22 ಮಂದಿಯೊಂದಿಗೆ ನಾಪತ್ತೆಯಾಗಿದ್ದ ವಿಮಾನ ನೇಪಾಳದ ಮುಸ್ತಾಂಗ್ ಜಿಲ್ಲೆಯ ನದಿಯ ಸಮೀಪ ಪತನ

ಕಠ್ಮಂಡು (ನೇಪಾಳ) : ಇಂದು, ಭಾನುವಾರ ಬೆಳಿಗ್ಗೆ ಮಾಪತ್ತೆಯಾಗಿದ್ದ ನೇಪಾಳದ ತಾರಾ ಏರ್‌ 9-ಎನ್​ಎಇಟಿ ವಿಮಾನವು ಮುಸ್ತಾಂಗ್​ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಚೆ ನದಿಯ ಸಮೀಪಪತನಗೊಂಡಿದೆ ಎಂಬ ವರದಿಗಳು ತಿಳಿಸಿವೆ.
ಸ್ಥಳೀಯರ ಮಾಹಿತಿಯ ಆಧಾರದ ಮೇರೆಗೆ ನೇಪಾಳದ ಸೇನೆ ವಿಮಾನ ಪತನವಾದ ಸ್ಥಳದತ್ತ ದೌಡಾಯಿಸಿದೆ ಎಂದು ಸೇನೆಯ ವಕ್ತಾರ ನಾರಾಯಣ ಸಿಲ್ವಾಲ್​ ತಿಳಿಸಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಪೋಖರಾದಿಂದ ಟೇಕ್​ ಆಫ್​ ಆದ ಕೆಲ ನಿಮಿಷದಲ್ಲೇ ಲೇಟೆಪಾಸ್ ಪ್ರದೇಶದಲ್ಲಿ ಈ ವಿಮಾನ ತನ್ನ ಸಂಪರ್ಕ ಕಳೆದುಕೊಂಡಿತ್ತು. ಇದರ ಪತ್ತೆಗಾಗಿ ಈ ಮಾರ್ಗದಲ್ಲಿ ಎರಡು ಖಾಸಗಿ ಹೆಲಿಕಾಪ್ಟರ್‌ಗಳು ಧಾವಿಸಿದ್ದವು. ಕೆಲ ಗಂಟೆಗಳ ಹುಡುಕಾಟದ ನಂತರ ವಿಮಾನವು ಈಗ ಲಾಮ್ಚೆ ನದಿ ಸಮೀಪದಲ್ಲಿ ಪತ್ತೆಯಾಗಿದೆ.
ವಿಮಾನದಲ್ಲಿ ನಾಲ್ವರು ಭಾರತೀಯರು ಮತ್ತು ಮೂವರು ಜಪಾನ್ ಪ್ರಜೆಗಳು, ಇಬ್ಬರು ಜರ್ಮನ್​ ಪ್ರಜೆಗಳು ಮತ್ತು 13 ನೇಪಾಳದ ಪ್ರಜೆಗಳು ಹಾಗೂ ಮೂವರು ವಿಮಾನದ ಸಿಬ್ಬಂದಿ ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದರು.

ವಿಮಾನವು ಪಶ್ಚಿಮ ಪರ್ವತ ಪ್ರದೇಶದ ಜೋಮ್ಸಮ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10:15 ಕ್ಕೆ ಇಳಿಯಬೇಕಿತ್ತು.
ಪೋಖರಾ-ಜೋಮ್ಸೋಮ್ ವಾಯು ಮಾರ್ಗದಲ್ಲಿ ಘೋರೆಪಾನಿಯ ಮೇಲಿನ ಆಕಾಶದಿಂದ ವಿಮಾನವು ಸಂಪರ್ಕವನ್ನು ಕಳೆದುಕೊಂಡಿತು ಎಂದು ವಾಯುಯಾನ ಮೂಲಗಳು ತಿಳಿಸಿವೆ.
ಜೋಮ್ಸಮ್ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ಪ್ರಕಾರ, ಜೋಮ್ಸಮ್‌ನ ಘಾಸಾದಲ್ಲಿ ದೊಡ್ಡ ಶಬ್ದದ ಬಗ್ಗೆ ಅವರು ದೃಢೀಕರಿಸದ ವರದಿ ಹೊಂದಿದ್ದರು. ಏರ್‌ಲೈನ್‌ನ ಮೂಲಗಳ ಪ್ರಕಾರ, ಪೊಖರಾ-ಜೋಮ್ಸೋಮ್ ಮಾರ್ಗದಲ್ಲಿಮಳೆಯೊಂದಿಗೆ ಮೋಡ ಕವಿದ ವಾತಾವರಣವಿದೆ. ಇದು ಶೋಧ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿದೆ. ಸಾವುನೋವಿನ ವರದಿಗಳ ಬಗ್ಗೆ ಇನ್ನೂ ತಿಳಿದುಬಂದಿಲ್ಲ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಪ್ರವಾದಿ ಅವಮಾನ ಆರೋಪ: ಪಾಕಿಸ್ತಾನದಲ್ಲಿ ಪ್ರತಿಭಟನಾಕಾರರಿಂದ ಸ್ಯಾಮ್‌ಸಂಗ್ ಜಾಹೀರಾತು ಫಲಕಗಳು ಧ್ವಂಸ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ