ಸಿದ್ದಾಪುರ: ಕೆರೆ ಬೇಟೆ ವೇಳೆ ಸಿಗದ ಮೀನು-ಆಯೋಜಕರು, ಪೊಲೀಸರ ಮೇಲೆ ಕಲ್ಲು ತೂರಾಟ

posted in: ರಾಜ್ಯ | 0

ಸಿದ್ದಾಪುರ: ಕೆರೆ ಬೇಟೆ (ಮೀನು ಬೇಟೆ )ಯಲ್ಲಿ ಮೀನು ಸಿಗಲಿಲ್ಲ ಎಂದು ಆಕ್ರೋಶಗೊಂಡ ಜನರು ಪೊಲೀಸರು ಹಾಗೂ ಆಯೋಜಕರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ುತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡಿನ ದೊಡ್ಡ ಕೆರೆಯಲ್ಲಿ ಭಾನುವಾರ (ಮೇ 29) ನಡೆದಿದೆ.

advertisement

ಕಾನಗೋಡಿನ ದೊಡ್ಡ ಕೆರೆಯಲ್ಲಿ ಈಶ್ವರ ದೇವಸ್ಥಾನದ ಸಹಾಯರ್ಥ ಕೆರೆ ಮೀನು ಬೇಟೆ ಆಯೋಜಿಸಲಾಗಿತ್ತು. ಇದಕ್ಕಾಗಿ ಕೆರೆಬೇಟೆಯಲ್ಲಿ ಪಾಲ್ಗೊಳ್ಳುವ ಪ್ರತಿ ವ್ಯಕ್ತಿಗೂ 600 ರೂ. ಪ್ರವೇಶ ಶುಲ್ಕ ಇತ್ತು. ಮೀನು ಹಿಡಿಯಲು ಐದು ಸಾವಿರಕ್ಕೂ ಹೆಚ್ಚು ಜನ ಕೆರೆಯಲ್ಲಿ ಸೇರಿದ್ದರು. ಆದರೆ ಕೆರೆಯಲ್ಲಿ ಮೀನು ಸಿಕ್ಕಿರಲಿಲ್ಲ. ಇದರಿಂದ ರೊಚ್ಚಿಗೆದ್ದು ಜನ ದೇವಸ್ಥಾನದ ಕಮಿಟಿಯೊಂದಿಗೆ ಗಲಾಟೆ ಆರಂಭಿಸಿದ್ದರು.

ಮೀನು ಸಿಗದ ಕಾರಣ ಹಣ ವಾಪಸ್ ನೀಡಿ ಎಂದು ದೇವಸ್ಥಾನದ ಕಮಿಟಿಯೊಂದಿಗೆ ಗಲಾಟೆ ಆರಂಭಿಸಿದರು.ಆದರೆ ಸಮಿತಿ ಮಾತ್ರ ಹಣ ವಾಪಸ್ ನೀಡಲು ‌ನಿರಾಕರಿಸಿದ್ದು, ಇದರಿಂದಾಗಿ ಮತ್ತಷ್ಟು ಕುಪಿತಗೊಂಡ ಜನ ಗಲಾಟೆ ನಡೆಸಿದ್ದಾರೆ.ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಲಾಠಿ ಜಾರ್ಜ್ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ಜನ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿವೆ. ನಂತರ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಲಾಠಿ ಚಾರ್ಜ್ ಮಾಡಿ ಜನರನ್ನು ನಿಯಂತ್ರಿಸಿದ್ದಾರೆ ಎಂದು ಹೇಳಲಾಗಿದೆ. ತಾಲೂಕಿನಿಂದಷ್ಟೇ ಅಲ್ಲದೇ ಸೊರಬ, ಬನವಾಸಿ, ಆನವಟ್ಟಿ ಸೇರಿದಂತೆ ಬೇರೆಬೇರೆ ಪ್ರದೇಶದ ಜನರಿಗೂ ಟಿಕೆಟ್ ನೀಡಿದ್ದರಿಂದ ಹೆಚ್ಚಿನ ಜನ ಸೇರಿದ್ದು, ಇದು ಗಲಾಟೆಗೆ ಕಾರಣವಾಗಿದೆ ಎನ್ನಲಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ: 9 ಮಂದಿ ಆರೋಪಿಗಳ ಬಂಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement