ಎನ್‌ಐಎ ಅಧಿಕಾರಿ-ಪತ್ನಿ ಹತ್ಯೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್‌

ಬಿಜ್ನೋರ್‌ : 2016ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹಿರಿಯ ಅಧಿಕಾರಿ ತೆಂಜಿಲ್‌ ಅಹ್ಮದ್ ಹಾಗೂ ಅವರ ಪತ್ನಿ ಹತ್ಯೆಯ ಅಪರಾಧಿಗಳಿಗೆ  ಉತ್ತರ ಪ್ರದೇಶದ ಬಿಜ್ನೋರ್‌ನ ಹೆಚ್ಚುವರಿ ಜಿಲ್ಲಾ ಮರಣದಂಡನೆ ವಿಧಿಸಿದೆ.
2016 ಏಪ್ರಿಲ್‌ 2ರ ಮಧ್ಯರಾತ್ರಿ ಈ ಹತ್ಯೆ ನಡೆದಿತ್ತು. ಇಂಡಿಯನ್ ಮುಜಾಹಿದೀನ್‌ಗೆ ಸಂಬಂಧಿಸಿದ ಭಯೋತ್ಪಾದನಾ ಪ್ರಕರಣಗಳ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿ ತಂಜಿಲ್ ಅಹ್ಮದ್ ಹಾಗೂ ಅವರ ಪತ್ನಿ ಫರ್ಜಾನಾ ಅವರು 2016ರ ಏಪ್ರಿಲ್ 2 ಮತ್ತು 3ರ ಮಧ್ಯರಾತ್ರಿ ದೆಹಲಿ ಮನೆಗೆ ಹಿಂದಿರುಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅವರ ಕಾರನ್ನು ನಿಲ್ಲಿಸಿ ಅವರ ಇಬ್ಬರು ಮಕ್ಕಳು ಮುಂದೆಯೇ ಗುಂಡಿಕ್ಕಿ ಕೊಂದಿದ್ದರು.

ಸದ್ಯ ಇಬ್ಬರೂ ಸೋನಭದ್ರ ಜೈಲಿನಲ್ಲಿರುವ ಅಪರಾಧಿಗಳಾದ ಮುನೀರ್‌ ಹಾಗೂ ಆತನ ಸಹಚರ ರಾಯನ್‌ ಎಂಬುವವರಿಗೆ ಉತ್ತರಪ್ರದೇಶದ ಬಿಜ್ನೋರ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ್‌ ಈಗ ಗಲ್ಲು ಶಿಕ್ಷೆ ವಿಧಿಸಿದ್ದಾರೆ.
ಈ ಬಗ್ಗೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್‌ ವರಿಷ್ಠಾಧಿಕಾರಿ ಧರಂವೀರ್ ಸಿಂಗ್‌, ‘ತನಿಖೆಯ ವೇಳೆ, ಕೊಲೆಯಲ್ಲಿ ಮುನೀರ್, ರಾಯನ್, ಜೈನಿ, ತಂಜಿಮ್ ಅಹಮದ್ ಮತ್ತು ರಿಜ್ವಾನ್ ಪಾತ್ರವಿರುವುದು ಕಂಡುಬಂದಿತ್ತು, ಎಲ್ಲಾ ಆರೋಪಿಗಳು ಎನ್ಐಎ ಅಧಿಕಾರಿಯ ನೆರೆಹೊರೆಯವರಾಗಿದ್ದು, ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಪ್ರಕರಣದಲ್ಲಿ 19 ಪ್ರಾಸಿಕ್ಯೂಷನ್ ಸಾಕ್ಷಿಗಳ ಆಧಾರದಲ್ಲಿ ಮುನೀರ್ ಮತ್ತು ರಾಯನ್ ಅವರನ್ನು ದೋಷಿಗಳೆಂದು ತೀರ್ಪು ನೀಡಿದ ನ್ಯಾಯಾಲಯ, ಜೈನಿ, ತಂಜಿಮ್ ಅಹ್ಮದ್ ಮತ್ತು ರಿಜ್ವಾನ್ ಅವರನ್ನು ಖುಲಾಸೆಗೊಳಿಸಿದೆ ಎಂದು ಸಿಂಗ್ ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement