ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಆಸ್ಪತ್ರೆ ಆವರಣದಲ್ಲಿ ಐವರು ಸಾವು

ಓಕ್ಲೊಹೋಮಾ: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ, ಬಂದೂಕುಧಾರಿಯೊಬ್ಬ ಆಸ್ಪತ್ರೆ ಆವರಣದಲ್ಲಿಯೇ ಗುಂಡಿನ ಸುರಿಮಳೆಗೈದಿದ್ದು, ನಾಲ್ವರು ನಾಗರಿಕರು ಸಾವಿಗೀಡಾಗಿದ್ದಾರೆ. ದಾಳಿಕೋರನೂ ಸಾವಿಗೀಡಾಗಿದ್ದಾನೆ.
ಓಕ್ಲೊಹೋಮಾದ ಟಲ್ಸಾದಲ್ಲಿರುವ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದೂಕು ಹಿಡಿದುನಿಂತಿರುವುದಾಗಿ ಕರೆ ಬಂದಿತು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿಯೇ ಬಂದೂಕುದಾರಿ ಜನರ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ಸ್ಥಳದಲ್ಲಿಯೇ ಪೊಲೀಸ್ ಅಧಿಕಾರಿ ಸೇರಿದಂತೆ ದಂಪತಿ ಸಾವಿಗೀಡಾಗಿದ್ದಾರೆ.

ಕಳೆದ ವಾರವಷ್ಟೇ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಗುಂಡಿಕ್ಕಿ ಕೊಂದ ಘಟನೆ ಟೆಕ್ಸಾನ್ ನಲ್ಲಿ ನಡೆದಿತ್ತು. ಇದೀಗ ಈ ಘಟನೆ ಸಂಭವಿಸಿದ್ದು ಅಮೆರಿಕನ್ನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಅಲ್ಲದೆ ಬಂದೂಕು ನಿಯಂತ್ರಣ ಕುರಿತು ಚರ್ಚೆ ನಡೆಯುತ್ತಿದೆ.
ನಾವು ಸತ್ತಿರುವ ನಾಲ್ಕು ನಾಗರಿಕರನ್ನು ನೋಡಿದ್ದೇವೆ, ಒಬ್ಬ ಶೂಟರ್ ಸತ್ತಿದ್ದಾನೆ ಮತ್ತು ಅದು ಸ್ವಯಂ ಪ್ರೇರಿತವಾಗಿದೆ ಎಂದು ನಾವು ನಂಬುತ್ತೇವೆ” ಎಂದು ತುಲ್ಸಾ ಪೊಲೀಸ್ ಇಲಾಖೆಯ ಉಪ ಮುಖ್ಯಸ್ಥ ಎರಿಕ್ ಡಾಲ್ಗ್ಲೀಶ್ ಹೇಳಿದ್ದಾರೆ.
ಸೇಂಟ್ ಫ್ರಾನ್ಸಿಸ್‌ ಆಸ್ಪತ್ರೆಯ ಕ್ಲಿನಿಕ್‌ನ ಎರಡನೇ ಮಹಡಿಗೆ ಶೂಟರ್ ತಲುಪಿದ್ದಾನೆ ಎಂದು ತುರ್ತು ಕರೆಗಳು ಬಂದ ನಂತರ ಅಧಿಕಾರಿಗಳು ತಕ್ಷಣವೇ ಪ್ರತಿಕ್ರಿಯಿಸಲಾಗಿದೆ ಎಂದು ಅವರು ಹೇಳಿದರು.
ಎಷ್ಟು ಮಂದಿ ಗಾಯಗೊಂಡಿರಬಹುದು ಎಂಬುದು ಸ್ಪಷ್ಟವಾಗಿಲ್ಲ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement