ಶಿವಲಿಂಗ ಎಂಬುದು ‘ತಮಾಷೆ’ ವಿಷಯವಲ್ಲ : ʼಉದಾರವಾದಿʼ ಕಾಂಗ್ರೆಸ್‌ ನಾಯಕರ ಟೀಕಿಸಿದ ಕಾಂಗ್ರೆಸ್ಸಿನ ಪ್ರಮೋದ್ ಕೃಷ್ಣಂ

ನವದೆಹಲಿ: ಶಿವಲಿಂಗ ಎಂಬುದು ‘ತಮಾಷೆ’ ವಿಷಯವಲ್ಲ ಎಂದು ಕಾಂಗ್ರೆಸ್ಸಿನ ಹಿರಿಯ ಮತ್ತು ‘ಅಧ್ಯಾತ್ಮಿಕ ಗುರು’ ಪ್ರಮೋದ ಕೃಷ್ಣಂ ಹೇಳಿದ್ದಾರೆ.
ಜ್ಞಾನವಾಪಿ ಪ್ರಕರಣದ ಕುರಿತು ಪಕ್ಷದ ಕೆಲವು ನಾಯಕರ ಪ್ರತಿಕ್ರಿಯೆಗಳ ಬಗ್ಗೆ ಬಲವಾಗಿ ಟೀಕಿಸಿದ್ದಾರೆ.
ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಆಗಿರಲಿ ಅಥವಾ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಗಿರಲಿ, ‘ಶಿವಲಿಂಗ’ವನ್ನು ‘ತಮಾಷೆ’ ಎಂದು ಕರೆಯಲಾಗುವುದಿಲ್ಲ. ಇದು ನಂಬಿಕೆಯ ವಿಷಯ. ದುರದೃಷ್ಟವಶಾತ್, ನಮ್ಮ ಪಕ್ಷದ ಕೆಲವು ನಾಯಕರು ತಮ್ಮನ್ನು ಹೆಚ್ಚು ಉದಾರವಾದಿಗಳೆಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ‘ಶಿವಲಿಂಗ’ವನ್ನು ಗೇಲಿ ಮಾಡುತ್ತಿದ್ದಾರೆ” ಎಂದು ಪ್ರಮೋದ ಕೃಷ್ಣಂ ಹೇಳಿದ್ದಾರೆ.

ವಾರಾಣಸಿಯ ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಬಿಜೆಪಿ ದೇಶದಲ್ಲಿ ಹೊಸ ನಾಟಕ ಸೃಷ್ಟಿಸುತ್ತಿದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಅದರ ನಾಯಕರು ಪ್ರಜಾಪ್ರಭುತ್ವದ ಮುಖವಾಡ ಧರಿಸಿ ರಾಜಕೀಯ ಮಾಡುತ್ತಿದ್ದಾರೆ. ಈ ಜನರ ನೀತಿಗಳು, ಕಾರ್ಯಕ್ರಮಗಳು ಮತ್ತು ತತ್ವಗಳು ದೇಶವನ್ನು ಹಾಳುಮಾಡಲಿವೆ” ಎಂದು ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ‘ಶಿವಲಿಂಗ’ ಪತ್ತೆಯಾದ ಕೆಲವು ದಿನಗಳ ನಂತರ ರಾಜಸ್ಥಾನದ ಮುಖ್ಯಮಂತ್ರು ಗೆಹ್ಲೋಟ್ ಹೇಳಿದ್ದರು.
ಹಿಂದೂಗಳ ನಂಬಿಕೆಗಳನ್ನು ಅಪಹಾಸ್ಯ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

“ಮತ್ತೊಮ್ಮೆ ಕಾಂಗ್ರೆಸ್ ಹಿಂದೂ ಅಸ್ತಾವನ್ನು ಅಪಹಾಸ್ಯ ಮಾಡಿದೆ. ಅಶೋಕ್ ಗೆಹ್ಲೋಟ್ ಇದು ‘ತಮಾಷೆ’ ಎನ್ನುತ್ತಾರೆ. ಬಾಬಾರ ಮೇಲಿನ ಭಕ್ತಿ ಕಾಂಗ್ರೆಸ್ಸಿಗೆ ತಮಾಷೆಯೇ? ಶಿವಲಿಂಗ ಸಂರಕ್ಷಿಸಲು ಕೋರ್ಟ್ ಆದೇಶ ತಮಾಷೆಯೇ? ಹಿಂದೂಗಳನ್ನು ಅಪಹಾಸ್ಯ ಮಾಡುವುದು ಕಾಂಗ್ರೆಸ್‌ನ ಡಿಎನ್‌ಎಯೇ – ಅವರು ಶ್ರೀರಾಮನ ಅಸ್ತಿತ್ವವನ್ನು ನಿರಾಕರಿಸಿದರು – ಅವರು ಹಿಂದುತ್ವವನ್ನು ಐಸಿಸ್ ಎಂದು ಲೇಬಲ್ ಮಾಡಿದ್ದಾರೆ ”ಎಂದು ಪೂನಾವಲ್ಲ ಟ್ವೀಟ್ ಮಾಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement