ಮಂಡ್ಯದಲ್ಲಿ ಮಗಳ ಕೊಳೆತ ಶವದ ಜೊತೆ 4 ದಿನ ಕಳೆದ ತಾಯಿ…!

posted in: ರಾಜ್ಯ | 0

ಮಂಡ್ಯ: ನಾಲ್ಕು ದಿನದ ಹಿಂದೆ ಮೃತಪಟ್ಟ ಮಗಳ ಶವದ ಪಕ್ಕದಲ್ಲೇ ತಾಯಿ ಮಲಗಿರುವ ಘಟನೆ ಮಂಡ್ಯ ನಗರದ ಹಾಲಹಳ್ಳಿ ಬಡಾವಣೆಯ ಹೊಸ ತಮಿಳು ಕಾಲೋನಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಹಾಲಹಳ್ಳಿ ಬಡಾವಣೆಯ ರೂಪಾ (30) ಎಂಬ ಮಹಿಳೆ ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ಮೃತಪಟ್ಟಿದ್ದರು. ಕಾರಣ ತಿಳಿದಿಲ್ಲ. ಆದರೆ ಮಗಳ ಶವದ ಮುಂದೆಯೇ ತಾಯಿ ನಾಗಮ್ಮ ಮಲಗಿದ್ದಾರೆ. 10 ವರ್ಷಗಳ ಹಿಂದೆ ಮದುವೆಯಾಗಿದ್ದ ರೂಪಗೆ ಇಬ್ಬರು ಮಕ್ಕಳು ಸಹ ಇದ್ದರು ಎಂದು ಹೇಳಲಾಗಿದೆ. ಆದರೆ ಕೌಟುಂಬಿಕ ಕಲಹದಿಂದ 5 ವರ್ಷಗಳ ಹಿಂದೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ತಾಯಿ ನಾಗಮ್ಮ ಮನೆಯಲ್ಲಿ ವಾಸವಾಗಿದ್ದರು. ಹಾಗೂ ಹೋಂ ಗಾರ್ಡ್ ಕೆಲಸಕ್ಕೆ ಸಹ ಹೋಗುತ್ತಿದ್ದರು. ಆದರೆ ಕಳೆದ ವರ್ಷ ಈ ಕೆಲಸವನ್ನು ಬಿಟ್ಟಿದ್ದರು ಎಂದು ಹೇಳಲಾಗಿದೆ.

advertisement

ತಾಯಿ ಮಗಳು ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.  ತಾಯಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಇವರ ಮನೆಯಿಂದ ಯಾವುದೇ ಶಬ್ದ ಕೇಳಿ ಬಂದಿರಲಿಲ್ಲ. ಆದರೆ ಕೊಳೆತ ವಾಸನೆ ಬರುತ್ತಿತ್ತು. ಸೋಮವಾರ ನಾಗಮ್ಮ ಮನೆಯಿಂದ ನೊಣಗಳು ಹಾರಡುವುದು ಹಾಗೂ ದುರ್ವಾಸನೆ ಬರುವುದು ಕಂಡ ನಂತರ ಸ್ಥಳೀಯರಿಗೆ ಸಂಶಯ ಬಂದಿದೆ.
ನಂತರ ನಾಗಮ್ಮ ಮನೆಯ ಬಾಗಿಲನ್ನು ಮುರಿದು ನೋಡಿದಾಗ ರೂಪ ಶವ ಕೊಳೆತ ಸ್ಥಿತಿಯಲ್ಲಿತ್ತು ಹಾಗೂ ಆ ಶವದ ಪಕ್ಕ ತಾಯಿ ನಾಗಮ್ಮ ಕುಳಿತಿದ್ದರು. ಇದನ್ನು ನೋಡಿ ಜನ ಬೆಚ್ಚಿದ್ದಾರೆ. ನಂತರ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ರೂಪ ಹೇಗೆ ಮೃತಪಟ್ಟಿದ್ದಾರೆ ಎಂಬುದು ಗೊತ್ತಾಗಿಲ್ಲ. ಈ ಕುರಿತು ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಹಾಯಕ ಆಯುಕ್ತರಿಂದ ಧ್ವಜಾರೋಹಣ; ಸಚಿವ ಅಶೋಕ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement