ಸಾಹಿಬ್‌ಗಂಜ್(ಜಾರ್ಖಂಡ್): ಜಾರ್ಖಂಡ್‌ನಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪ್ರಚಾರದ ವೇಳೆ ಅವರ ಬೆಂಬಲಿಗರು ಕೈಯಲ್ಲಿ ಬಂದೂಕು ಹಿಡಿದು ಓಡಾಡಿರುವ ವಿಡಿಯೋ ವೈರಲ್ ಆಗಿದೆ.
ಇದು ಜಾರ್ಖಂಡ್ನ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಜಿಲ್ಲಾ ಪರಿಷತ್ ಅಭ್ಯರ್ಥಿ ಸುನಿಲ ಯಾದವ್ ಎಂಬುವವರು ಬಂದೂಕು ಸಮೇತ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಈ ವಿಡಿಯೋವನ್ನು ಬಿಜೆಪಿ ಮುಖಂಡ ಬಾಬುಲಾಲ್ ಮರಾಂಡಿ ಅವರು ಟ್ವೀಟ್ ಮಾಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದೆ.

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/ಬಂದೂಕು ಹಿಡಿದು ಚುನಾವಣಾ ಪ್ರಚಾರ ನಡೆಸಿದ ವೀಡಿಯೊವನ್ನು ಬಿಜೆಪಿ ಮುಖಂಡರು ಟ್ವೀಟ್ ಮಾಡಿದ ನಂತರ ಕೋಲಾಹಲವೆದ್ದಿದೆ. ಸರ್ಕಾರದ ವಿರುದ್ಧ ಹಲವು ಅನುಮಾನಗಳು ಮೂಡಿವೆ. ಅಲ್ಲದೇ, ಇದು ಸಾಹಿಬ್‌ಗಂಜ್‌ನಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರದ ಮಾದರಿ. ಮಾರಕಾಯುಧ ಹಿಡಿದು ಮತದಾರರಿಗೆ ಬೆದರಿಕೆ ಹಾಕುತ್ತಿರುವವರು ಯಾರು? ಈ ಗೂಂಡಾಗಿರಿ, ಮಾಫಿಯಾಗಿರಿಯನ್ನು ಕೊನೆಗಾಣಿಸಿ ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಬಂದೂಕು ಹಿಡಿದು ಪ್ರಚಾರ ನಡೆಸಿದ ವಿಡಿಯೋ ವೈರಲ್ ಆದ ಬಳಿಕ ಈ ಬಗ್ಗೆ ಕ್ರಮಕ್ಕೆ ಮುಂದಾದ ಪೊಲೀಸರು ಅಭ್ಯರ್ಥಿಯ ಬೆಂಬಲಿಗರಿಂದ 7 ಪಿಸ್ತೂಲುಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಮುಫಾಸಿಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ