್ತಿ...! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ