ನ್ಯಾಯಾಧೀಶರ ‘ಒಳ ಉಡುಪು ಕೇಸರಿ’ : ಪಿಎಫ್‌ಐ ಪ್ರಚೋದನಕಾರಿ ಸಮಾವೇಶದ ವಿರುದ್ಧ ಕೇರಳ ಹೈಕೋರ್ಟ್ ಕ್ರಮಕ್ಕೆ ಸೂಚಿಸಿದ ನಂತರ ಪಿಎಫ್‌ಐ ನಾಯಕನ ವಿವಾದಾತ್ಮಕ ಹೇಳಿಕೆ

ಅಲಪ್ಪುಳ (ಕೇರಳ): ಕೇರಳ ಪಾಪ್ಯುಲರ್ ಫ್ರಂಟ್ (ಪಿಎಫ್‌ಐ) ನಾಯಕ ಯಾಹಿಯಾ ತಂಗಲ್ ಅವರು ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಒಳ ಉಡುಪು ಕೇಸರಿಯಾಗಿದೆ ಎಂದು ಹೇಳಿದ್ದಾರೆ.
ಅಲಪ್ಪುಳದಲ್ಲಿ ನಡೆದ ಸಮಾವೇಶದಲ್ಲಿ ತಂಗಳ್ ಅವರು, “ಈಗ ನ್ಯಾಯಾಲಯಗಳು ಸುಲಭವಾಗಿ ಬೆಚ್ಚಿಬೀಳುತ್ತಿವೆ. ನಮ್ಮ ಅಲಪ್ಪುಳ ಸಮಾವೇಶದ ಘೋಷಣೆಗಳನ್ನು ಕೇಳಿ ಹೈಕೋರ್ಟ್ ನ್ಯಾಯಾಧೀಶರು ಬೆಚ್ಚಿಬೀಳುತ್ತಿದ್ದಾರೆ. ಕಾರಣ ನಿಮಗೆ ತಿಳಿದಿದೆಯೇ? ಕಾರಣ ಅವರ ಒಳಉಡುಪು ಕೇಸರಿಯಾಗಿದೆ. ಏಕೆಂದರೆ ಅದು ಕೇಸರಿ, ಅವು ಬೇಗನೆ ಬಿಸಿಯಾಗುತ್ತವೆ, ನೀವು ಸುಡುವಿಕೆಯನ್ನು ಅನುಭವಿಸುವಿರಿ ಮತ್ತು ಅದು ನಿಮ್ಮನ್ನು ತೊಂದರೆಗೊಳಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವೈರಲ್ ವಿಡಿಯೋದಲ್ಲಿ, ಅಲಪ್ಪುಳದಲ್ಲಿ ಪಿಎಫ್‌ಐ ಸಮಾವೇಶದಲ್ಲಿ ಹುಡುಗನೊಬ್ಬ “ಹಿಂದೂಗಳು ತಮ್ಮ ಅಂತ್ಯಕ್ರಿಯೆಗೆ ಅಕ್ಕಿ ಇಡಬೇಕು ಮತ್ತು ಕ್ರಿಶ್ಚಿಯನ್ನರು ಅವರ ಅಂತಿಮ ಸಂಸ್ಕಾರಕ್ಕೆ ಧೂಪ ಹಾಕಬೇಕು, ನೀವು ಮರ್ಯಾದೆಯಿಂದ ಬದುಕಿದರೆ, ನೀವು ನಮ್ಮ ಭೂಮಿಯಲ್ಲಿ ಬದುಕಬಹುದು ಮತ್ತು ನೀವು ನಮ್ಮ ನೆಲದಲ್ಲಿ ಬದುಕಬಹುದು ಎಂದು ಹೇಳಿದ್ದ. ಪಿಎಫ್‌ಐ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಶುಕ್ರವಾರ 18 ಮಂದಿಯನ್ನು ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

ಮೇ 21 ರಂದು ಅಲಪ್ಪುಳದಲ್ಲಿ ನಡೆದ ಸಮಾವೇಶದ ಪ್ರಚೋದನಕಾರಿ ಘೋಷಣೆಗಳಿಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.
ಇದಕ್ಕೂ ಮುನ್ನ ಮಂಗಳವಾರ ಮಾತನಾಡಿದ ಪಿಎಫ್‌ಐ ರಾಜ್ಯಾಧ್ಯಕ್ಷ ಸಿಪಿ ಮುಹಮ್ಮದ್ ಬಶೀರ್, ಈ ಘೋಷಣೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧವಾಗಿತ್ತು. ತಮ್ಮ ಪಕ್ಷವು ಆರ್‌ಎಸ್‌ಎಸ್ ಭಯೋತ್ಪಾದನೆ ವಿರುದ್ಧ ಹೋರಾಟ ಮತ್ತು ಪ್ರತಿರೋಧವನ್ನು ಮುಂದುವರಿಸಲಿದೆ ಎಂದು ಹೇಳಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement