ಕಾಂಗ್ರೆಸ್ ಸಹವಾಸವೇ ಸಾಕು ಎಂದು ಕೈ ಮುಗಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್…!

ಪಾಟ್ನಾ: ಕಾಂಗ್ರೆಸ್ ಸೇರ್ಪಡೆ ಅಥವಾ ಪಕ್ಷದಲ್ಲಿ ನಿರ್ಣಾಯಕ ಪಾತ್ರವಹಿಸುವ ಪ್ರಯತ್ನ ಮಾಡಿ ಕೊನೆಗೆ ಅದರಲ್ಲಿ ವಿಫಲವಾಗಿರುವ ಪ್ರಖ್ಯಾತ ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್, ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಮಾತುಕತೆ ಅಥವಾ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ವೈಶಾಲಿಯಲ್ಲಿ ನಡೆದ ಸಭೆಯಲ್ಲಿ ಪ್ರಶಾಂತ ಕಿಶೋರ್‌ ಮಾತನಾಡುತ್ತಿದ್ದರು. ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಜೊತೆ ಹೆಜ್ಜೆ ಹಾಕುವುದಿಲ್ಲ ಎಂದು ಅವರು ಕೈಮುಗಿದು ಹೇಳಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತಷ್ಟು ಪಾತಾಳಕ್ಕೆ ಕುಸಿಯಲಿದೆ. ಅಲ್ಲದೇ ತನ್ನೊಂದಿಗೆ ಇತರರನ್ನೂ ಪಾತಾಳಕ್ಕೆ ತಳ್ಳಲಿದೆ. ಹೀಗಾಗಿ ಆ ಪಕ್ಷದಿಂದ ಅಂತರ ಕಾಯ್ದುಕೊಳ್ಳುವುದು ರಾಜಕೀಯ ಪಕ್ಷಗಳಿಗೆ ಸೂಕ್ತ ಎಂದು ಅನಿಸುತ್ತದೆ. ನಾನು ಕಾಂಗ್ರೆಸ್‌ನೊಂದಿಗೆ ಹೋದರೂ ಪಾತಾಳಕ್ಕೆ ಕುಸಿಯಲಿದ್ದೇನೆ ಎಂದು ಅವರು ಹೇಳಿದ್ದಾರೆ.

advertisement

2015ರಲ್ಲಿ ನಾವು ಬಿಹಾರದಲ್ಲಿ ಗೆಲುವು ಸಾಧಿಸಿದೆವು. 2017ರಲ್ಲಿ ಪಂಜಾಬ್, 2019ರಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿದೆವು. 11 ವರ್ಷಗಳ ಅವಧಿಯಲ್ಲಿ ನಾವು 2017ರಲ್ಲಿ ಉತ್ತರ ಪ್ರದೇಶದಲ್ಲಿ ಸೋಲು ಅನುಭವಿಸಿದೆವು. ಇದೇ ಕಾರಣಕ್ಕೆ ಇನ್ನೆಂದೂ ಕಾಂಗ್ರೆಸ್‌ನೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳದಿರುವ ನಿರ್ಣಯ ಮಾಡಲಾಗಿದೆ ಎಂದು ಅವರು ಹೇಳಿದರು.
ಇತ್ತೀಚಿಗೆ ರಾಜಸ್ಥಾನದಲ್ಲಿ ನಡೆದ ‘ಕಾಂಗ್ರೆಸ್ ಚಿಂತನ ಶಿಬಿರವನ್ನು ಒಂದು ವಿಫಲ ಪ್ರಯತ್ನವಷ್ಟೇ ಎಂದು ವ್ಯಾಖ್ಯಾನಿಸಿರುವ ಪ್ರಶಾತ್ ಕಿಶೋರ್, ಈ ಶಿಬಿರದಿಂದ ಕಾಂಗ್ರೆಸ್ ಸಮಸ್ಯೆಗಳು ಬಗೆಹರಿದಿಲ್ಲ, ಅಲ್ಲದೆ,ಮುಂಬರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್

ಓದಿರಿ :-   ನ್ಯೂಯಾರ್ಕ್ ನಗರದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಧ್ವಂಸ: ಎರಡು ವಾರಗಳಲ್ಲಿ ಇದು ಎರಡನೇ ದಾಳಿ

ವಿಧಾನಸಭೆ ಚುನಾವಣೆಗಳಲ್ಲೂ ಕಾಂಗ್ರೆಸ್ ಸೋಲು ಅನುಭವಿಸಲಿದೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನ ನಡೆದಿತ್ತು. ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಮತ್ತು ಪ್ರಶಾಂತ್ ಕಿಶೋರ್ ನಡುವೆ ಹಲವು ಸುತ್ತಿನ ಮಾತುಕತೆಗಳೂ ನಡೆದಿದ್ದವು. ಆದರೆ ಪಕ್ಷದ ಕುಟುಂಬ ರಾಜಕಾರಣ ನೀತಿಯನ್ನು ಒಪ್ಪದ ಪ್ರಶಾಂತ್ ಕಿಶೋರ್, ತಮಗೆ ಉನ್ನತ ಹುದ್ದೆಯ ಬೇಡಿಕೆ ಮಂಡಿಸಿದ್ದರು.
ಅಂತಿಮವಾಗಿ ಅವರು ಕಾಂಗ್ರೆಸ್ ಪಕ್ಷ ಸೇರದಿರುವ ನಿರ್ಧಾರ ಮಾಡಿದ್ದರು. ಆದರೆ ಪ್ರಶಾಂತ್ ಕಿಶೋರ್ ಅವರ ಕೆಲವು ಆಲೋಚನೆಗಳನ್ನು ಚುನಾವಣಾ ರಾಜಕೀಯದಲ್ಲಿ ಜಾರಿಗೆ ತರಲು ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement