ಬೆಳಗಾವಿ : ಸಮೀಪದ ದೇಸೂರ ರೈಲ್ವೆ ಸ್ಟೇಶನ್ ಗೂಡ್ಸ್ ಶೆಡ್ ನ ಗೋದಾಮಿನಿಂದ ರಸಗೊಬ್ಬರ ಚೀಲ ಕಳವು ಮಾಡಿದ್ದ ಐವರನ್ನು ಸೆರೆ ಹಿಡಿಯುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿರುವ 25,93,500 ರೂ.ಗಳ ಮೌಲ್ಯದ ಡಿಎಪಿ ರಸಗೊಬ್ಬರ 810 ಚೀಲಗಳು ಹಾಗೂ 2 ಟ್ರಕ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧಬೆಳಗಾವಿ ತಾಲೂಕು ಹಾಲಗಿಮರಡಿಯ ನಾಗರಾಜ ಈರಣ್ಣ ಪಟಾತ(21), ಖಾನಾಪುರ ತಾಲೂಕಿನ ಲಕ್ಕೇಬೈಲ್ ಗ್ರಾಮದ ಪಂಡಿತ್ ಕಲ್ಲಪ್ಪ ಸನದಿ (37), ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದ ವಸಿಮ್ ಇಸ್ಮಾಯಿಲ್ ಮಕಾಂದಾರ್ (23), ಖಾನಾಪುರ ತಾಲೂಕಿನ ಲಕ್ಕೇಬೈಲ್ ಗ್ರಾಮದ ಮಂಜುನಾಥ ಸೋಮಪ್ಪ ಹಮ್ಮನ್ನರ (30)ಹಾಗೂ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಗಜಬರಲಿ ಗೌಸ್ ಮುದ್ದಿನ್ ಜಿಡ್ಡಿಮನಿ(39)ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಡಿಎಪಿ ರಸಗೊಬ್ಬರ ಚೀಲಗಳು ಕಳುವಾಗಿರುವ ಬಗ್ಗೆ ಹೊನಗಾ ಗ್ರಾಮದ ಶಿವಾಜಿ ಬಾಳಾರಾಮ ಆನಂದಾಚೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆಗಿಳಿದಿದ್ದರು. ಬೆಳಗಾವಿ ಗ್ರಾಮೀಣ ಪಿಐ ಶ್ರೀನಿವಾಸ ಹಾಂಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ವಾರದ ಹಿಂದಷ್ಟೇ ದೇಸೂರು ರೈಲ್ವೆ ಗೋದಾಮಿನಿಂದ ಕಳವಾಗಿದ್ದ ರಸಗೊಬ್ಬರ ಚೀಲಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಸಾಧಿಸಿದ್ದಾರೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ | |
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ