ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 32 ಶೈಕ್ಷಣಿಕ ಜಿಲ್ಲೆಗೆ ಎ ಗ್ರೇಡ್, ಮೊದಲನೇ ಸ್ಥಾನ ಹಂಚಿಕೊಂಡ 145 ವಿದ್ಯಾರ್ಥಿಗಳು

posted in: ರಾಜ್ಯ | 0

ಬೆಂಗಳೂರು: 021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಶೇ.85.63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಜಿಲ್ಲಾವಾರು ರ್ಯಾಂಕಿಂಗ್​ ಕೈಬಿಡಲಾಗಿದೆ.
ಶ್ರೇಣಿ ಆಧರಿಸಿ ಜಿಲ್ಲೆಗಳ ಗುಣಾತ್ಮಕ ಫಲಿತಾಂಶ ವಿಶ್ಲೇಷಿಸಲಾಗಿದೆ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 32 ಜಿಲ್ಲೆಗಳು ಎ ಶ್ರೇಣಿ ಪಡೆದಿವೆ. ಬಿ ಶ್ರೇಣಿಗೆ ಸೇರಿರುವ ಜಿಲ್ಲೆಗಳಲ್ಲಿ ಬೆಂಗಳೂರು ದಕ್ಷಿಣ ಹಾಗೂ ಯಾದಗಿರಿ ಮಾತ್ರ ಸೇರಿವೆ. ಸಿ ಶ್ರೇಣಿಯಲ್ಲಿ ಯಾವುದೇ ಜಿಲ್ಲೆಗಳಿಲ್ಲ. ಉಳಿದ 32 ಜಿಲ್ಲೆಗಳು ಎ ಗ್ರೇಡ್​ ಪಡೆದಿವೆ.ಒಟ್ಟು 40,061 ವಿದ್ಯಾರ್ಥಿಗಳು ಕೃಪಾಂಕದಿಂದ ಪಾಸ್​ ಆಗಿದ್ದಾರೆ.
ಶೇ.75-100ರ ವರೆಗಿನ ಫಲಿತಾಂಶಕ್ಕೆ ಎ ಶ್ರೇಣಿ, ಶೇ.60-75ರ ವರೆಗೆ ಪಾಸಾಗಿದ್ದರೆ ಬಿ ಶ್ರೇಣಿ ಹಾಗೂ ಶೇ.60ಕ್ಕಿಂತ ಕಡಿಮೆ ಉತ್ತೀರ್ಣತೆ ಹೊಂದಿರುವ ಜಿಲ್ಲೆಗಳಿಗೆ ಸಿ ಶ್ರೇಣಿ ನಿಗದಿ ಪಡಿಸಲಾಗಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 8,73,859 ವಿದ್ಯಾರ್ಥಿಗಳ ಪೈಕಿ 8,53,436 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ.85.63 ಫಲಿತಾಂಶ ದಾಖಲಾಗಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಫಲಿತಾಂಶ ಬಂದಿದೆ. ಒಟ್ಟು 145 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
8,53,436 ವಿದ್ಯಾರ್ಥಿಗಳ ಪೈಕಿ 40,061 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ. ಒಂದು ವಿಷಯಕ್ಕೆ 35,931 ಮಂದಿಗೆ, ಎರಡು ವಿಷಯಗಳಿಗೆ 3,940 ವಿದ್ಯಾರ್ಥಿಗಳಿಗೆಹಾಗೂ 190 ವಿದ್ಯಾರ್ಥಿಗಳಿಗೆ ಮೂರು ವಿಷಯಗಳಿಗೆ ಕೃಪಾಂಕ ನೀಡಲಾಗಿದೆ. . 1 ಅಂಕದಿಂದ ಗರಿಷ್ಠ 26 ಅಂಕದವರೆಗೂ ಕೃಪಾಂಕಗಳನ್ನು ನೀಡಲಾಗಿದೆ ಎಂದು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಶವ ತಂದಿಟ್ಟು ಪ್ರತಿಭಟನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ