ಹೊನ್ನಾವರ:ಪಟ್ಟಣದ ಗೇರುಸೊಪ್ಪ ವೃತ್ತದ ಬಳಿ ಲಾರಿ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಮೃತನನ್ನು ಕೂಲಿಕಾರ್ಮಿಕ ಪಟ್ಟಣದ ಚರ್ಚ್ ರೋಡ್ ನಿವಾಸಿಯಾದ ಸುಬ್ರಾಯ ಮಂಜು ಅಂಬಿಗ (45) ಎಂದು ಗುರುತಿಸಲಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಹೊನ್ನಾವರದಿಂದ ಕುಮಟಾ ಕಡೆಗೆ ಅ ಬರುತ್ತಿದ್ದ ಲಾರಿ ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಸುಬ್ರಾಯ ಮಂಜು ಅಂಬಿಗ ಅವರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಅವರ,ತಲೆಯ ಮೇಲೆ ಹೋಗಿದೆ. ಇದರಿಂದ ಸುಬ್ರಾಯ ಮಂಜು ಅಂಬಿಗ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಅಪಘಾತವಾದ ನಂತರ ಚಾಲಕನು ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ, ಹುಡುಕಾಟ ನಡೆದಿದೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ