ರಷ್ಯಾ ಅಧ್ಯಕ್ಷ ಪುತಿನ್‌ಗೆ “ಗಂಭೀರ ಆರೋಗ್ಯ ಸಮಸ್ಯೆ ಎಂದ ಮಾಜಿ ಸ್ಪೈ, ಬ್ಲಡ್ ಕ್ಯಾನ್ಸರ್ ಎನ್ನುತ್ತವೆ ಕೆಲ ವರದಿಗಳು

ಉಕ್ರೇನ್-ರಷ್ಯಾ ಯುದ್ಧ ಮುಂದುವರಿದ ಬೆನ್ನಿಗೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ( Vladimir Putin) ಅವರ ಆರೋಗ್ಯದ ಬಗ್ಗೆ ವದಂತಿಗಳು ಹೊರಬರುತ್ತಲೇ ಇವೆ. ಈಗ ಪುತಿನ್​​ ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಉಕ್ರೇನ್‌ನ ಮಿಲಿಟರಿ ಗುಪ್ತಚರ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅವರು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ವರದಿಗಳ ಪ್ರಕಾರ, ಪುತಿನ್ ಅತ್ಯಂತ ಕೆಟ್ಟ ಮಾನಸಿಕ ಮತ್ತು ದೈಹಿಕ ಸ್ಥಿತಿಯಲ್ಲಿದ್ದಾರೆ. ರಕ್ತದ ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳಿಂದ ಏಕಕಾಲದಲ್ಲಿ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಪುತಿನ್ ಅವರನ್ನು ಪದಚ್ಯುತಗೊಳಿಸಲು ದಂಗೆ ನಡೆಯುತ್ತಿದೆ ಎಂದು ಹೇಳಿರುವ ಅವರು, ಯುದ್ಧದಲ್ಲಿ ಆಗಸ್ಟ್ ಮಧ್ಯದ ವೇಳೆಗೆ ಮಹತ್ವದ ತಿರುವು ಬರಲಿದೆ, ವರ್ಷದ ಅಂತ್ಯದ ವೇಳೆಗೆ ಯುದ್ಧವು ಕೊನೆಗೊಳ್ಳುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಪುತಿನ್​​ ಕ್ಯಾನ್ಸರ್​ ನಿಂದ ಬಳಸುತ್ತಿರುವ ಬಗ್ಗೆ ವದಂತಿಗಳು ಹೊಸದಲ್ಲವಾದರೂ, ರಷ್ಯಾದ ಅಧಿಕಾರಿಗಳಿಂದ ಇದುವರೆಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ವರ್ಷದ ಆರಂಭದಲ್ಲಿ, ರಷ್ಯಾದ ಅತ್ಯಂತ ಜನಪ್ರಿಯ ಟೆಲಿಗ್ರಾಮ್ ಚಾನೆಲ್ ಜನರಲ್ ಎಸ್‌ವಿಆರ್ ಸೇರಿದಂತೆ ಮಾಧ್ಯಮಗಳು ಪುತಿನ್ ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿ ಮಾಡಿದ್ದವು. ವರದಿಗಳ ಪ್ರಕಾರ, ಮಾಜಿ ಕೆಜಿಬಿ ಅಧಿಕಾರಿ ಮತ್ತು ಪುತಿನ್ ಆಪ್ತ, ನಿಕೊಲಾಯ್ ಪಟ್ರುಶೆವ್ ಈ ಸಮಯದಲ್ಲಿ ದೇಶ ಮತ್ತು ನಡೆಯುತ್ತಿರುವ ಉಕ್ರೇನ್ ಯುದ್ಧದ ಮೇಲ್ವಿಚಾರಣೆ ನೋಡಿಕೊಳ್ಳುವ ಸಾದ್ಯತೆಯಿದೆ.
ರಷ್ಯಾದ ಅಧ್ಯಕ್ಷರ ‘ನಿಗೂಢ ಕಾಯಿಲೆ’ ಬಗ್ಗೆ ಸ್ಷ್ಟವಾಗಿ ಪರಿಶೀಲನೆಯಿಲ್ಲ, ಆದಾಗ್ಯೂ ಅವರು ಅಲುಗಾಡುತ್ತಿರುವುದು ಅಥವಾ ಚಡಪಡಿಕೆ ಅಥವಾ ಕಂಬಳಿಯಿಂದ ಅವರ ಕಾಲುಗಳನ್ನು ಮುಚ್ಚುವುದನ್ನು ತೋರಿಸುವ ದೃಶ್ಯಗಳು ಊಹಾಪೋಹಗಳಿಗೆ ಕಾರಣವಾಗಿದೆ.ಸಾಮಾನ್ಯವಾಗಿ ಚರ್ಚಿಸಲಾಗುವ ಕಾಯಿಲೆಗಳಲ್ಲಿ ಪಾರ್ಕಿನ್ಸನ್ ಮತ್ತು ಕ್ಯಾನ್ಸರ್ ಸೇರಿವೆ.ನ್ಯೂ ಲೈನ್ಸ್ ಮ್ಯಾಗಜೀನ್ ಇತ್ತೀಚಿನ ವರದಿಯ ಪ್ರಕಾರ, ಪುತಿನ್ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರಂತೆ.

ಓದಿರಿ :-   ಟಿವಿಯಲ್ಲಿ ಇಡೀ ರಾಷ್ಟ್ರದ ಕ್ಷಮೆ ಕೇಳಬೇಕು, ದೇಶಾದ್ಯಂತ ಭಾವನೆ ಕೆರಳಿಸಲು ನೀವೇ ಏಕಮಾತ್ರ ಹೊಣೆ: ಪ್ರವಾದಿ ಹೇಳಿಕೆ ಬಗ್ಗೆ ನೂಪುರ್ ಶರ್ಮಾರಿಗೆ ಸುಪ್ರೀಂಕೋರ್ಟ್‌ ತೀವ್ರ ತರಾಟೆ

ಊಹಾಪೋಹಕ್ಕೆ ಕಾರಣವಾದ ಫೋಟೋಗಳು
ಇತ್ತೀಚೆಗೆ ನಡೆದ ವರ್ಚುವಲ್ ಮೀಟಿಂಗ್‌ ಸಂದರ್ಭದಲ್ಲಿ ತೆಗೆದ ಪುತಿನ್ ಅವರ ಫೋಟೋಗಳು ಅವರ ಆರೋಗ್ಯದ ಬಗೆಗಿನ ಊಹಾಪೋಹಕ್ಕೆ ಕಾರಣವಾಗಿದೆ. ಅವರ ತಲೆಯು ‘ಉಬ್ಬಿಕೊಂಡಿದೆ’ ಎಂದು ಹಲವರು ವಾದಿಸಿದರೆ ರಷ್ಯಾ ಅಧ್ಯಕ್ಷರಿಗೆ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿವೆ ಎಂದು ಉಕ್ರೇನಿಯನ್ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪುತಿನ್ ಅವರು ” ಕೆಟ್ಟ ಮಾನಸಿಕ ಮತ್ತು ದೈಹಿಕ ಸ್ಥಿತಿಯಲ್ಲಿದ್ದಾರೆ. ಅವರು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಉಕ್ರೇನ್‌ ಉನ್ನತಾಧಿಕಾರಿ ಸ್ಕೈ ನ್ಯೂಸ್‌ಗೆ ತಿಳಿಸಿದ್ದಾರೆ.
ಉಕ್ರೇನ್ ಅನ್ನು ನಿಶ್ಯಸ್ತ್ರಗೊಳಿಸಲು ಮತ್ತು ಫ್ಯಾಸಿಸ್ಟ್‌ಗಳಿಂದ ರಕ್ಷಿಸಲು ಪುತಿನ್ “ವಿಶೇಷ ಕಾರ್ಯಾಚರಣೆ” ಎಂದು ಕರೆಯುವ ರಷ್ಯಾದ ಆಕ್ರಮಣವು ಯುರೋಪಿಯನ್ ಭದ್ರತೆಯನ್ನು ಕುಗ್ಗಿಸಿದೆ. ಉಕ್ರೇನ್‌ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾದ ದಾಳಿಯನ್ನು ಅಪ್ರಚೋದಿತ ಆಕ್ರಮಣಕಾರಿ ಯುದ್ಧ ಎಂದು ಹೇಳುತ್ತಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ