ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ಹೆಂಡತಿಗೆ ಕತ್ತಿಯಿಂದ ಹೊಡೆದುಕೊಂದ ಗಂಡ

posted in: ರಾಜ್ಯ | 0

ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಹೆಂಡತಿ ಮೇಲೆ ಗಂಡ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಹೆಂಡತಿ ಸಾವಿಗೀಡಾದ ಘಟನೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗೋಡ್‌ಮನೆಯಲ್ಲಿ ಶುಕ್ರವಾರ (ಮೇ 20)
ನಡೆದ ಬಗ್ಗೆ ವರದಿಯಾಗಿದೆ.
ಮೃತ ಮಹಿಳೆಯನ್ನು ನಾಗರತ್ನ ಮಂಜುನಾಥ ಚನ್ನಯ್ಯ (38) ಎಂದು ಗುರುತಿಸಲಾಗಿದೆ.

advertisement

ಮಂಜುನಾಥ ಕೇರಿಯ ಚೆನ್ನಯ್ಯ ಎನ್ನುವವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ ವಿಪರೀತ ಸಾರಾಯಿ ಕುಡಿಯುವ ಹವ್ಯಾಸ ರೂಢಿಸಿಕೊಂಡಿದ್ದ ಮಂಜುನಾಥ ಆಗಾಗ ಹೆಂಡತಿಯ ಜೊತೆ ಜಗಳ ಮಾಡುತ್ತಿದ್ದ ಎಂದು ಹೇಳಲಾಗಿದೆ. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಗಂಡ ಹೆಂಡತಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಸಿಟ್ಟಿಗೆದ್ದ ಮಂಜುನಾಥ ಮನೆಯ ಜಗಲಿ ಕಟ್ಟೆ ಮೇಲೆ ಹೂವು ಕಟ್ಟುತ್ತಾ ಕುಳಿತಿದ್ದ ಹೆಂಡತಿಯ ಕುತ್ತಿಗೆಗೆ ಹಾಗೂ ತಲೆಗೆ ಕತ್ತಯಿಂದ ಹಲ್ಲೆ ನಡೆಸಿ ಹಲ್ಲೆ ನಡೆಸಿದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ. ಹೊಡೆತದ ತೀವ್ರತೆಗೆ ಪತ್ನಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಕೊಲೆ ಬಳಿಕ  ಗಂಡ ಪರಾರಿಯಾಗಿದ್ದ  ಪಕ್ಕದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿದ್ಧಾಪುರ ಠಾಣಾ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ: ಐವರು ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement