ಭಾರತದ ಮೇಲೆ ಮಹಾ ಚಂಡಮಾರುತಗಳು ಅಪ್ಪಳಿಸಬಹುದು, ಹೆಚ್ಚು ವಿನಾಶಕಾರಿ ಪರಿಣಾಮ ಬೀರಬಹುದು: ಅಧ್ಯಯನ

ಲಂಡನ್: ಭಾರತ ದೇಶವು ಭವಿಷ್ಯದಲ್ಲಿ ಹಲವು ಸೂಪರ್ ಸೈಕ್ಲೋನ್ (ಮಹಾ ಚಂಡಮಾರುತ) ಎದುರಿಸಬೇಕಾದ ಸನ್ನಿವೇಶ ಬರಬಹುದು ಎಂದು ಲಂಡನ್‌ ತಜ್ಞರು ಎಚ್ಚರಿಸಿದ್ದಾರೆ.
ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಮಾನವ ನಿರ್ಮಿತ ಅವಾಂತರಗಳಿಂದ ಇದು ಸಂಭವಿಸಬಹುದು ಎಂದು ತಜ್ಞರ ಸಂಶೋಧನಾ ವರದಿ ಎಚ್ಚರಿಸಿದೆ.
ಬ್ರಿಟನ್‌ನ ಬ್ರಿಸ್ಟಾಲ್ ವಿದ್ಯಾಲಯದ ತಜ್ಞರು ಈ ಸಂಶೋಧನೆ ನಡೆಸಿದ್ದು, 2020ರಲ್ಲಿ ಭಾರತಕ್ಕೆ ಅಪ್ಪಳಿಸಿದ ಸೂಪರ್ ಸೈಕ್ಲೋನ್ ಆಂಫನ್‌ ಮಾದರಿಯಲ್ಲಿ ಹಲವು ಮಹಾ ಚಂಡಮಾರುತಗಳು ದಕ್ಷಿಣ ಏಷ್ಯಾ ರಾಷ್ಟ್ರಗಳು, ಅದರಲ್ಲಿಯೂ ಭಾರತ ದೇಶವನ್ನು ಕಾಡಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

advertisement

ಜಾಗತಿಕವಾಗಿ ತಾಪಮಾನ ಏರಿಕೆ, ಸಮುದ್ರ ಮಟ್ಟದಲ್ಲಿ ಆಗುತ್ತಿರುವ ಏರಿಕೆಗಳು ಮಹಾ ಚಂಡಮಾರುತಗಳ ಸೃಷ್ಟಿಗೆ ಕಾರಣವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಈ ಕುರಿತು ಅಧ್ಯಯನ ವರದಿ ಪ್ರಕಟವಾಗಿದ್ದು, ಸದ್ಯ ವಾತಾವರಣಕ್ಕೆ ಬಿಡುಗಡೆ ಅಗುತ್ತಿರುವ ಹಸಿರು ಮನೆ ಅನಿಲಗಳ ಪ್ರಮಾಣ ಇದೇ ರೀತಿಯಲ್ಲಿ ಮುಂದುವರೆದರೆ, ಭಾರತದ ಬಹಳಷ್ಟು ಜನತೆ ಪ್ರವಾಹದಿಂದ ತೊಂದರೆಗೊಳಗಾಗುತ್ತಾರೆ. 2020ರಲ್ಲಿ ಸಂಭವಿಸಿದ ರೀತಿಯಲ್ಲೇ 1 ಮೀಟರ್‌ಗೂ ಹೆಚ್ಚು ಎತ್ತರದ ಪ್ರವಾಹ ಬಾಧಿಸಬಹುದು ಎಂದು ಅಂದಾಜಿಸಲಾಗಿದೆ.

ಜಾಗತಿಕವಾಗಿ ದಕ್ಷಿಣ ಏಷ್ಯಾ ಪ್ರಾಂತ್ಯವು ಹವಾಮಾನ ಸೂಕ್ಷ್ಮ ವಲಯವಾಗಿದ್ದು, ಇಲ್ಲಿ ಸೂಪರ್ ಸೈಕ್ಲೋನ್ ಸಂಭವಿಸಿದರೆ, ಜನಸಾಂದ್ರತೆ ಇರುವ ಇಲ್ಲಿನ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಸಾವಿರಾರು ಜನರ ಸಾವು – ನೋವು ಕೂಡಾ ಸಂಭವಿಸಬಹುದಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಹವಾಮಾನ ಸೂಕ್ಷ್ಮ ಪ್ರದೇಶವಾದರೂ ಕೂಡಾ ದಕ್ಷಿಣ ಏಷ್ಯಾದಲ್ಲಿ ಈ ಬಗ್ಗೆ ಸೂಕ್ತ ಸಂಶೋಧನೆಗಳು ನಡೆದಿಲ್ಲ ಎಂದು ಬ್ರಿಸ್ಟಾಲ್ ವಿವಿ ಪ್ರಾಧ್ಯಾಪಕ ಡೇನ್ ಮಿಷೆಲ್ ವಿಷಾದಿಸಿದ್ದಾರೆ. ಈ ಭಾಗದಲ್ಲಿ ಹಸಿರು ಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ಯಾರಿಸ್ ಒಪ್ಪಂದದ ಹವಾಮಾನ ಗುರಿಗಳನ್ನು ಸಾಧಿಸಲು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಬೆಂಬಲವಾಗಿ ಅಧ್ಯಯನವು ನಿರ್ಣಾಯಕ ಪುರಾವೆಯನ್ನು ಪ್ರಸ್ತುತಪಡಿಸುತ್ತದೆ, ಅಲ್ಲಿ ಇತರ ಪುರಾವೆಗಳು ಹೆಚ್ಚಿನ-ಆದಾಯದ ದೇಶಗಳ ಮೇಲೆ ಹೆಚ್ಚಾಗಿ ಗಮನಹರಿಸುತ್ತವೆ, ಅಲ್ಲಿ ಪರಿಣಾಮಗಳು ಕಡಿಮೆ, ಮತ್ತು ಹೊಂದಾಣಿಕೆಯನ್ನು ಹೆಚ್ಚು ಸುಲಭವಾಗಿ ಸಾಧಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಓದಿರಿ :-   ದಯಾಮರಣಕ್ಕಾಗಿ ಯುರೋಪ್‌ಗೆ ಹೋಗುತ್ತಿರುವ ವ್ಯಕ್ತಿಯನ್ನು ತಡೆಯುವಂತೆ ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋದ ಕುಟುಂಬದ ಸ್ನೇಹಿತೆ

ಈ ಶತಮಾನದ ಉಳಿದ ಭಾಗಗಳಲ್ಲಿ ಚಂಡಮಾರುತಗಳಿಂದ ಪ್ರಭಾವಿತರಾದವರ ಪ್ರಮಾಣವನ್ನು ನಿರೀಕ್ಷಿಸಲು ಅವರು ಅತ್ಯಾಧುನಿಕ ಹವಾಮಾನ ಮಾದರಿ ಪ್ರಕ್ಷೇಪಗಳನ್ನು ಬಳಸಿರುವುದಾಗಿ ಹೇಳಿದ್ದಾರೆ. ಇದು ಭವಿಷ್ಯದಲ್ಲಿ ಕರಾವಳಿ ಜನಸಂಖ್ಯೆ ಮೇಲೆ ತೀವ್ರ ತರಹದ ಪರಿಣಾಮಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಭಾರತದಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗುವ ಮಹಾ ಚಂಡಮಾರುತಗಳಿಂದ ದೇಶದ ಒಟ್ಟು ಜನಸಂಖ್ಯೆಯ ಶೇ. 50 ರಿಂದ 80ರಷ್ಟು ಜನರು ಪ್ರವಾಹದ ಕರಾಳ ಅನುಭವ ಎದುರಿಸಬೇಕಾಗಬಹುದು. ಭವಿಷ್ಯದಲ್ಲಿ ಈ ರೀತಿಯ ಮಹಾ ಚಂಡ ಮಾರುತಗಳು ಎದುರಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ ನಿರ್ದಿಷ್ಟವಾಗಿ ಯಾವಾಗ ಸಂಭವಿಸಬಹುದು ಎಂದು ಹೇಳಿಲ್ಲ.
ಬಾಂಗ್ಲಾ ದೇಶ ಕೂಡಾ ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಬಾಂಗ್ಲಾ ದೇಶದ 60 ರಿಂದ 70 ರಷ್ಟು ಜನ ಸಮೂಹವು ಹವಾಮಾನ ವೈಪರಿತ್ಯದಿಂದ ಎದುರಾಗುವ ಸೂಪರ್ ಸೈಕ್ಲೋನ್‌ಗಳಿಗೆ ಒಡ್ಡಿಕೊಳ್ಳಬೇಕಾಗಬಹುದು ಎಂದು ಅಧ್ಯಯನ ವರದಿ ತಿಳಿಸಿದೆ.

ಇತ್ತೀಚಿನ ಐಪಿಸಿಸಿ (IPCC) ವರದಿಯು ಉಷ್ಣವಲಯದ ಚಂಡಮಾರುತಗಳು ಭವಿಷ್ಯದಲ್ಲಿ ಹೆಚ್ಚು ಆಗಾಗ್ಗೆ ಸಂಭವಿಸುತ್ತದೆ ಎಂದು ಹೆಚ್ಚಿನ ವಿಶ್ವಾಸದಿಂದ ಉಲ್ಲೇಖಿಸಿದೆ” ಎಂದು ಬಾಂಗ್ಲಾದೇಶ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (BUET) ಜಲವಿಜ್ಞಾನದ ಪ್ರಾಧ್ಯಾಪಕ ಮತ್ತು ಅಧ್ಯಯನದ ಲೇಖಕ ಸೈಫುಲ್ ಇಸ್ಲಾಂ ಹೇಳಿದ್ದಾರೆ.
ಈ ಅಧ್ಯಯನವು ಬಾಂಗ್ಲಾದೇಶ ಮತ್ತು ಭಾರತದಲ್ಲಿ ಹೆಚ್ಚಿನ ಹೊರಸೂಸುವಿಕೆ ಸನ್ನಿವೇಶಗಳ ಅಡಿಯಲ್ಲಿ ತೀವ್ರವಾದ ಚಂಡಮಾರುತದ ಪ್ರವಾಹದಿಂದ (3 ಮೀಟರ್‌ಗಿಂತ ಹೆಚ್ಚು) ತೀವ್ರ ಚಂಡಮಾರುತದ ಉಲ್ಬಣ ಭವಿಷ್ಯದಲ್ಲಿ ಶೇಕಡಾ 200 ರಷ್ಟು ಹೆಚ್ಚಾಗಲಿದೆ ಎಂದು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಓದಿರಿ :-   ಬಿಡುಗಡೆಗೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜೀವ್ ಗಾಂಧಿ ಹಂತಕಿ ನಳಿನಿ

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement