ಪಶ್ಚಿಮ ಬಂಗಾಳದ ಪ್ರೇಮಿ ಭೇಟಿಯಾಗಲು ಗಂಟೆಗಟ್ಟಲೆ ನದಿಯಲ್ಲಿ ಈಜಿ, ಹುಲಿಗಳಿರುವ ಕಾಡಿನಲ್ಲಿ ಒಬ್ಬಳೇ ಬಂದ ಬಾಂಗ್ಲಾದೇಶದ ಯುವತಿ…! ಮದುವೆಯಾಯ್ತು..ಬಂಧನವೂ ಆಯ್ತು..!

ಕೋಲ್ಕತ್ತಾ: ಪ್ರೇಯಸಿಯೊಬ್ಬಳು ಆನ್‌ಲೈನ್‌ನಲ್ಲಿ ಪರಿಚಯವಾದ ನಂತರ ಪ್ರಿಯಕರನಾದ ವ್ಯಕ್ತಿಯನ್ನು ಭೇಟಿಯಾಗಲು ಜೀವದ ಹಂಗು ತೊರೆದು ನದಿಯನ್ನು ಒಂದು ಗಂಟೆ ಈಜಿ ಹಲಿಯಿರುವ ಅಭಯಾರಣ್ಯದಲ್ಲಿ ಒಬ್ಬಳೇ ನಡೆದು ಬಾಂಗ್ಲಾದೇಶದಿಂದ ಭಾರತದ ಪಶ್ಚಿಮ ಬಂಗಾಳಕ್ಕೆ ಬಂದಿದ್ದಾಳೆ. ಆದರೆ ಅವಳಿಗೆ ಪ್ರೇಮಿ ಸಿಕ್ಕಿ ಅವರಿಬ್ಬರು ದೇವಸ್ಥಾನದಲ್ಲಿ ಮದುವೆಯಾದರೂ ಈಗ ಅವಳನ್ನು ಬಂಧಿಸಲಾಗಿದೆ…!

22 ವರ್ಷದ ಬಾಂಗ್ಲಾದೇಶದ ಯುವತಿಯೊಬ್ಬಳು ಭಾರತದ ಪಶ್ಚಿಮ ಬಂಗಾಳದ ತನ್ನ ಗೆಳೆಯನನ್ನು ಮದುವೆಯಾಗಲು ಸುಂದರ್‌ಬನ್ಸ್‌ನ ಗಡಿಯುದ್ದಕ್ಕೂ ಈಜಿದಳು. ಆನ್‌ಲೈನ್‌ನಲ್ಲಿ ಅರಳಿದ ಪ್ರೀತಿಯಿಂದ 22 ವರ್ಷದ ಕೃಷ್ಣಾ ಮಂಡಲ್ ತನ್ನ ಫೇಸ್‌ಬುಕ್ ಗೆಳೆಯ ಅಭಿಕ್ ಮಂಡಲ್ ಅವರನ್ನು ಭೇಟಿ ಮಾಡಲು ಭಾರತ-ಬಾಂಗ್ಲಾದೇಶದ ಗಡಿಯನ್ನು ದಾಟಿ ಬಂದಳು.
ಇಬ್ಬರೂ ಪರಸ್ಪರ ಮದುವೆಯಾಗಲು ನಿರ್ಧರಿಸಿದರು. ಆದರೆ, ಅಭಿಕ್ ಮಂಡಲ್ ಬಳಿ ಪಾಸ್‌ಪೋರ್ಟ್ ಅಥವಾ ಬಾಂಗ್ಲಾದೇಶವನ್ನು ತಲುಪಲು ಯಾವುದೇ ಮಾರ್ಗವಿಲ್ಲದ ಕಾರಣ, ಯುವತಿ ಕೃಷ್ಣಾ ಮಂಡಲ್ ಅವಳೇ ರಿಸ್ಕ್‌ ತೆಗೆದುಕೊಳ್ಳಲು ನಿರ್ಧರಿಸಿ ಅಕ್ರಮವಾಗಿ ಗಡಿ ದಾಟುವುದನ್ನು ಆಯ್ಕೆ ಮಾಡಿಕೊಂಡಳು ಸುಂದರಬನದ ಮೂಲಕ ಏಕಾಂಗಿಯಾಗಿ ನಡೆಯಲು ಪ್ರಾರಂಭಿಸಿದಳು. ಬಂಗಾಳ ಹುಲಿಗಳಿರುವ ಹಾದಿಯ ಮೂಲಕ ಅವಳು ಕಾಡಿನಲ್ಲಿ ನಡೆಯುವ ಧೈರ್ಯ ಮಾಡಿದಳು. ನಂತರ ಯುವತಿ ತನ್ನ ಗಮ್ಯಸ್ಥಾನವನ್ನು ತಲುಪಲು ಗಡಿಯುದ್ಧಕ್ಕೂ ಇರುವ ಮಾಲ್ಟಾ ನದಿಯನ್ನು ಒಂದು ಗಂಟೆಗಳ ಕಾಲ ಈಜಿ ಗಡಿ ದಾಟಿ ಬಂದಿದ್ದಾಳೆ…!

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

ನಂತರ ಕೃಷ್ಣಾ ಮಂಡಲ್ ರಾಜ್ಯದ ದಕ್ಷಿಣ 24 ಪರಗಣ ಜಿಲ್ಲೆಯ ಕೈಖಾಲಿ ಗ್ರಾಮವನ್ನು ಪ್ರವೇಶಿಸಿದ್ದಾಳೆ. ಅವಳು ಅಂತಿಮವಾಗಿ ನರೇಂದ್ರಪುರದ ರಾನಿಯಾ ನಿವಾಸಿ ಅಭಿಕ್ ಮಂಡಲ್ ಅವರನ್ನು ಭೇಟಿಯಾದರು. ಅಭಿಕ್‌ ಮಂಡಲ್ ತಂದಿದ್ದ ಕಾರಿನಲ್ಲಿ ಇಬ್ಬರು ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನಕ್ಕೆ ತೆರಳಿದ್ದರು. ದೇವಾಲಯದಲ್ಲಿ, ದಂಪತಿ ಮದುವೆಯಾದರು ಮತ್ತು ಶೀಘ್ರದಲ್ಲೇ ಕೃಷ್ಣಾ ಮಂಡಲಳ ಸಾಹಸದ ಸುದ್ದಿ ಸುಮುತ್ತಲಿನ ಊರಲ್ಲೂ ಹರಡಿತು.
ನಂತರ ಯುವತಿಯೊಬ್ಬಳು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಸುದ್ದಿ ಪೊಲೀಸರಿಗೂ ತಲುಪಿತು. ಇದರ ನಂತರ, ನರೇಂದ್ರಪುರ ಪೊಲೀಸರು ಸೋಮವಾರ ರಾನಿಯಾ ಮೇಲೆ ದಾಳಿ ನಡೆಸಿದರು ಮತ್ತು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಯುವತಿಯನ್ನು ಬಂಧಿಸಲಾಯಿತು. ಮೂಲಗಳ ಪ್ರಕಾರ, ಮಹಿಳೆಯನ್ನು ಬಾಂಗ್ಲಾದೇಶ ಹೈಕಮಿಷನ್‌ಗೆ ಹಸ್ತಾಂತರಿಸಬಹುದು ಎಂದು ಹೇಳಲಾಗಿದೆ.
2021ರಲ್ಲಿ ಇದೇ ರೀತಿಯ ಘಟನೆಯಲ್ಲಿ, ಪಶ್ಚಿಮ ಬಂಗಾಳದ ನಾಡಿಯಾದ ಬಲ್ಲವ್‌ಪುರ ಗ್ರಾಮದ 24 ವರ್ಷದ ನಿವಾಸಿ ಬಾಂಗ್ಲಾದೇಶದ ನೆರೈಲ್‌ನ ತನ್ನ 18 ವರ್ಷದ ಪ್ರೇಮಿಯನ್ನು ಭೇಟಿಯಾಗಲು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಅಕ್ರಮವಾಗಿ ಅಂತಾರಾಷ್ಟ್ರೀಯ ಗಡಿ ದಾಟಿದ್ದಕ್ಕಾಗಿ ಆನ್‌ಲೈನ್‌ನಲ್ಲಿ ಪರಸ್ಪರ ಭೇಟಿಯಾಗಿದ್ದ ದಂಪತಿಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಂಧಿಸಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement