ತಾಲಿಬಾನ್‌ನಿಂದ ಹೊಸ ನಿಯಮ: ಟಿವಿ ಚಾನೆಲ್‌ಗಳಲ್ಲಿ ನಿರೂಪಕಿಯರು ಮುಖ ಮುಚ್ಚಿಕೊಂಡೇ ಕಾರ್ಯಕ್ರಮ ನೀಡ್ಬೇಕಂತೆ..!

ಕಾಬೂಲ್: ಇತ್ತೀಚೆಗಷ್ಟೇ ಮಹಿಳೆಯರಿಗೆ ಶಿಕ್ಷಣ, ಮಹಿಳಾ ಉದ್ಯೋಗಿಗಳಿಗೆ ನಿಷೇಧ ಮತ್ತು ಮಹಿಳೆಯರ ಚಾಲನಾ ಪರವಾನಗಿ ರದ್ದು, ಮಾನವ ಹಕ್ಕುಗಳ ಆಯೋಗ ರದ್ದು ಸೇರಿದಂತೆ ಹಲವು ವಿವಾದಿತ ಕ್ರಮ ಕೈಗೊಂಡಿದ್ದ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈಗ ಟಿವಿ ಚಾನೆಲ್‌ಗಳಲ್ಲಿ ಕೆಲಸ ಮಾಡುವ ಎಲ್ಲ ಮಹಿಳಾ ನಿರೂಪಕರಿಗೆ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಾಗ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುವಂತೆ ನಿರ್ದೇಶಿಸಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರವನ್ನು ವಶಪಡಿಸಿಕೊಂಡಂದಿನಿಂದ ಅಫ್ಘಾನ್ ಮಹಿಳೆಯರ ವಿರುದ್ಧ ಅವರ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ.
ತಾಲಿಬಾನ್ ತನ್ನ ಅಧಿಕೃತ ಆದೇಶದಲ್ಲಿ, ಅಫ್ಘಾನಿಸ್ತಾನದ ಯುಎನ್ ಅಸಿಸ್ಟೆನ್ಸ್ ಮಿಷನ್ (UNAMA) ನ ಮಹಿಳಾ ಸಿಬ್ಬಂದಿಗೆ ಕಚೇರಿಗಳಲ್ಲಿ ಹಿಜಾಬ್ ಧರಿಸಲು ನಿರ್ದೇಶಿಸಿದೆ. ಹಾಗೂ ಅಫ್ಘಾನಿಸ್ತಾನದ ಮಹಿಳೆಯರು ಮೇಕಪ್ ಮಾಡುವಂತಿಲ್ಲ ಎಂದು ಸೂಚಿಸಿದೆ.
ಈಗಾಗಲೇ 6 ನೇ ತರಗತಿಗಿಂತ ಮೇಲ್ಪಟ್ಟ ತರಗತಿಗಳ ಹೆಣ್ಣುಮಕ್ಕಳಿಗೆ ಶಿಕ್ಷಣದ ಮೇಲೆ ನಿಷೇಧ ಹೇರಲಾಗಿದೆ. ಮಹಿಳೆಯರು ಈ ಆದೇಶವನ್ನು ಪಾಲಿಸದಿದ್ದರೆ ಅವರ ಪೋಷಕರಿಗೆ ಶಿಕ್ಷೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಾಲಿಬಾನ್ ಎಚ್ಚರಿಸಿದೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement