49 ಡಿಗ್ರಿ ಸೆಲ್ಸಿಯಸ್ ದಾಟಿದ ದೆಹಲಿಯ ತಾಪಮಾನ: ಮನೆಯಿಂದ ಹೊರಬರದಂತೆ ಮನವಿ

ನವದೆಹಲಿ: ಉತ್ತರ ಭಾರತದ ಕೆಲವು ಭಾಗಗಳು ಭಾನುವಾರ ತೀವ್ರ ಶಾಖದ ಅಲೆಯಿಂದ ಬೇಯುತ್ತಿದ್ದು, ದೆಹಲಿ ಮತ್ತು ಉತ್ತರ ಪ್ರದೇಶದ ಸ್ಥಳಗಳಲ್ಲಿ 49 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.ಕೇರಳದಾದ್ಯಂತ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಮತ್ತು ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ದೆಹಲಿಯಲ್ಲಿ, ಸಫ್ದರ್‌ಜಂಗ್ ವೀಕ್ಷಣಾಲಯವು 45.6 ಡಿಗ್ರಿ ಸೆಲ್ಸಿಯಸ್  ತಾಪಮಾನ ದಾಖಲಿಸಿದರೆ, ವಾಯುವ್ಯ ದೆಹಲಿಯ ಮುಂಗೇಶ್‌ಪುರ ಮತ್ತು ನೈಋತ್ಯ ದೆಹಲಿಯ ನಜಾಫ್‌ಗಡ್‌ನಲ್ಲಿ ಕ್ರಮವಾಗಿ 49.2 ಮತ್ತು 49.1 ಡಿಗ್ರಿ ಸೆಲ್ಸಿಯಸ್  ತಾಪಮಾನ ವರದಿ ಮಾಡಿದೆ.ಸಫ್ದರ್‌ಜಂಗ್‌ನಲ್ಲಿನ ತಾಪಮಾನವು ಈ ಋತುವಿನಲ್ಲಿ ಅತ್ಯಧಿಕವಾಗಿತ್ತು.

ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಗರಿಷ್ಠ ದಿನದ ತಾಪಮಾನ 49 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಉತ್ತರ ಪ್ರದೇಶ ರಾಜ್ಯದ ಅತಿ ಹೆಚ್ಚು.ಭಾರತೀಯ ಹವಾಮಾನ ಇಲಾಖೆ (IMD) ಅಂಕಿಅಂಶಗಳ ಪ್ರಕಾರ, ಇದು ಮೇ ತಿಂಗಳಲ್ಲಿ ಬಂದಾದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಮೇ 31, 1994 ರಂದು 48.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.

ಓದಿರಿ :-   ಹೈದರಾಬಾದ್‌ ಸಂಯೋಜಿತ ಅವಳಿ ಸಹೋದರಿಯರು ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

ರಾಜಸ್ಥಾನದ ಚುರು ಮತ್ತು ಪಿಲಾನಿಯಲ್ಲಿ ಕ್ರಮವಾಗಿ 47.9 ಮತ್ತು 47.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ವರದಿಯಾಗಿದೆ, ನಂತರ ಶ್ರೀ ಗಂಗಾನಗರ ಮತ್ತು ಝಾನ್ಸಿ (47.6), ನರ್ನಾಲ್ (47.5), ಖಜುರಾಹೊ ಮತ್ತು ನೌಗಾಂಗ್ (47.4) ಮತ್ತು ಹಿಸ್ಸಾರ್ (47.2) ಎಂದು IMD ತಿಳಿಸಿದೆ.

ಹಿಮಾಚಲ ಪ್ರದೇಶ, ಹರಿಯಾಣ, ದೆಹಲಿ, ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಉತ್ತರಾಖಂಡ್, ಪಂಜಾಬ್ ಮತ್ತು ಬಿಹಾರದ ಹಲವಾರು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ (5.1 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು) ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.ಪಶ್ಚಿಮ ಉತ್ತರ ಪ್ರದೇಶ, ಪೂರ್ವ ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶದ ಹಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆ 3.1ರಿಂದ 5.0 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಐಎಂಡಿ ಹೇಳಿದೆ. ಉತ್ತರ ಭಾರತವು ಹೆಚ್ಚಿನ ತಾಪಮಾನವನ್ನು ಎದುರಿಸಿದರೆ, ದಕ್ಷಿಣ ಪರ್ಯಾಯ ದ್ವೀಪದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಕೇರಳ ಮತ್ತು ಲಕ್ಷದ್ವೀಪವು ಭಾನುವಾರದಂದು ಅನುಕ್ರಮವಾಗಿ 52.2 ಮಿಮೀ ಮತ್ತು 57.7 ಮಿಮೀ  ಮಳೆಯನ್ನು ವರದಿ ಮಾಡಿದೆ.

ಐಎಂಡಿ ಕೇರಳದಾದ್ಯಂತ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ ಮತ್ತು ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಈ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ – ಹವಾಮಾನ ಕಚೇರಿಯ ಪ್ರಕಾರ, ಎರ್ನಾಕುಲಂ ಭಾನುವಾರ 122.2 ಮಿಮೀ ಮಳೆಯನ್ನು ವರದಿ ಮಾಡಿದೆ, ಇದು ದಿನದ ಸಾಮಾನ್ಯ 8.3 ಮಿಮೀಗಿಂತ 13 ಪಟ್ಟು ಹೆಚ್ಚು. ಕೊಲ್ಲಂನಲ್ಲಿ 113.6 ಮಿಮೀ ಮಳೆಯಾಗಿದೆ, ನಂತರ ತಿರುವನಂತಪುರಂ (109.1 ಮಿಮೀ), ಆಲಪ್ಪುಳ (97.4 ಮಿಮೀ), ಪತ್ತನಮಿತಾ (85.1 ಮಿಮೀ), ತ್ರಿಶೂರ್ (81.6 ಮಿಮೀ) ಮತ್ತು ಕೊಟ್ಟಾಯಂ (74.3 ಮಿಮೀ) ಮಳೆಯಾಗಿದೆ.

ಓದಿರಿ :-   ಉದಯ್‌ಪುರ ಶಿರಚ್ಛೇದ: ಬೆದರಿಕೆ ಬಗ್ಗೆ ಜೂನ್‌ 15ರಂದೇ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ- ಕನ್ಹಯ್ಯಾ ಲಾಲ್ ಪುತ್ರ ಆರೋಪ

ಮೇ 27 ರ ವೇಳೆಗೆ ಕೇರಳದಲ್ಲಿ ಮುಂಗಾರು ಪ್ರಾರಂಭವಾಗಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ, ಇದು ಜೂನ್ 1 ರ ಸಾಮಾನ್ಯವಾದ ಮಳೆ ಆಗಮನದ ದಿನಾಂಕಕ್ಕಿಂತ ಐದು ದಿನಗಳ ಮೊದಲಾಗಿದೆ.ನೈಋತ್ಯ ಮಾನ್ಸೂನ್ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಗೆ ಪ್ರವೇಶಿಸುವ ಸಾಧ್ಯತೆಯಿದೆ” ಎಂದು ಹವಾಮಾನ ಕಚೇರಿ ತಿಳಿಸಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ