ಡಬ್ಲ್ಯುಇಎಫ್ ಸಭೆಯಲ್ಲಿ ಕರ್ನಾಟಕ 65,000 ಕೋಟಿ ರೂ. ಖಾತ್ರಿ ಹೂಡಿಕೆಯನ್ನು ಆಕರ್ಷಿಸಿದೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಭಾಗವಹಿಸುವ ಮೂಲಕ ಸುಮಾರು 65,000 ಕೋಟಿ ರೂಪಾಯಿಗಳ ಹೂಡಿಕೆ ಸೆಳೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ.
ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಮತ್ತು ವಿಶ್ವ ಆರ್ಥಿಕ ವೇದಿಕೆ ಸಭೆ ಯಶಸ್ವಿಯಾಗಿದೆ ಎಂದು ಅವರು ಹೇಳಿದರು,
ದಾವೋಸ್ ಸಭೆಯಲ್ಲಿ ಸುಮಾರು 25 ಕಂಪನಿಗಳೊಂದಿಗೆ ನಮ್ಮ ಚರ್ಚೆಯ ನಂತರ 60,000-65,000 ಕೋಟಿ ಮೌಲ್ಯದ ಹೂಡಿಕೆಗಳು ರಾಜ್ಯಕ್ಕೆ ಹರಿಯುವ ನಿರೀಕ್ಷೆಯಿದೆ” ಎಂದು ಬೊಮ್ಮಾಯಿ ಹೇಳಿದರು.

ದಾವೋಸ್‌ನಿಂದ ವಾಪಸಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೂಡಿಕೆಗಳು ಕರ್ನಾಟಕ ಹೊಂದಿರುವ ವಿಶೇಷವಾಗಿ ಅದರ ತಂತ್ರಜ್ಞಾನ ಮೂಲ, ಕೌಶಲ್ಯಪೂರ್ಣ ಮಾನವಶಕ್ತಿ, ವಿಶ್ವದ ಅಗ್ರ ಕಾರ್ಪೊರೇಟ್‌ಗಳಲ್ಲಿಅಪಾರ ನಂಬಿಕೆಗೆ ಪುರಾವೆಯಾಗಿದೆ. ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆಗೆ ಕರ್ನಾಟಕವು ಗಮ್ಯಸ್ಥಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ …
ಈ ಎಲ್ಲಾ ಯೋಜನೆಗಳು ಆರು ತಿಂಗಳಲ್ಲಿ ಮಂಜೂರಾಗಿದೆ ಮತ್ತು ಇದು ಸಾಕಾರಗೊಳ್ಳಲು ಒಂದರಿಂದ ಎರಡು ವರ್ಷಗಳನ್ನು ತೆಗೆದುಕೊಳ್ಳಬಹುದು, ಆದರೆ ನವೀಕರಿಸಬಹುದಾದ ಇಂಧನ ಸಂಬಂಧಿತವು 5-7 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದರು.
ನೆರೆಯ ಆಂಧ್ರಪ್ರದೇಶವು 1,25,000 ಕೋಟಿ ರೂಪಾಯಿಗಳ ಹೆಚ್ಚಿನ ಹೂಡಿಕೆಯನ್ನು ಹೇಳುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯವು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವುದರಿಂದ ಮತ್ತು ಅದೇ ಗುಣಮಟ್ಟದ ಕಂಪನಿಗಳಿಂದ ಹೂಡಿಕೆಯನ್ನು ಆಕರ್ಷಿಸುವುದರಿಂದ ಕರ್ನಾಟಕವನ್ನು ಬೇರೆ ಯಾವುದೇ ರಾಜ್ಯಗಳೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.
ನಾವು ಸಹ ಇದೇ ರೀತಿಯ ಸಂಖ್ಯೆಯನ್ನು ಹೊಂದಿದ್ದೇವೆ, ಉದಾಹರಣೆಗೆ ಅದಾನಿ ಗ್ರೂಪ್ 50,000 ಕೋಟಿ ಮೌಲ್ಯದ ಯೋಜನೆಯನ್ನು ಮಾಡಿದೆ, ಆದರೆ ಅವರು ಎಂಒಯುಗೆ ಸಹಿ ಹಾಕಿಲ್ಲ, ಆದರೆ ಅವರು ಬದ್ಧರಾಗಿದ್ದಾರೆ. ಅಲ್ಲದೆ, ನಾವು ಭವಿಷ್ಯದ ಪ್ರಮುಖ ಕ್ಷೇತ್ರಗಳಾದ ಹೈಡ್ರೋಜನ್ ಇಂಧನಗಳು, ಸೆಮಿಕಂಡಕ್ಟರ್, ರಕ್ಷಣೆ, ಏರೋಸ್ಪೇಸ್‌ನಲ್ಲಿ ಹೂಡಿಕೆ ಮಾಡಿದ್ದೇವೆ. ಲಕ್ಷ್ಮಿ ಮಿತ್ತಲ್ (ಆರ್ಸೆಲರ್ ಮಿತ್ತಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷರು) ಸೇರಿದಂತೆ ಉದ್ಯಮಿಗಳಿಗೆ ಕರ್ನಾಟಕದ ನೀತಿ ಕುರಿತು ವಿವರಿಸಿರುವುದಾಗಿ ಅವರು ಹೇಳಿದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಹೂಡಿಕೆ ಪ್ರಸ್ತಾವನೆಗಳ ಕುರಿತು ವಿವರ ನೀಡಿದ ಮುಖ್ಯಮಂತ್ರಿ, ರಿನ್ಯೂ ಪವರ್ ಪ್ರೈ.ಲಿಮಿಟೆಡ್, ಸುಮಾರು 30,000 ಜನರಿಗೆ ಉದ್ಯೋಗಾವಕಾಶಗಳೊಂದಿಗೆ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸಂಗ್ರಹಣೆ, ಹಸಿರು ಹೈಡ್ರೋಜನ್ ಘಟಕಗಳನ್ನು ಸ್ಥಾಪಿಸಲು ಮುಂದಿನ ಏಳು ವರ್ಷಗಳಲ್ಲಿ 50,000 ಕೋಟಿ ರೂಪಾಯಿಗಳ ಹೂಡಿಕೆಗೆ ಎಂಒಯುಗೆ ಸಹಿ ಹಾಕಿದೆ. ಕಂಪನಿಯು ಎರಡು ಹಂತಗಳಲ್ಲಿ ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಮೊದಲ ಹಂತದಲ್ಲಿ, 11,900 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಈಗಾಗಲೇ ಅನುಷ್ಠಾನದಲ್ಲಿರುವ ಯೋಜನೆಗಳನ್ನು ಎರಡು ವರ್ಷಗಳಲ್ಲಿ ಕಾರ್ಯಗತಗೊಳಿಸಲಾಗುವುದು ಮತ್ತು ಎರಡನೇ ಹಂತದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಹಸಿರು ಹೈಡ್ರೋಜನ್ ಘಟಕಗಳನ್ನು ಮುಂದಿನ ಐದು ವರ್ಷಗಳಲ್ಲಿ 37,500 ಕೋಟಿ ರೂ.ಗಳ ಹೂಡಿಕೆಯಲ್ಲಿ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಲುಲು ಗ್ರೂಪ್ ಇಂಟರ್‌ನ್ಯಾಷನಲ್ 2,000 ಕೋಟಿ ರೂ. ಹೂಡಿಕೆಗೆ ಎಂಒಯುಗೆ ಸಹಿ ಹಾಕಿದೆ ಎಂದ ಬೊಮ್ಮಾಯಿ, ಕಂಪನಿಯು ನಾಲ್ಕು ಶಾಪಿಂಗ್ ಮಾಲ್‌ಗಳು, ಹೈಪರ್ ಮಾರ್ಕೆಟ್ ಮತ್ತು ರಫ್ತು ಆಧಾರಿತ ಕೃಷಿ ಉತ್ಪನ್ನ ಮಳಿಗೆಗಳನ್ನು ರಾಜ್ಯದಲ್ಲಿ 10,000 ಕ್ಕೂ ಹೆಚ್ಚು ಉದ್ಯೋಗಾವಕಾಶದೊಂದಿಗೆ ತೆರೆಯಲು ಉತ್ಸುಕವಾಗಿದೆ. ಜುಬಿಲಂಟ್ ಗ್ರೂಪ್‌ನ ಜುಬಿಲಂಟ್ ಫುಡ್ ವರ್ಕ್ಸ್ ತನ್ನ ಹೊಸ ಕೇಂದ್ರೀಕೃತ ಅಡುಗೆಮನೆಯನ್ನು ಸ್ಥಾಪಿಸಲು ನಿರ್ಧರಿಸಿದೆ ಮತ್ತು ಜುಬಿಲಂಟ್ ಬಯೋಸಿಸ್ ತನ್ನ ಆರ್ & ಡಿ ಸೆಂಟರ್ ಅನ್ನು ದೇವನಹಳ್ಳಿಯಲ್ಲಿ 10 ಎಕರೆ ಜಾಗದಲ್ಲಿ ಸ್ಥಾಪಿಸಲು ಒಪ್ಪಿಕೊಂಡಿದೆ ಮತ್ತು ಈ ವರ್ಷ ರೂ 700 ಕೋಟಿ ಹೂಡಿಕೆ ಮಾಡಲಿದೆ.ಕಂಪನಿಯಲ್ಲಿ ಈಗಾಗಲೇ ಸುಮಾರು 9,000 ಮಂದಿ ಉದ್ಯೋಗದಲ್ಲಿದ್ದಾರೆ ಎಂದರು.

ಧಾರವಾಡದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಎಫ್‌ಎಂಸಿಜಿ ಪಾರ್ಕ್‌ನಲ್ಲಿ ಪ್ರಮುಖವಾಗಿ ರಾಜ್ಯದಲ್ಲಿ ಫಾರ್ಮಾ ಮತ್ತು ಎಫ್‌ಎಂಸಿಜಿ ವಲಯಗಳಲ್ಲಿ ಹೂಡಿಕೆ ಮಾಡಲು ಆಕರ್ಷಕ ಪ್ರೋತ್ಸಾಹಕ ಪ್ಯಾಕೇಜ್‌ಗಳ ಕುರಿತು ಮನವರಿಕೆ ಮಾಡಲು ಕಂಪನಿಗೆ ವಿವರವಾದ ಪ್ರಸ್ತುತಿಯನ್ನು ಸಹ ಮಾಡಲಾಗಿದೆ.
ಇವಿ ಚಾರ್ಜಿಂಗ್ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲೀಕರಣ ಯೋಜನೆಗಳನ್ನು ಸ್ಥಾಪಿಸಲು ಹಿಟಾಚಿ ಎನರ್ಜಿ ಆಸಕ್ತಿ ತೋರಿಸಿದೆ ಮತ್ತು ಈ ವರ್ಷ ಸುಮಾರು 2,000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಉತ್ಸುಕವಾಗಿದೆ. ಸೀಮೆನ್ಸ್ ಹೆಲ್ತ್‌ನೀರ್ಸ್ 1,300 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಮ್ಯಾಗ್ನೆಟಿಕ್ ಇಮೇಜಿಂಗ್ ಮತ್ತು ಡಯಾಗ್ನೋಸ್ಟಿಕ್‌ಗಳ ಮೇಲೆ ಕೇಂದ್ರೀಕರಿಸುವ ಹೆಲ್ತ್‌ಕೇರ್ ಪ್ರಾಜೆಕ್ಟ್‌ಗಳಲ್ಲಿ ಆರ್ & ಡಿ ಕೈಗೊಳ್ಳುತ್ತಿದೆ. 300 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಸ್ಥಳೀಯ ಮಾರುಕಟ್ಟೆಯನ್ನು ಪೂರೈಸಲು ವೈದ್ಯಕೀಯ ಸಾಧನಗಳ ಸುಧಾರಿತ ಉತ್ಪಾದನೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ವಿಶೇಷ ಪ್ರೋತ್ಸಾಹವನ್ನು ಭರವಸೆ ನೀಡಿದೆ.ಹೀಗಾಗಿ ರಾಜ್ಯದಲ್ಲಿ ಒಟ್ಟು 1,600 ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡಲು ಕಂಪನಿ ಉತ್ಸುಕವಾಗಿದೆ ಎಂದು ತಿಳಿಸಿದರು.
ಇವಿ ಉತ್ಪಾದನೆ ಯುನಿಟ್‌ ಸ್ಥಾಪಿಸಲು ಹೀರೋ ಗ್ರೂಪ್ ಚರ್ಚಿಸಿರುವುದರ ಬಗ್ಗೆ ಗಮನಸೆಳೆದ ಮುಖ್ಯಮಂತ್ರಿ ಬೊಮ್ಮಾಯಿ, “ಉತ್ತರ ಕರ್ನಾಟಕ ಪ್ರದೇಶವನ್ನು ಪರಿಗಣಿಸಲು ನಾವು ಅವರನ್ನು ಕೇಳಿದ್ದೇವೆ ಮತ್ತು ನಾವು ಅವರಿಗೆ ಪ್ರೋತ್ಸಾಹವನ್ನು ನೀಡುತ್ತೇವೆ” ಎಂದು ಹೇಳಿದರು.
ಬೆಂಗಳೂರು ಬಿಯಾಂಡ್ ಕಾರ್ಯಕ್ರಮದ ಅಡಿಯಲ್ಲಿ, ರಾಜ್ಯ ಸರ್ಕಾರವು ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರಿನಂತಹ ನಗರಗಳಲ್ಲಿ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಿದೆ. “Ab InBev” 50 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ರಾಜ್ಯದಲ್ಲಿ ಆಲ್ಕೊಹಾಲ್‌ ಯುಕ್ತ ಪಾನೀಯಗಳ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ, ಆದರೆ ನೆಸ್ಲೆ 700 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ನಂಜನಗೂಡಿನಲ್ಲಿ ತನ್ನ ಅಸ್ತಿತ್ವದಲ್ಲಿರುವ ಇನ್‌ಸ್ಟಂಟ್ ಕಾಫಿ ಘಟಕವನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು ಸಜ್ಜಾಗಿದೆ.Dassault Systems ಎಲೆಕ್ಟ್ರಿಕ್ ವಾಹನಗಳಲ್ಲಿ ಹೂಡಿಕೆ ಮಾಡಲು ಆಸಕ್ತಿಯನ್ನು ತೋರಿಸಿದೆ ಎಂದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement