ದೇಶದಲ್ಲಿ ಏನಾಗುತ್ತಿದೆ ? ಅಲಪ್ಪುಳದಲ್ಲಿ ಪಿಎಫ್‌ಐ ರ‍್ಯಾಲಿಗೆ ಕೇರಳ ಹೈಕೋರ್ಟ್‌ ತೀವ್ರ ಅಸಮಾಧಾನ, ಕ್ರಮಕ್ಕೆ ನಿರ್ದೇಶನ

ತಿರುವನಂತಪುರಂ: ಶುಕ್ರವಾರ ಕೇರಳ ಹೈಕೋರ್ಟ್, ಅಲಪ್ಪುಳದಲ್ಲಿ ಮೇ 21ರಂದು ನಡೆದ “ಜನ ಮಹಾ ಸಮ್ಮೇಳನಂ” ಕಾರ್ಯಕ್ರಮದ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ಕೇರಳದ ಹುಡುಗನೊಬ್ಬ ಹಿಂದೂ ಮತ್ತು ಕ್ರೈಸ್ತರ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಆಯೋಜಿಸಿತ್ತು. ಇದು ದೇಶದಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳ ರಾಡಾರ್‌ನಲ್ಲಿರುವ ಸಂಸ್ಥೆಯಾಗಿದೆ. ಬಾಲಕ ಎತ್ತಿದ ಘೋಷಣೆಗೆ ತೀವ್ರವಾಗಿ ಆಕ್ಷೇಪಿಸಿದ ನ್ಯಾಯಾಲಯ, ‘ಈ ದೇಶದಲ್ಲಿ ಏನಾಗುತ್ತಿದೆ?’ ಎಂದು ಮೌಖಿಕವಾಗಿ ಪ್ರಶ್ನಿಸಿದೆ.

ಸಮಾವೇಶದಲ್ಲಿ ಸದಸ್ಯರೊಬ್ಬರು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರೆ, ಅದಕ್ಕೆ ಸಮಾವೇಶದ ಆಯೋಜಕರೂ ಜವಾಬ್ದಾರರು ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಹೇಳಿದ್ದಾರೆ. ಇದಕ್ಕೆ ಕಾರಣರಾದ ಎಲ್ಲಾ ವ್ಯಕ್ತಿಗಳ ವಿರುದ್ಧ ಪೊಲೀಸ್ ಅಧಿಕಾರಿಗಳು ಕಾನೂನಿನ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲಪ್ಪುಳದ ಎಸ್‌ಡಿ ಕಾಲೇಜಿನ ಮಾಜಿ ಪ್ರಾಧ್ಯಾಪಕ ಆರ್ ರಾಮರಾಜ ವರ್ಮಾ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.
ಪಿಎಫ್‌ಐ ರ‍್ಯಾಲಿಯಲ್ಲಿ ಪ್ರಚೋದನಾತ್ಮಕ ಘೋಷಣೆ ಕೂಗಿದ್ದರೆ, ರ‍್ಯಾಲಿಯ ಆಯೋಜಕರ ವಿರುದ್ಧ ಕೇಸ್‌ ದಾಖಲಿಸಿ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಆದೇಶಿಸಿದ್ದಾರೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

ದೇಶದಲ್ಲಿ ಯಾವ ಘೋಷಣೆ ಬೇಕಾದರೂ ಕೂಗಬಹುದೇ? ಇದುವರೆಗೆ ಪೊಲೀಸರು ಎಷ್ಟು ಜನರನ್ನು ಬಂಧಿಸಿದ್ದೀರಿ. ಇನ್ನಾದರೂ ತಕ್ಷಣ ಕ್ರಮ ಕೈಗೊಳ್ಳಿ ಎಂದು ಪಿವಿ ಕುನ್ಹಿಕೃಷ್ಣನ್‌ ಆದೇಶಿಸಿದರು. ಕಳೆದ ಶನಿವಾರ ಅಲಪ್ಪುಳದಲ್ಲಿ ನಡೆದ ರ‍್ಯಾಲಿಯ ವೇಳೆ ಬಾಲಕನೊಬ್ಬ, ”ಹಿಂದೂಗಳು ಹಾಗೂ ಕ್ರೈಸ್ತರು ಶಾಂತವಾಗಿ ಇರಬೇಕು. ಇಲ್ಲದಿದ್ದರೆ, ನೀವು ಅಂತ್ಯಕ್ರಿಯೆಗೆ ಸಿದ್ಧವಾಗಬೇಕಾಗುತ್ತದೆ,” ಎಂದು ಘೋಷಣೆ ಕೂಗಿದ ವೀಡಿಯೊ ವೈರಲ್‌ ಆಗಿತ್ತು.

28 ಜನರ ಬಂಧನ…
ಪಿಎಫ್‌ಐ ರ‍್ಯಾಲಿಯಲ್ಲಿ ಪ್ರಚೋದನಾತ್ಮಕ ಹೇಳಿಕೆ ಘೋಷಣೆ ಕೂಗಿದ ವಿವಾದದ ಬೆನ್ನಲ್ಲೇ ಕೇರಳ ಪೊಲೀಸರು 28 ಜನರನ್ನು ಬಂಧಿಸಿದ್ದಾರೆ. ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಘೋಷಣೆ ಕೂಗಿದ ಬಾಲಕ ಹಾಗೂ ಆತನ ಕುಟುಂಬಸ್ಥರನ್ನು ಪತ್ತೆಮಾಡಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ತೀವ್ರ ಶೋಧ ನಡೆಯುತ್ತಿದೆ ಎಂದು ಹೇಳಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement