ದೈವಜ್ಞ ಸಮಾಜದ ಪ್ರಮುಖ, ನಿವೃತ್ತ ಪ್ರಾಂಶುಪಾಲ, ಕರ್ನಾಟಕ ವಿವಿ ಮಾಜಿ ಸಿನೆಟ್‌ ಸದಸ್ಯ ಪ್ರೊ. ಎಸ್‌.ಎಸ್‌. ವೆರ್ಣೇಕರ ನಿಧನ

ಶಿರಸಿ: ದೈವಜ್ಞ ಸಮಾಜದ ಪ್ರಮುಖರು ಹಾಗೂ ಶಿರಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಕರ್ನಾಟಕ ವಿಶ್ವ ವಿದ್ಯಾಲಯದ ಕೌನ್ಸೆಲ್‌ ಹಾಗೂ ಸೆನೆಟ್‌ ಸದಸ್ಯರಾಗಿದ್ದ ಪ್ರೊ. ಶ್ರೀಧರ ಎಸ್‌.ವೆರ್ಣೇಕರ (94) ಅವರು ಗುರುವಾರ ಬೆಳಿಗ್ಗೆ ನಿಧನರಾದರು.
ಮೃತರು ಧುರೀಣೆ ಸಂಧ್ಯಾ ಕುರುಡೇಕರ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಶ್ರೀಧರ ವರ್ಣೆಕರ ಅವರು ಮೂಲತಃ ಕುಮಟಾದ ಹೆಗಡೆಯವರು. ಎಂಎಸ್‌ಸಿ (MSc)ಯಲ್ಲಿ ಕರ್ನಾಟಕ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು.

ವಿಜ್ಞಾನಿಯಾಗುವ ಎಲ್ಲ ಅವಕಾಶವಿದ್ದರೂ ಶಿಕ್ಷಣ ಕ್ಷೇತ್ರದ ಮೇಲಿನ ಪ್ರೀತಿಗಾಗಿ ಉತ್ತರ ಕನ್ನಡ ಜಿಲ್ಲೆಗೇ ವಾಪಸ್‌ ಬಂದ ಅವರು ಕುಮಟಾದ ಕೆನರಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಡೆಮಾನ್ಸ್ಟ್ರೇಟರ್‌ ಆಗಿ ಸೇರಿದರು. ನಂತರ ಶಿರಸಿ ಎಂಎಂ ಆರ್ಟ್‌ ಮತ್ತು ಸೈನ್ಸ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಪ್ರೊ. ಶ್ರೀಧರ ವೆರ್ಣೇಕರ ವೃತಿಯಿಂದ ನಿವೃತ್ತರಾದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಶಿರಸಿ ಸುವರ್ಣ ಕಲಾಕಾರರ ಸಂಘದ ಅಧ್ಯಕ್ಷರಾಗಿ ಹದಿನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು. AKDBS ಉಪಾಧ್ಯಕ್ಷರಾಗಿ, ಶಿರಸಿಯ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಶಿರಸಿಯ ಶ್ರೀ ರಾಘವೇಂದ್ರ ಸೇವಾ ಸಮಿತಿ ಸ್ಥಾಪಕ ಆಧ್ಯಕ್ಷರಾಗಿ, ಅಂಬಾಗಿರಿಯ ಶ್ರೀ ರಾಮಕೃಷ್ಣ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿ, ಶಿರಸಿ ಸುವರ್ಣ ಸೊಸೈಟಿಯ ಅಧ್ಯಕ್ಷರಾಗಿ, ಕರ್ನಾಟಕ ವಿಶ್ವ ವಿದ್ಯಾಲಯದ ಕೌನ್ಸಿಲ್ ಮತ್ತು ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕರ್ನಾಟಕ ಕೊಂಕಣಿ ಸಾಹಿತ್ಯ ಸಮಿತಿಯ ಸ್ಥಾಪಕ ಸದಸ್ಯರೂ ಆಗಿದ್ದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement