ಈಗ ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ನಡೆಸಲು ಎಎಸ್‌ಐಗೆ ಸರ್ಕಾರ ಆದೇಶ

ನವದೆಹಲಿ: ಜ್ಞಾನವಾಪಿ ಮಸೀದಿ ಸಮೀಕ್ಷೆಯ ನಂತರ, ದೆಹಲಿಯ ಕುತುಬ್ ಮಿನಾರ್ ಬಗ್ಗೆ ವಿವಾದ ಭುಗಿಲೆದ್ದಿತು. ಹಿಂದೂ ದೇವತೆಗಳ ವಿಗ್ರಹಗಳು ಅದರಲ್ಲಿ ಕಂಡುಬಂದಿವೆ ಮತ್ತು ಸ್ಮಾರಕವನ್ನು ಹಿಂದೂ ಚಕ್ರವರ್ತಿ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ ಎಂದು ಹೇಳಲಾಗಿದೆ. ಈಗ ಕುತುಬ್ ಮಿನಾರ್‌ನಲ್ಲಿ ವಿಗ್ರಹಗಳ ಉತ್ಖನನ ಮತ್ತು ಪ್ರತಿಮಾ ಶಾಸ್ತ್ರವನ್ನು ನಡೆಸಲು ಸಂಸ್ಕೃತಿ ಸಚಿವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸೂಚನೆ ನೀಡಿದೆ ಎಂದು ಇಂಡಿಯಾ ಟುಡೆ.ಇನ್‌ ವರದಿ ಮಾಡಿದೆ.
ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಅವರು ಕುತುಬ್ ಮಿನಾರ್ ಅನ್ನು ರಾಜ ವಿಕ್ರಮಾದಿತ್ಯ ನಿರ್ಮಿಸಿದ್ದಾರೆ ಮತ್ತು ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ಅದನ್ನು ನಿರ್ಮಿಸಿದ್ದು, ಕುತುಬ್ ಅಲ್-ದಿನ್ ಐಬಕ್ ನಿರ್ಮಿಸಿಲ್ಲ ಎಂದು ಹೇಳಿಕೆ ನೀಡಿದ ನಂತರ ಈ ವಿವಾದ ಸ್ಫೋಟಗೊಂಡಿದೆ.

ಸಂಸ್ಕೃತಿ ಸಚಿವಾಲಯವು ಉತ್ಖನನ ವರದಿಯನ್ನು ಸಲ್ಲಿಸುವಂತೆ ಎಎಸ್‌ಐಗೆ ಸೂಚಿಸಿದ್ದು, ಮಸೀದಿಯಿಂದ 15 ಮೀಟರ್ ದೂರದಲ್ಲಿ ಮಿನಾರ್‌ನ ದಕ್ಷಿಣದಲ್ಲಿ ಉತ್ಖನನವನ್ನು ಪ್ರಾರಂಭಿಸಬಹುದು. ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್ ಅವರು ಮೇ 21 ರ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಂಡರು ಎಂದು ವರದಿ ಹೇಳಿದೆ.
ಗೋವಿಂದ್ ಮೋಹನ ಅವರು ಮೂವರು ಇತಿಹಾಸಕಾರರು, ನಾಲ್ವರು ಎಎಸ್ಐ ಅಧಿಕಾರಿಗಳು ಮತ್ತು ಸಂಶೋಧಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಕುತುಬ್ ಮಿನಾರ್ ಸಂಕೀರ್ಣದಲ್ಲಿ 1991 ರಿಂದ ಉತ್ಖನನ ಕಾರ್ಯ ನಡೆದಿಲ್ಲ ಎಂದು ಎಎಸ್ಐ ಅಧಿಕಾರಿಗಳು ಕಾರ್ಯದರ್ಶಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

ಈ ಹಿಂದೆ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ವಕ್ತಾರ ವಿನೋದ್ ಬನ್ಸಾಲ್, ಕುತುಬ್ ಮಿನಾರ್ ವಾಸ್ತವವಾಗಿ ‘ವಿಷ್ಣು ಸ್ತಂಭ’ ಮತ್ತು 27 ಹಿಂದೂ-ಜೈನ ದೇವಾಲಯಗಳನ್ನು ಕೆಡವಿ ಪಡೆದ ವಸ್ತುಗಳಿಂದ ಈ ರಚನೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದರು.
ಕುತುಬ್ ಮಿನಾರ್‌ನಲ್ಲಿ 1200 ವರ್ಷಗಳಷ್ಟು ಹಳೆಯದಾದ ನರಸಿಂಹನ ವಿಗ್ರಹ, ಗಣಪತಿ ಮತ್ತು ಕೃಷ್ಣನ ವಿಗ್ರಹಗಳು ಪತ್ತೆಯಾದ ನಂತರ ಹಲವಾರು ಹಿಂದೂ ಗುಂಪುಗಳು ಪ್ರತಿಭಟನೆಗಳನ್ನು ನಡೆಸಿದವು, ಹನುಮಾನ್ ಚಾಲೀಸಾವನ್ನು ಪಠಿಸುತ್ತಾ ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದವು.
ಕುತುಬ್ ಮಿನಾರ್ ಅಲ್ಲದೆ, ಮೆಹ್ರೌಲಿಯ ಲಾಲ್ಕೋಟ್ ಕೋಟೆ ಮತ್ತು ಅನಂಗ್ತಾಲ್‌ನಲ್ಲಿಯೂ ಉತ್ಖನನ ನಡೆಯಲಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement