ತನ್ನ ಮರಿಯ ಕಳೇಬರ ಹೊತ್ತೊಯ್ಯುವ ತಾಯಿ ಆನೆ..! ಮನ ಕರಗುವ ದೃಶ್ಯ..ವೀಕ್ಷಿಸಿ

ಅಮ್ಮನ ಪ್ರೀತಿಗೆ ಬೆಲೆ ಕಟ್ಟಲಾಗದು, ಅದು ಮಾನವರಾಗಲಿ ಅಥವಾ ಪ್ರಾಣಿಗಳಾಗಲಿ ಅದು ಎಂದಿಗೂ ಬತ್ತದ ಪ್ರೀತಿ. ತಾಯಿ ಮಮತೆಯಲ್ಲಿ ನಾವು ವ್ಯತ್ಯಾಸವೇ ಇಲ್ಲ. ಇಲ್ಲಿ ತಾಯಿ ಆನೆಯ ಇಂಥದ್ದೇ ಮನಕಲಕುವ ದೃಶ್ಯ ನಮ್ಮ ಹೃದಯ ಹಿಂಡುವಂತೆ ಮಾಡುತ್ತದೆ. ತಾಯಿ ಆನೆಯ ರೋದನೆಯ ದೃಶ್ಯ ಕಣ್ಣಂಚಿನಲ್ಲಿ ನೀರು ತರಿಸುತ್ತದೆ.
ಆನೆಗಳು ಬುದ್ಧಿವಂತಿಕೆಯಲ್ಲಿಯೂ ಮುಂದೆ ಅದೇ ರೀತಿ ಭಾವನಾತ್ಮಕವಾಗಿಯೂ ಎಲ್ಲರನ್ನೂ ಮುಟ್ಟುತ್ತವೆ. ತನ್ನ ಬಳಗದೊಂದಿಗೆ ಇವುಗಳು ಹೊಂದಿರುವ ಸಂಬಂಧ ನಿಜಕ್ಕೂ ಅನುಕರಣೀಯ.

advertisement

ತಾಯಿ ಆನೆಯೊಂದು ತನ್ನ ಮೃತ ಮಗುವಿನ ದೇಹವನ್ನು ತನ್ನ ಸೊಂಡಿಲಿನಿಂದ ಎತ್ತಿಕೊಂಡು ಒಯ್ಯುವ ದೃಶ್ಯ ಮನಕರಗಿಸದೇ ಇರದು.
ಭಾರತೀಯ ಅರಣ್ಯ ಸೇವೆಗಳಾದ ಅಧಿಕಾರಿಗಳಾದ ಪರ್ವೀನ್ ಕಸ್ವಾನ್, ಸುಸಂತ ನಂದ ಸೇರಿದಂತೆ ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ಇವರು ಶೇರ್ ಮಾಡಿದ್ದಾರೆ.

ಇದು ಶ್ಚಿಮ ಬಂಗಾಳದ ಜಲ್ಪೈಗುರಿಯ ಅಂಬಾರಿ ಟೀ ಎಸ್ಟೇಟ್‌ನಲ್ಲಿ ಸೆರೆಯಾದ ದೃಶ್ಯವಾಗಿದೆ. ಎಎನ್‌ಐ ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆಗಳಾದ ಅಧಿಕಾರಿಗಳಾದ ಪರ್ವೀನ್ ಕಸ್ವಾನ್, ಸುಸಂತ ನಂದಾ ಸೇರಿದಂತೆ ಹಲವರು ಹಂಚಿಕೊಂಡಿದ್ದಾರೆ.
ಈ ಕ್ಲಿಪ್‌ನಲ್ಲಿ ಆನೆ ಕಷ್ಟಪಟ್ಟು ಸೊಂಡಿಲಿನ ಸಹಾಯದಿಂದ ಮರಿಯ ಕಳೇಬರವನ್ನು ಕೊಂಡೊಯ್ಯುವುದನ್ನು ನೋಡಬಹುದು. ಈ ವಿಷಯ ಗೊತ್ತಾದ ತಕ್ಷಣ ಬಿನ್ನಗುರಿ ವನ್ಯಜೀವಿಗಳ ಗುಂಪು ಅಲ್ಲಿಗೆ ಹೋಗಿತ್ತು. ಆದರೆ, ಅಷ್ಟರಲ್ಲಾಗಲೇ ಅಲ್ಲಿಂದ ಸಾಗಿದ ಆನೆ ರೆಡ್‌ಬ್ಯಾಂಕ್ ಟೀ ಎಸ್ಟೇಟ್‌ಗೆ ತೆರಳಿತು.

ಓದಿರಿ :-   ತರಗತಿಯಲ್ಲಿ ಹುಡುಗ-ಹುಡುಗಿಯರು ಒಟ್ಟಿಗೆ ಕುಳಿತು ಓದುವುದು ಅಪಾಯಕಾರಿ: ಕೇರಳ ಮುಸ್ಲಿಂ ಸಂಘಟನೆ ನಾಯಕನ ವಿವಾದಾತ್ಮಕ ಹೇಳಿಕೆ

https://twitter.com/susantananda3/status/1530169941252378625?ref_src=twsrc%5Etfw%7Ctwcamp%5Etweetembed%7Ctwterm%5E1530169941252378625%7Ctwgr%5E%7Ctwcon%5Es1_&ref_url=https%3A%2F%2Fvijaykarnataka.com%2Fviral-adda%2Ftrending%2Femotional-video-of-a-mother-elephant-carry-her-dead-baby-in-tea-estate-is-going-viral-on-social-media%2Farticleshow%2F91850439.cms

ಮರಿಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ತಾಯಿ ಆನೆ ತನ್ನ ಕಂದನ ದೇಹವನ್ನು ಸುಮಾರು 7 ಕಿಲೋಮೀಟರ್ ವರೆಗೆ ಸಾಗಿತ್ತು…!ಆನೆಯಾದರೇನು…? ತಾಯಿ ತಾಯಿಯೇ. ತಾಯಿ ಆನೆ ಕರುಳಬಳ್ಳಿಗಳನ್ನು ಕಳೆದುಕೊಂಡ ನೋವಿನ ಈ ವಿಡಿಯೋ ಈಗ ಬೇರೆ ಬೇರೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯ ಎಲ್ಲರ ಹೃದಯವನ್ನೂ ಭಾರವಾಗಿಸಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement