ಗಾಂಜಾ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ತಾನೇ ಕತ್ತರಿಸಿಕೊಂಡ..! ಧರ್ಮದ ಭಯಕ್ಕೆ ಈ ಕೃತ್ಯ…!

ಅಸ್ಸಾಂನಲ್ಲಿ ಮೇ 19 ರಂದು ಬೆಳಕಿಗೆ ಬಂದ ಈ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ಡ್ರಗ್ಸ್‌ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.
ಎಂಡಿ ಸಹಜುಲ್ ಅಲಿ ಎಂಬ ವ್ಯಕ್ತಿ ಗಾಂಜಾ ಸೇದಿದ ನಂತರ ತನ್ನ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಸೋನಿತ್‌ಪುರ ಜಿಲ್ಲೆಯ ದೇಕರ್ ​​ಗ್ರಾಮದವರಾದ ಅಲಿ ಮಾನಸಿಕವಾಗಿ ತೊಂದರೆಗೊಳಗಾಗಿದ್ದಾನೆ ಎಂದು ವರದಿಯಾಗಿದೆ. ಆತ ಗಾಂಜಾ ಸೇದುತ್ತಿದ್ದ ಮತ್ತು ಮನೋವಿಕಾರದ ಸ್ಥಿತಿಯಲ್ಲಿ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಸಹಜುಲ್ ಅಲಿ ಇತರ ಹಾರ್ಡ್ ಡ್ರಗ್ಸ್ ಕೂಡ ಸೇವಿಸುತ್ತಿದ್ದ ಎಂದು ಹೇಳಲಾಗಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ತನ್ನ ಧರ್ಮದಲ್ಲಿ ಗಾಂಜಾ ಸೇವನೆಯನ್ನು ಪಾಪವೆಂದು ಪರಿಗಣಿಸಲಾಗುತ್ತದೆ. ಆದರೆ ಅಲಿ ಸೈಕೋಆಕ್ಟಿವ್ ಡ್ರಗ್ ಇಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ, ತಾನು ತನ್ನ ಪಾಪಗಳಿಗಾಗಿ ಪಶ್ಚಾತ್ತಾಪ ಪಡಲು ಮರ್ಮಾಂಗ ಕತ್ತರಿಸಿಕೊಂಡಿದ್ದೇನೆ ಎಂದು ಗುವಾಹಟಿ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸಹಜುಲ್ ಅಲಿ ಹೇಳಿದ್ದಾನೆ.

“ನನ್ನ ಧರ್ಮವು ನನಗೆ ಗಾಂಜಾವನ್ನು ತೆಗೆದುಕೊಳ್ಳಲು ಅನುಮತಿಸುವುದಿಲ್ಲ. ನಾನು ಅದನ್ನು ಸೇದಿದ ನಂತರ, ಸಮಾಜಕ್ಕೆ ಏನಾದರೂ ಕೆಟ್ಟದ್ದು ಸಂಭವಿಸಲಿದೆ ಎಂದು ನಾನು ಚಿಂತಿಸುತ್ತಿದ್ದೆ. ನನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುವುದಕ್ಕಾಗಿ ನಾನು ಈ ರೀತಿ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾನೆ.
ತಾನು ಬದುಕುಳಿದರೆ ಹೆಚ್ಚಿನ ಒಳಿತಿಗಾಗಿ” ಮತ್ತೊಮ್ಮೆ ಅಂತಹ ಕೆಲಸವನ್ನು ಮಾಡಲು ಸಿದ್ಧನಿದ್ದೇನೆ ಎಂದೂ ಹೇಳುತ್ತಾನೆ. ಸಹಜುಲ್ ಅಲಿ ಪುತ್ರ, ನನ್ನ ತಂದೆ ಮಾನಸಿಕವಾಗಿ ಅಸ್ಥಿರರಾಗಿದ್ದಾರೆ. ಧರ್ಮದ ಭಯದಿಂದ ಇಂತಹ ವಿಲಕ್ಷಣ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದ್ದಾನೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಉದಯಪುರದಲ್ಲಿ ಟೈಲರ್‌ ಶಿರಚ್ಛೇದ ಪ್ರಕರಣ: ಹಂತಕರನ್ನು ಪೊಲೀಸರು ಹಿಡಿದ ವೀಡಿಯೊ ವೈರಲ್ | ನೋಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ