ಭಾರೀ ಮಳೆಯ ನಡುವೆ ಪ್ರಬಲ ಗಾಳಿಗೆ ರೋಪ್‌ ವೇಯಲ್ಲಿ ಸಿಲುಕಿಕೊಂಡ 28 ಭಕ್ತರು | ವೀಕ್ಷಿಸಿ

ಭೋಪಾಲ್ :‌ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆಯ ನಡುವೆ ಮೈಹಾರ್ ಬೆಟ್ಟದ ಮಾ ಶಾರದಾ ದೇವಿ ದೇವಸ್ಥಾನಕ್ಕೆ ಭೇಟಿಗೆ ಸುಮಾರು 28 ಭಕ್ತರು ಪ್ರಯಾಣಿಸುತ್ತಿದ್ದ ರೋಪ್‌ವೇ ಟ್ರಾಲಿ ಗಾಳಿಯಲ್ಲಿ ಸಿಲುಕಿಕೊಂಡಿತು.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ತಲಾ ನಾಲ್ಕು ಜನರನ್ನು ಒಳಗೊಂಡ ಏಳು ಟ್ರಾಲಿಗಳು ಸುಮಾರು 40 ನಿಮಿಷಗಳ ಕಾಲ ಗಾಳಿಯ ರಭಸಕ್ಕೆ ತೂಗಾಡುತ್ತಲೇ ಇದ್ದವು.
ಈ ಪ್ರದೇಶದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ರೋಪ್‌ವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದರೂ, ರೋಪ್‌ವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರಲಿಲ್ಲ ಎಂದು ವರದಿಗಳು ತಿಳಿಸಿವೆ.

ಟ್ರಾಲಿಗಳನ್ನು ಕೆಳಗಿಳಿಸುವಲ್ಲಿ ರೋಪ್‌ವೇ ನಿರ್ವಹಣೆ ಮಾಡುವವರು ಯಶಸ್ವಿಯಾಗಿದ್ದು, ಯಾವುದೇ ದೊಡ್ಡ ಅನಾಹುತ ಸಂಭವಿಸದೆ ಎಲ್ಲ ಭಕ್ತರನ್ನು ರಕ್ಷಿಸಲಾಯಿತು.
ಕಳೆದ ತಿಂಗಳು, ಜಾರ್ಖಂಡ್‌ನ ದಿಯೋಘರ್‌ನಲ್ಲಿ ನಡೆದ ಪ್ರಮುಖ ರೋಪ್‌ವೇ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದರು ಮತ್ತು ಹಲವರು ಗಾಯಗೊಂಡಿದ್ದರು.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಂಗಡಿಯವನ‌ ತಲೆ ಕಡಿದರು : ಪ್ರಧಾನಿ ಮೋದಿಗೂ ಬೆದರಿಕೆ
advertisement

ನಿಮ್ಮ ಕಾಮೆಂಟ್ ಬರೆಯಿರಿ