ಮಮತೆ ಎಲ್ಲ ಗಡಿಗಳನ್ನೂ ಮೀರುತ್ತದೆ ಎಂದು ನಾವೆಲ್ಲರೂ ಕೇಳಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ನಾಯಿಯ ವೀಡಿಯೊ ಅದನ್ನು ನೂರಕ್ಕೆ ನೂರರಷ್ಟು ಪುಷ್ಟೀಕರಿಸುವಂತಿದೆ.
ವೀಡಿಯೊದಲ್ಲಿ, ಲ್ಯಾಬ್ರಡಾರ್ ನಾಯಿಯೊಂದು ತಾಯಿ ಹುಲಿ ಬಿಟ್ಟುಹೋದ ಮೂರು ಹುಲಿ ಮರಿಗಳನ್ನು ತಾಯಿಯಂತೆಯೇ ಪ್ರಾಣಿಸಂಗ್ರಹಾಲಯದಲ್ಲಿ ನೋಡಿಕೊಂಡಿದೆ. ಹುಲಿ ಮರಿಗಳು ಮತ್ತು ಅವುಗಳ ಸಾಕುತಾಯಿ ನಾಯಿಯ ನಡುವಿನ ಬಾಂಧವ್ಯಕ್ಕೆ ಅಂತರ್ಜಾಲವು ಬೆರಗಾಗಿದೆ.

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/ಈ ವೀಡಿಯೊವನ್ನು ಚೀನಾದಲ್ಲಿ ಚಿತ್ರೀಕರಿಸಲಾಗಿದ್ದು, ಹುಲಿ ಮರಿಗಳು ನಾಯಿಯ ಸುತ್ತ ಆಡುತ್ತಿರುವುದನ್ನು ತೋರಿಸಲಾಗಿದೆ. ಹೆಣ್ಣು ಹುಲಿ ತನ್ನ ಮರಿಗಳನ್ನು ತ್ಯಜಿಸುವುದು ಕೇಳರಿಯದ ಸಂಗತಿಯೇನಲ್ಲ. ತಾಯಿ ಹುಲಿಯು ಮರಿಗಳು ದುರ್ಬಲವಾಗಿದ್ದರೆ, ಅಸಮರ್ಥವಾಗಿದ್ದರೆ, ಗಾಯಗೊಂಡರೆ ಅಥವಾ ಅನಾರೋಗ್ಯದಿಂದ ಕೂಡಿದ್ದರೆ ಅವುಗಳನ್ನು ತ್ಯಜಿಸುತ್ತದೆಯಂತೆ.ಕೆಲವು ಹೆಣ್ಣು ಹುಲಿಗಳು ಗಾಯಗೊಂಡಾಗ ಆಹಾರ ನೀಡಲು ಸಾಧ್ಯವಾಗದೆ ತಮ್ಮ ಮರಿಗಳನ್ನು ತ್ಯಜಿಸುತ್ತವೆಯಂತೆ.ಇಲ್ಲಿಯೂ ಹಾಗೆಯೇ ಆಗಿದೆ. ಈ ಮರಿಗಳು ಜನಿಸಿದ ಕೂಡಲೇ ತಾಯಿ ಅವುಗಳಿಗೆ ಆಹಾರವನ್ನು ನೀಡಲು ನಿರಾಕರಿಸಿದೆ ಹಾಗೂ ಅವುಗಳನ್ನು ತ್ಯಜಿಸಿದೆ ಎಂದು ಹೇಳಲಾಗಿದೆ.
ಆದರೆ ಲ್ಯಾಬ್ರಡಾರ್ ನಾಯಿ ಈ ತಬ್ಬಲಿ ಹುಲಿ ಮರಿಗಳನ್ನು ತಾಯಿಗಿಂತ ಮಿಗಿಲಾಗಿ ನೋಡಿಕೊಳ್ಳುತ್ತಿದೆ. ಭಾನುವಾರದಂದು ಎ ಪೀಸ್ ಆಫ್ ನೇಚರ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ 16,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಲಾಗಿದೆ. ಇದನ್ನು ಮೂಲತಃ ಏಪ್ರಿಲ್ 27 ರಂದು Instagram ನಲ್ಲಿ ಹಂಚಿಕೊಳ್ಳಲಾಗಿದೆ.
ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ