ಹೊಲದಲ್ಲಿ ಉಳುಮೆ ಮಾಡಿ ಭಗವಂತನಿಗೆ ನಮನ ಸಲ್ಲಿಸಿದ ಕನ್ನಡದ ಸ್ಟಾರ್‌ ನಟಿ ಶ್ರುತಿ…! ವೀಕ್ಷಿಸಿ

ಕನ್ನಡದ ನಟಿ ಶ್ರುತಿ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ಹೊಲಕ್ಕಿಳಿದು ಉಳುಮೆ ಮಾಡಲು ಆರಂಭಿಸಿದ್ದಾರೆ. ತಾನು ಕೃಷಿ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಹೆಸರು ಮಾಡಿರುವ ನಟಿ ಶ್ರುತಿ, ಈಗ ಸಿನಿಮಾ ಮತ್ತು ರಿಯಾಲಿಟಿ ಶೋ ಎರಡರಲ್ಲೂ ಸಖತ್ ಬ್ಯುಸಿ. ಇದರ ಮಧ್ಯೆಯೇ ಕೃಷಿಯಲ್ಲಿ ತೊಡಗಿಕೊಳ್ಳಲು ಮನಸ್ಸು ಮಾಡಿದ್ದಾರೆ.

ಈಗ ಹೊಲಕ್ಕಿಳಿದು ಉಳುಮೆ ಮಾಡುತ್ತಿದ್ದಾರೆ. ಅವರು ಉಳುಮೆ ಮಾಡುತ್ತಿರುವ ವೀಡಿಯೋ ಭಾರೀ ವೈರಲ್ ಆಗಿದೆ.ನೇಗಿಲು ಹಿಡಿದು ಉಳುಮೆ ಮಾಡುತ್ತಿರುವ ಶ್ರುತಿಗೆ ಮಗಳು ಗೌರಿ ಮತ್ತು ತಾಯಂದಿರು ಕೂಡ ಸಾಥ್ ನೀಡಿದ್ದಾರೆ.

ನಾನೇ ಉತ್ತಿ ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹುವರ್ಷದ ಆಸೆಯಾಗಿದೆ. ಭಗವಂತನಿಗೆ ಕೋಟಿ ನಮನಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಟಿ ಶ್ರುತಿ ವಿಡಿಯೋ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement