ಹೆಬ್ಬಾವು ಮೊಟ್ಟೆಗಳನ್ನು ಮರಿ ಮಾಡಲು 54 ದಿನ ಹೈವೇ ಕೆಲಸವನ್ನೇ ಸ್ಥಗಿತಗೊಳಿಸಿದ ಕಂಪನಿ | ವೀಕ್ಷಿಸಿ

ಕಾಸರಗೋಡು; ಕೇರಳದ ಕಾಸರಗೋಡಿನಲ್ಲಿ ಹೆಬ್ಬಾವೊಂದು ಮರಿಗಳನ್ನು ಮಾಡಲು ಆ ಸ್ಥಳದಲ್ಲಿ ನಡೆಯುತ್ತಿದ್ದ ಹೆದ್ದಾರಿ ಕಾಮಗಾರಿಗಳನ್ನು 54 ದಿನಗಳ ಸ್ಥಗಿತಗೊಳಿಸಿದ ವಿದ್ಯಮಾನ ವರದಿಯಾಗಿದೆ..!
ಹೆಬ್ಬಾವು ಮೊಟ್ಟೆಗಳನ್ನಿಟ್ಟು ಮರಿ ಮಾಡಲು ಅತ್ಯಂತ ಬೆಚ್ಚಿಗಿನ ಹಾಗೂ ಸುರಕ್ಷಿತ ಸ್ಥಳ ಹುಡುಕಿತ್ತು. ಆದರೆ ಅದೇ ಸ್ಥಳದಲ್ಲಿ ಹೈವೇ ಕಾಮಗಾರಿ ಕೆಲಸವೂ ನಡೆಯುತ್ತಿತ್ತು. ಕಾಸರಗೋಡಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಿಸುತ್ತಿರುವ ಉರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ (ಯುಎಲ್‌ಸಿಸಿಎಸ್) ಹೆಬ್ಬಾವು ಮರಿಗಳನ್ನು ಹಾಕುವವರೆಗೆ ಅಂದರೆ 54 ದಿನಗಳ ಕಾಲ ಮೋರಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ ತಾಯಿ ಹೆಬ್ಬಾವು 24 ಮೊಟ್ಟೆಗಳನ್ನು ಮರಿ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಈಗ ಸುದ್ದಿಯಾಗಿದೆ.
ಹಾವಿನ ಮರಿಗಳು ಹೊರಬಂದ ನಂತರ ಅರಣ್ಯ ಇಲಾಖೆ, ಕಂಪನಿ ಮತ್ತು ಸಮರ್ಪಿತ ಹಾವು ರಕ್ಷಕರು ಹಾವುಗಳನ್ನು ಸ್ಥಳಾಂತರ ಮಾಡಲು ಸಂಘಟಿತ ಪ್ರಯತ್ನ ನಡೆಸಿದರು. ಎಲ್ಲಾ 24 ಮೊಟ್ಟೆಗಳು ಒಡೆದಿವೆ. ಮರಿಗಳನ್ನು ಕಾಡಿಗೆ ಬಿಡಲಾಗಿದೆ.

advertisement

ಮಾರ್ಚ್ 20 ರಂದು, NH 66 ರ ಅಗಲೀಕರಣದ ಭಾಗವಾಗಿ ಕಲ್ವರ್ಟ್ ನಿರ್ಮಿಸುವ ಕಾರ್ಮಿಕರು, CPCRI ಬಳಿಯ ಎರಿಯಾಲ್‌ನಲ್ಲಿ ಇಂಡಿಯನ್ ರಾಕ್ ಹೆಬ್ಬಾವು ಬಿಲದೊಳಗೆ ಸುತ್ತಿಕೊಂಡು ಮಲಗಿರುವುದನ್ನು ಕಂಡು ಅರಣ್ಯ ಇಲಾಖೆಗೆ ಕರೆ ಮಾಡಿದರು.
ಜೀವನೋಪಾಯಕ್ಕಾಗಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಘಟಕ ನಡೆಸುತ್ತಿರುವ ಅಮೀನ್ ಅವರನ್ನು ಅರಣ್ಯ ಇಲಾಖೆ ಕರೆಸಿತು. ಅವರು 10 ವರ್ಷಗಳಿಂದ ಹಾವುಗಳನ್ನು ರಕ್ಷಿಸುತ್ತಿದ್ದಾರೆ. ಅಮೀನ್ ಬಿಲದೊಳಗೆ ಪರಿಶೀಲಿಸಿದಾಗ, ಅವರು ಹಲವಾರು ಮೊಟ್ಟೆಗಳನ್ನು ನೋಡಿದರು. ಹೆಬ್ಬಾವು ಅವುಗಳ ಸುತ್ತಲೂ ಸುತ್ತಿಕೊಂಡಿತ್ತು. ನೇಪಾಳದ ಮಿಥಿಲಾ ವೈಲ್ಡ್‌ಲೈಫ್ ಟ್ರಸ್ಟ್‌ನಲ್ಲಿ ಹರ್ಪಿಟಾಲಜಿಸ್ಟ್ ಮತ್ತು ವೈಲ್ಡ್‌ಲೈಫ್ ರಿಸರ್ಚ್‌ನ ಮುಖ್ಯಸ್ಥರಾದ ಮವೀಶ್ ಕುಮಾರ್ ಅವರನ್ನು ಸಂಪರ್ಕಿಸಿದರು. ತಾಯಿ ಹೆಬ್ಬಾವಿನ ಉಷ್ಣತೆಯಿಲ್ಲದೆ ಮೊಟ್ಟೆಗಳು ಮರಿಯಾಗದ ಕಾರಣ ಮೊಟ್ಟೆಗಳನ್ನು ಸ್ಥಳಾಂತರಿಸದಂತೆ ಮವೀಶ್ ನನಗೆ ಸಲಹೆ ನೀಡಿದರು ಎಂದು ಅಮೀನ್ ಹೇಳಿದರು. ಹೀಗಾಗಿ ಅರಣ್ಯ ಇಲಾಖೆಯು ಯುಎಲ್‌ಸಿಸಿಎಸ್‌ಗೆ ಕಲ್ವರ್ಟ್‌ ಕಂಪನಿಗೆ ಕೆಲಸವನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿತು.

ಹೆಬ್ಬಾವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್ I ಅಡಿಯಲ್ಲಿ ವರ್ಗೀಕರಿಸಲಾಗಿದೆ. ಭಾರತದಲ್ಲಿ ಹುಲಿಗಳಂತೆಯೇ ಉನ್ನತ ಮಟ್ಟದ ಕಾನೂನು ರಕ್ಷಣೆಯನ್ನು ಹೆಬ್ಬಾವುಗಳಿಗೂ ನೀಡಲಾಗಿದೆ.ತಾಯಿ ಹೆಬ್ಬಾವಿನ ಉಷ್ಣತೆಯಿಲ್ಲದೆ ಮೊಟ್ಟೆಗಳು ಒಡೆದು ಮರಿಗಳು ಹೊರಬರುವುದಿಲ್ಲ.
ಕಾಲಮಿತಿಯ ಯೋಜನೆಯಾಗಿದ್ದರೂ ಗುತ್ತಿಗೆ ಕಂಪನಿ ಒಪ್ಪಿಗೆ ನೀಡಿತು. ಹೆಬ್ಬಾವು ಮಟ್ಟೆ ಇಟ್ಟು ಮರಿಗಳನ್ನು ಮಾಡುವ ವರೆಗೆ ಅಂದರೆ ಮರಿಗಳನ್ನು ಹೊರಬರುವ ವರೆಗೆ 54 ದಿನಗಳ ಅಲ್ಲಿ ಕಾಮಗಾರಿಯನ್ನು ಬಂದ್‌ ಇಟ್ಟಿತು.
ಹೆಬ್ಬಾವಿನ ಮೊಟ್ಟೆಗಳಿಗೆ ಕಾವುಕೊಡಲು 27 ಡಿಗ್ರಿ ಸೆಲ್ಸಿಯಸ್ ಮತ್ತು 31 ಡಿಗ್ರಿ ಸೆಲ್ಸಿಯಸ್ ನಡುವೆ ನಿಯಂತ್ರಿತ ತಾಪಮಾನ ಬೇಕಾಗುತ್ತದೆ. ಮೊಟ್ಟೆಗಳನ್ನು ಸರಿಯಾದ ತಾಪಮಾನದಲ್ಲಿ ಇಡಲು ತಾಯಿ ಹಾವು ಮೊಟ್ಟೆಗಳನ್ನು ಸುತ್ತುತ್ತದೆ.

ಅಮೀನ್ ಪ್ರತಿದಿನ ಒಂದು ಅಥವಾ ಎರಡು ಬಾರಿ ಹಾವು ಮತ್ತು ಮೊಟ್ಟೆಗಳನ್ನು ಪರೀಕ್ಷಿಸುತ್ತಿದ್ದರು.
ಹೆಬ್ಬಾವಿನ ಮೊಟ್ಟೆಗಳು ಹೊರಬರಲು ಸುಮಾರು 60 ರಿಂದ 65 ದಿನಗಳನ್ನು ತೆಗೆದುಕೊಳ್ಳುತ್ತದೆ. ಕಟ್ಟಡ ಕಾರ್ಮಿಕರು ಹೆಬ್ಬಾವನ್ನು ಕಂಡು 54 ನೇ ದಿನದಲ್ಲಿ ಮೊಟ್ಟೆಗಳು ಬಿರುಕು ಬಿಡಲಾರಂಭಿಸಿದವು. “ಅಂದರೆ, ಮೊಟ್ಟೆಗಳನ್ನು ಹಾಕಿದ ಒಂದು ವಾರದ ನಂತರ ಹೆಬ್ಬಾವು ಮೊಟ್ಟೆಗಳನ್ನಿಟ್ಟದ್ದನ್ನು ಕಂಡುಕೊಂಡಿದ್ದೇವೆ” ಎಂದು ಅಮೀನ್ ಹೇಳಿದರು.
ಮೊಟ್ಟೆಗಳು ಒಡೆಯಲು ಪ್ರಾರಂಭಿಸಿದ ನಂತರ, ತಾಯಿ ಹೆಬ್ಬಾವಿನ ಉಪಸ್ಥಿತಿ ಅನಿವಾರ್ಯವಲ್ಲ. ಆದ್ದರಿಂದ ನಾವು ಮೊಟ್ಟೆಗಳನ್ನು ನನ್ನ ಮನೆಗೆ ಸ್ಥಳಾಂತರಿಸಲು ನಿರ್ಧರಿಸಿದೆವು ಎಂದು ಅವರು ಹೇಳಿದರು.
ಅಮೀನ್ ಬಿಲದೊಳಗೆ ಹೋಗಿ ಮೊಟ್ಟೆಗಳನ್ನು ತೆಗೆದುಕೊಂಡು ಬಂದರು. “ತಾಯಿ ಬಿಲದೊಳಗಿನ ಮತ್ತೊಂದು ರಂಧ್ರದಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಕಾಸರಗೋಡಿನ ಅಡ್ಕತ್‌ಬೈಲ್‌ನಲ್ಲಿರುವ ಅವರ ಮನೆಯಲ್ಲಿ 24 ಮೊಟ್ಟೆಗಳು ಮರಿಯಾದವು. ನಂತರ ಹೆಬ್ಬಾವು ಹಾಗೂ ಅದರ ಮರಿಗಳನ್ನು ಕಾಡಿಗೆ ಬಿಡಲಾಯಿತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಬಿಹಾರ ಸರ್ಕಾರದ ಸಭೆಗಳಲ್ಲಿ ಈಗ ಲಾಲು ಅಳಿಯನ ದರ್ಬಾರ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement