ದೇವೇಗೌಡರ ಜೊತೆ ತೆಲಂಗಾಣ ಸಿಎಂ ಕೆಸಿಆರ್‌ ಮಾತುಕತೆ: 3 ತಿಂಗಳು ಕಾಯಿರಿ, ದೇಶದಲ್ಲಿ ಬಹುದೊಡ್ಡ ಬದಲಾವಣೆಯಾಗುತ್ತೆ-ಕೆಸಿಆರ್‌

posted in: ರಾಜ್ಯ | 0

ಬೆಂಗಳೂರು: ದೇಶದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ. ಇನ್ನೂ ಮೂರು ತಿಂಗಳು ಕಾದು ನೋಡಿ ಎಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮಾಜಿ ಪ್ರಧಾನಿ ದೇವೇ ಗೌಡ ಅವರನ್ನು ಭೇಟಿಯಾದ ಬಳಿಕ ಗುರುವಾರ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು, ರಾಷ್ಟ್ರದ ಉಳಿವಿಗಾಗಿ ಸಮಾನ ಮನಸ್ಕರ ಮುಂದಿನ ನಡೆ, ಇನ್ನು 2-3 ತಿಂಗಳಲ್ಲಿ ಅಚ್ಚರಿ ಬೆಳವಣಿಗೆ ನೋಡುವಿರಿ ಎಂದು ಮಾರ್ಮಿಕವಾಗಿ ಹೇಳಿದರು.

advertisement

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಗುರುವಾರ ದೇವೇಗೌಡರ ಮೇಲೆಯಲ್ಲಿ ಮಧ್ಯಾಹ್ನದ ಭೋಜನ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು, ದೇವೇಗೌಡ ಹಾಗೂ ಕುಮಾರಸ್ವಾಮಿ ಜೊತೆ ಮಧ್ಯಾಹ್ನದ ಭೋಜನದ ಬಳಿಕ‌ ಸತತ ಮೂರು ತಾಸು ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ ರಾವ್, ಶೀಘ್ರದಲ್ಲೇ “ರಾಷ್ಟ್ರಮಟ್ಟದಲ್ಲಿ ಬದಲಾವಣೆ” ಆಗಲಿದೆ ಎಂದು ಹೇಳಿದರು.
ನಾನು ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಎಲ್ಲವನ್ನೂ ಚರ್ಚಿಸಿದ್ದೇವೆ ಎಂದು ಹೇಳಲು ಬಯಸುತ್ತೇನೆ. ರಾಷ್ಟ್ರಮಟ್ಟದಲ್ಲಿ ಬದಲಾವಣೆ ಆಗಲಿದ್ದು, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತ ಬದಲಾಗುತ್ತದೆ…ಭಾರತ ಬದಲಾಗಬೇಕು. ದೇಶದ ಸ್ಥಿತಿಯನ್ನು ಬದಲಾಯಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಅವರು ಹೇಳಿದರು. ಎರಡು-ಮೂರು ತಿಂಗಳ ನಂತರ ನೀವು ಬಹುದೊಡ್ಡ ಬದಲಾವಣೆಯ ಸುದ್ದಿಯನ್ನು ಪಡೆಯುತ್ತೀರಿ ಎಂದು ಮಾರ್ಮಿಕವಾಗಿ ಹೇಳಿದ ಅವರು ಆದರೆ ಆ ಬಗ್ಗೆ ವಿವರ ನೀಡಲಿಲ್ಲ.

ಓದಿರಿ :-   ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಮಾತುಕತೆ ಫಲಿತಾಂಶ ಮುಂದೆ ತಿಳಿಯಲಿದೆ. ವಿಜಯದಶಮಿಗೆ ಪೂರಕವಾಗಿ ಮಹತ್ವದ, ಸಕಾರಾತ್ಮಕ ತೀರ್ಮಾನಗಳಾಗಲಿವೆ. ತೃತೀಯ ಶಕ್ತಿ ಬಲವರ್ಧನೆ ವಿಚಾರದಲ್ಲಿ ಹಿಂದಿನ ಸಂದರ್ಭ, ಈಗಿನ ಪರಿಸ್ಥಿತಿ ಬೇರೆ. ಅಭಿವೃದ್ಧಿಗೆ ಪೂರಕ, ವಿಷಯಾಧಾರಿತದಲ್ಲಿ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ, ಮುಂದಿನ ಹೋರಾಟಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಚಂದ್ರಶೇಖರ ರಾವ್ ಪ್ರಯತ್ನ ನಡೆಸಿದ್ದಾರೆ. ಇದೇ ವಿಷಯಗಳ ಕುರಿತು ದೇವೇಗೌಡರ ಜತೆಗೆ ಮಾತುಕತೆ ನಡೆಸಿದರು ಎಂದು ಕುಮಾರಸ್ವಾಮಿ ತಿಳಿಸಿದರು.

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement