ಬಂದೂಕು ಹಿಡಿದು ಚುನಾವಣಾ ಪ್ರಚಾರ…! ದೃಶ್ಯ ಮೊಬೈಲ್‌ನಲ್ಲಿ ಸೆರೆ

ಸಾಹಿಬ್‌ಗಂಜ್(ಜಾರ್ಖಂಡ್​): ಜಾರ್ಖಂಡ್‌ನಲ್ಲಿ ಜಿಲ್ಲಾ ಪರಿಷತ್​ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪ್ರಚಾರದ ವೇಳೆ ಅವರ ಬೆಂಬಲಿಗರು ಕೈಯಲ್ಲಿ ಬಂದೂಕು ಹಿಡಿದು ಓಡಾಡಿರುವ ವಿಡಿಯೋ ವೈರಲ್ ಆಗಿದೆ.
ಇದು ಜಾರ್ಖಂಡ್​ನ ಸಾಹಿಬ್​ಗಂಜ್​ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಜಿಲ್ಲಾ ಪರಿಷತ್ ಅಭ್ಯರ್ಥಿ ಸುನಿಲ ಯಾದವ್ ಎಂಬುವವರು ಬಂದೂಕು ಸಮೇತ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಈ ವಿಡಿಯೋವನ್ನು ಬಿಜೆಪಿ ಮುಖಂಡ ಬಾಬುಲಾಲ್ ಮರಾಂಡಿ ಅವರು ಟ್ವೀಟ್ ಮಾಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದೆ.

ಬಂದೂಕು ಹಿಡಿದು ಚುನಾವಣಾ ಪ್ರಚಾರ ನಡೆಸಿದ ವೀಡಿಯೊವನ್ನು ಬಿಜೆಪಿ ಮುಖಂಡರು ಟ್ವೀಟ್‌ ಮಾಡಿದ ನಂತರ ಕೋಲಾಹಲವೆದ್ದಿದೆ. ಸರ್ಕಾರದ ವಿರುದ್ಧ ಹಲವು ಅನುಮಾನಗಳು ಮೂಡಿವೆ. ಅಲ್ಲದೇ, ಇದು ಸಾಹಿಬ್‌ಗಂಜ್‌ನಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರದ ಮಾದರಿ. ಮಾರಕಾಯುಧ ಹಿಡಿದು ಮತದಾರರಿಗೆ ಬೆದರಿಕೆ ಹಾಕುತ್ತಿರುವವರು ಯಾರು? ಈ ಗೂಂಡಾಗಿರಿ, ಮಾಫಿಯಾಗಿರಿಯನ್ನು ಕೊನೆಗಾಣಿಸಿ ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬಂದೂಕು ಹಿಡಿದು ಪ್ರಚಾರ ನಡೆಸಿದ ವಿಡಿಯೋ ವೈರಲ್​ ಆದ ಬಳಿಕ ಈ ಬಗ್ಗೆ ಕ್ರಮಕ್ಕೆ ಮುಂದಾದ ಪೊಲೀಸರು ಅಭ್ಯರ್ಥಿಯ ಬೆಂಬಲಿಗರಿಂದ 7 ಪಿಸ್ತೂಲುಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಮುಫಾಸಿಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement