ಮಡಿಕೇರಿ: ಕೋಟೆ ಅಬ್ಬಿ ಜಲಪಾತದ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಪ್ರವಾಸಿಗರ ಸಾವು

ಮಡಿಕೇರಿ: ಪ್ರವಾಸಕ್ಕೆಂದು ಬಂದಿದ್ದ ತೆಲಂಗಾಣ ಮೂಲದ ಮೂವರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಪ್ರವಾಸಿ ತಾಣ ಮುಕ್ಕೋಡ್ಲುವಿನ ಕೋಟೆ ಅಬ್ಬಿ ಜಲಪಾತದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ತೆಲಂಗಾಣದಿಂದ ಕೊಡಗಿಗೆ ಆಗಮಿಸಿದ್ದ 13 ಮಂದಿ ಪ್ರವಾಸಿಗರು ಕುಶಾಲನಗರ ಸಮೀಪದ ಹೋಂಸ್ಟೇನಲ್ಲಿ ವಾಸ್ತವ್ಯ ಮಾಡಿದ್ದರು.

ಇಂದು, ಭಾನುವಾರ ಬೆಳಿಗ್ಗೆ ಪ್ರವಾಸಕ್ಕೆ ಮಾಂದಲ್‌ಪಟ್ಟಿ ಸಮೀಪದ ಮುಕ್ಕೋಡ್ಲು ಜಲಪಾತಕ್ಕೆ ೀ ತಂಡ ತೆರಳಿತ್ತು. ತಂಡದ ಮೂವರು ಸದಸ್ಯರು ನೀರಿಗೆ ಇಳಿದಿದ್ದರು. ಈ ಸಂದರ್ಭ ನೀರಿನ ಸುಳಿಗೆ ಸಿಲುಕಿದ ಮೂವರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ಶ್ಯಾಮ(36),  ಶಹೀಂದ್ರ (16), ಶ್ರೀಹರ್ಷ(18) ಗುರುತಿಸಲಾಗಿದೆ. ಆ ಸಮಯದಲ್ಲಿ ಸ್ಥಳೀಯರು ಯಾರೂ ಇಲ್ಲದ ಕಾರಣ ಅವರನ್ನು ರಕ್ಷಣೆ ಮಾಡುವುದು ಸಾಧ್ಯವಾಗಲಿಲ್ಲ. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುಮಾರು 1 ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement